ತ್ರಿವೇಣಿಗೆ ಬಾಳು ನೀಡಿದ ಬಾಲಾಜಿ
Team Udayavani, Aug 9, 2018, 11:16 AM IST
ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸುದೈವಿ(ಅನಾಥ) ಹೆಣ್ಣುಮಗಳ ಕಲ್ಯಾಣ ಮಹೋತ್ಸವವನ್ನು ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ನಡೆಸಿಕೊಟ್ಟರು. ಸುದೈವಿ ಹೆಣ್ಣು ಮಗಳಾದ ತ್ರಿವೇಣಿ ಐದು ವರ್ಷದವಳಾಗಿದ್ದಾಗ ತಾಯಿ ತೀರಿಕೊಂಡಳು.
ನಂತರ ತಂದೆಗೆ ಹೆಣ್ಣುಮಕ್ಕಳು ಬೇಡವಾದ ಕಾರಣ ಅವಳನ್ನು ಶ್ರೀಮಠದಲ್ಲಿ ತಂದುಬಿಟ್ಟಾಗ ಪೂಜ್ಯರು ಆ ಮಗುವನ್ನು ಅತ್ಯಂತ ಸಂತೋಷದಿಂದ ತೆಗೆದುಕೊಂಡು ಶ್ರೀಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ ಆವರಣದಲ್ಲಿ ನಡೆಯುತ್ತಿರುವ ಸುದೈವಿ(ಅನಾಥ) ಮಕ್ಕಳ ಕೇಂದ್ರದಲ್ಲಿ ಪಾಲನೆ-ಪೋಷಣೆ ಜತೆಗೆ ವಿದ್ಯಾಭ್ಯಾಸ ಮಾಡಿಸಿದರು. ಈಗ ತ್ರಿವೇಣಿಗೆ 20 ವರ್ಷವಾಗಿದೆ. ಪೂಜ್ಯರೆ ವರ ನೋಡಿ ಒಳ್ಳೆಯ ಮನೆತನದ ವರನೊಂದಿಗೆ ಮದುವೆ ಮಾಡಿಸಿದ್ದಾರೆ.
ಪೂಜ್ಯರ ಸನ್ನಿಧಾನದಲ್ಲಿ ಮಹಾರಾಷ್ಟ್ರದ ನಾಂದೇಡ ಜಿಲ್ಲೆ ಉಮರಿ ತಾಲೂಕಿನ ಪ್ರತಿಷ್ಠಿತ ಮನೆತನದ ರಾಮಕೀಶನ ಹಾಗೂ ವಿಮಲಾಬಾಯಿ ದಮಕೊಂಡವಾರ ಅವರ ಪುತ್ರ ಬಾಲಾಜಿ ಅವರೊಂದಿಗೆ ತ್ರಿವೇಣಿ ಅವರ ಕಲ್ಯಾಣ ಮಹೋತ್ಸವ ಬಸವತತ್ವದ ಪ್ರಕಾರ ಶ್ರೀಮಠದಲ್ಲಿ ಅದ್ಧೂರಿಯಾಗಿ ನಡೆಯಿತು. ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಬಸವಲಿಂಗ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಕಲ್ಯಾಣ ಮಹೋತ್ಸವಕ್ಕೆ ದಮಕೊಂಡವಾರ ಪರಿವಾರದವರು ಹಾಗೂ ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಮೋಹನ ರೆಡ್ಡಿ, ಜಯಕ್ಕ ಎಂ. ಗಾಂವಕರ, ಅನೀಲಕುಮಾರ ಹಾಲಕುಡೆ, ಮಠದ ಭಕ್ತರಾದ ಚಂದ್ರಕಾಂತ ಬಿರಾದಾರ, ವೈಜಿನಾಥ ಸಿಸಿ, ಶರಣಪ್ಪ ಬಿರಾದಾರ, ಸೂರ್ಯಕಾಂತ ಪಾಟೀಲ, ಅಕ್ಕನಬಳಗದ ಮುಕ್ತಾಬಾಯಿ ಖಂಡ್ರೆ, ಮಹಾನಂದಾ ಮಾಶೆಟ್ಟೆ, ಪ್ರೇಮಲಾ ತೊಂಡಾರೆ ಭಾಗವಹಿಸಿ ನವದಂಪತಿಗೆ ಆಶೀರ್ವದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.