ಕೈಕಂಬ: ಮನೆಯಂಗಳಕ್ಕೆ ಕಾಡಾನೆ
Team Udayavani, Aug 8, 2018, 5:41 PM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಕೈಕಂಬದಲ್ಲಿ ಸೋಮವಾರ ತಡರಾತ್ರಿ ಕಾಡಾನೆಯೊಂದು ಮನೆಯಂಗಳಕ್ಕೆ ಬಂದು ಕೃಷಿಯನ್ನು ಹಾಳುಗೆಡವಿ ಕಾಡಿಗೆ ಮರಳಿದೆ.
ರಾತ್ರಿ 1 ಗಂಟೆ ಸುಮಾರಿಗೆ ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ತಾಗಿ ಕೊಂಡಿ ರುವ ಪದ್ಮನಾಭ ಕಳಿಗೆ ಅವರ ಜಮೀನಿನ ಮುಖ್ಯ ಗೇಟನ್ನು ಮುರಿದು ಆನೆ ಅಂಗಳ ಪ್ರವೇಶಿಸಿದೆ. ಗೇಟು ಮುರಿಯುತ್ತಿರುವ ಸದ್ದು ಕೇಳಿ ಎಚ್ಚರವಾದ ಪದ್ಮನಾಭ ಅವರು ಮನೆ ಹೊರಗಿನ ದೀಪ ಉರಿಸಿ ಕಿಟಕಿಯಿಂದ ನೋಡಿದಾಗ ಅಂಗಳದಲ್ಲಿ ಆನೆ ನಿಂತಿದ್ದು ಕಾಣಿಸಿತು.
ಅಂಗಳದಲ್ಲಿ ಓಡಾಡಿದ ಆನೆ ಮನೆ ಮುಂದೆ ಇರುವ ಬಾಳೆ ಗಿಡಗಳನ್ನು ಎಳೆದು ತಿಂದಿತು. ತೋಟದ ಮೂಲಕ ನೆರೆಯ ಕೃಷಿಕ ನಾರಾಯಣ ಗೌಡ ಕಳಿಗೆ ಅವರ ತೋಟಕ್ಕೆ ತೆರಳಿತು. ಅಲ್ಲಿಂದ ಮುಂದಕ್ಕೆ ಗುಂಡಿಗದ್ದೆ, ಕೋಟೆ ಬಾಗಿಲು ಮೂಲಕ ಹಲವರು ತೋಟಗಳಲ್ಲಿ ಹಾನಿ ಮಾಡುತ್ತಾ ಪಕ್ಕದ ಅರಣ್ಯ ಸೇರಿದೆ. ಮನೆಯ ಅಂಗಳದಲ್ಲಿ ಆನೆಯ ಹೆಜ್ಜೆ ಗುರುತು ಕಾಣಿಸುತ್ತಿದೆ.
ಇಲ್ಲಿ ಹೆದ್ದಾರಿಯ ಒಂದು ಬದಿಯಲ್ಲಿ ಎತ್ತರದ ಬರೆ ಇದ್ದು ಅಲ್ಲಿಂದ ಆನೆ ಇಳಿದು ಬರುವ ಸಾಧ್ಯತೆ ಕಡಿಮೆ. ರಾಜ್ಯ ಹೆದ್ದಾರಿಯ ಮೂಲಕವೇ ಮನೆಯಂಗಳಕ್ಕೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ಸಮಯದ ಹಿಂದೆ ಇಲ್ಲೇ ಸಮೀಪದಲ್ಲಿ ಪ್ರವಾಸಿಗರ ಆಮ್ನಿ ಕಾರಿನ ಮೇಲೆ ಆನೆಯೊಂದು ದಾಳಿ ನಡೆಸಿತ್ತು. ಅದೇ ಆನೆ ಮತ್ತೆ ಆ ದಾರಿಯಾಗಿ ಬಂದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಪಾರ ಹಾನಿ
ತೋಟಗಳಿಗೆ ನುಗ್ಗಿದ ಆನೆ ಫಲ ಭರಿತ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ತಿಂದು, ತುಳಿದು ಹಾನಿ ಮಾಡಿದೆ. ಸಮೀಪದ ಕುಕ್ಕಾಜೆ, ಮುಳ್ಳುಗುಡ್ಡೆ ಕಾಳಪ್ಪಾಡಿ ಪರಿಸರದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ರಾತ್ರಿ ಹೊತ್ತು ಸಂಚರಿಸಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಬೀದಿ ದೀಪಗಳೂ ಕೆಟ್ಟು ಹೋಗಿದ್ದು ರಾತ್ರಿ ವೇಳೆ ನಡೆದು ಹೋಗುವುದು ಅಪಾಯಕಾರಿಯಾಗಿದೆ. ಈ ಬಗ್ಗೆ ಸ್ಥಳಿಯಾಡಳಿತದ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.