ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಆಟಿಡೊಂಜಿ ದಿನ
Team Udayavani, Aug 9, 2018, 4:13 PM IST
ಮುಂಬಯಿ: ಆಟಿ ತಿಂಗಳು ತುಳುನಾಡಿನ ಸಂಪ್ರದಾಯದಲ್ಲಿ ಯಾವ ಆಚರಣೆ ಇಲ್ಲದೇ ಇದ್ದರೂ ಮುಂಬಯಿಯಲ್ಲಿ ನಾವು ಅದನ್ನು ಒಗ್ಗಟ್ಟಿನ ಸಂಕೇತವಾಗಿ, ವಿವಿಧ ರೀತಿಯ ಅಡುಗೆಗಳನ್ನು ಮನೆಯಲ್ಲೇ ತಯಾರಿಸಿ ಒಂದು ಮನೆಯವರಂತೆ ಕೂಡಿ ತಿನ್ನುವ ಸಂಭ್ರಮವೇ ಈ ಆಟಿಡೊಂಜಿ ದಿನದ ಕೂಟ. ಇವೆಲ್ಲ ಸಂಘ ಸಂಸ್ಥೆಗಳ ಒಂದು ಅಂಗವಾದರೆ ನಮ್ಮ ಸಮಾಜದಲ್ಲಿರುವ ಬಡ ವರ್ಗದವರನ್ನು ಗುರುತಿಸಿ ಅವರಿಗೆ ಸಹಾಯಹಸ್ತವನ್ನು ನೀಡಬೇಕು. ನಾವು ಬಂಟರು ಸ್ವಾಭಿಮಾನಿಗಳು. ಎಷ್ಟೇ ಕಷ್ಟದಲ್ಲಿದ್ದರೂ ಕೈ ಚಾಚುವವರಲ್ಲ. ಅಂತವರನ್ನು ಹುಡುಕಿ ಅವರಿಗೆ ಸಹಾಯ ಮಾಡಿದಾಗಲೇ ನಮ್ಮ ಶ್ರಮ ಸಾರ್ಥಕ. ಆ ನಿಟ್ಟಿನಲ್ಲಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯನಿರತವಾಗಿದ್ದು, ಈ ಸಂಸ್ಥೆಯ ಎಲ್ಲಾ ಸದಸ್ಯರು ಕೈಜೋಡಿಸಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಸಂತೋಷವೂ ನನಗಿದೆ. ನಮ್ಮ ಮಹಿಳಾ ವಿಭಾಗ ಕ್ರೀಯಾಶೀಲವಾಗಿದ್ದು ಸದಾ ಸಮಾಜಪರ ಕಾರ್ಯ ಮಾಡಿ ಹೆಸರು ಮಾಡಿರುವುದು ಖುಷಿಯ ವಿಷಯ ಎಂದು ಬಂಟರ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ| ಆರ್. ಕೆ. ಶೆಟ್ಟಿ ಅವರು ನುಡಿದರು.
ಪೊವಾಯಿಯ ಮಂತ್ರಾ ಡೈನಿಂಗ್‌ನ ಬಾಂಕ್ವೆಟ್ ಹಾಲ್‌ನಲ್ಲಿ ಜರಗಿದ ಆಟಿಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ಎಸ್. ಪಯ್ಯಡೆ, ಉಪಾಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ಸಂಜೀವ ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ರಂಜನಿ ಸುಧಾಕರ ಹೆಗ್ಡೆ, ಜೊತೆ ಕಾರ್ಯದರ್ಶಿ ಮನೋರಮಾ ಎನ್. ಬಿ. ಶೆಟ್ಟಿ, ಜೊತೆ ಕೋಶಾಧಿಕಾರಿ ರತ್ನಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟರ ಸಂಘದ ಕೋಶಾಧಿಕಾರಿ ಸಿಎ ಪ್ರವೀಣ್ ಭೋಜ ಶೆಟ್ಟಿ ಅವರು ಮಾತನಾಡಿ, ನಮ್ಮ ಒಂಭತ್ತು ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಆದಾರ ಸ್ಥಂಭಗಳಿದ್ದಂತೆ. ಬಂಟರ ಸಂಘವನ್ನು ನಮ್ಮ ಹಿರಿಯರು ಹುಟ್ಟುಹಾಕಿದ ಉದ್ದೇಶವನ್ನು ವಿವರಿಸುತ್ತಾ ಅವರು ಬಂಟ್ಸ್ ಎನ್ನುವ ಪದವೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ಆಗಿದೆ. ಇದ್ದವರು ಇರದವರ ಕಷ್ಟಕ್ಕೆ ಸ್ಪಂದಿಸುವುದೇ ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಬೇಕು. ಜೊತೆಜೊತೆಯಲ್ಲಿ ಇಂತಹ ನಮ್ಮ ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳೂ ನಡೆಯಬೇಕು. ಅದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಅವರು ನುಡಿದರು.
ಪ್ರಾದೇಶಿಕ ಸಮಿತಿಗಳ ಸಂಚಾಲಕರಾದ ಡಾ| ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ನನಗೆ ಈ ಸಮಿತಿಯ ಮೇಲೆ ವಿಶೇಷ ಮಮಕಾರ. ಕಾರಣ ನಾನು ಆರಂಭದಲ್ಲಿ ಮಹೇಶ್ ಶೆಟ್ಟಿ ಅವರುಅ ಕಾರ್ಯಾವ ಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆ. ಈ ಸಮಿತಿಯ ಕಾರ್ಯವೈಖರಿಯನ್ನು ಕಂಡರೆ ನನಗೆ ತುಂಬಾ ಖುಷಿಯಾಗುತ್ತದೆ. ಇಂದು ಇಲ್ಲಿ ಆಟಿ ವಿಶೇಷವಾಗಿ ಮನೆಯಲ್ಲಿ ಮಾಡಿ ತಂದ ವಿಶೇಷ ಖಾದ್ಯಗಳೇ ನಿಮ್ಮೆಲ್ಲರ ನಡುವೆ ಇರುವ ಪ್ರೀತಿ, ಒಗ್ಗಟ್ಟಿಗೆ ಸಾಕ್ಷಿ ಎಂದು ನುಡಿದು ಶುಭ ಹಾರೈಸಿದರು.
ಅಂಧೇರಿ-ಬಾಂದ್ರಾ ಪ್ರಾದೆಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಅಪ್ಪಣ್ಣ ಎಂ. ಶೆಟ್ಟಿ ಅವರು ಮಾತನಾಡಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಬಹಳ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಕೆಲಸವನ್ನು ಸಂತೋಷದಿಂದ ಹಾಗೂ ಒಗ್ಗಟ್ಟಿನಿಂದ ಮಾಡಿದಾಗ ಅಲ್ಲಿ ಯಶಸ್ಸು ದೊರೆಯುತ್ತದೆ. ಡಾ| ಆರ್. ಕೆ. ಶೆಟ್ಟಿ ಅವರ ಅಧಿಕಾರಾವಧಿಯಲ್ಲಿ ಸಮಾಜ ಪರ ಕಾರ್ಯ ನಿರಂತರವಾಗಿ ನಡೆಯುತ್ತಿರಲಿ ಎಂದರು.
ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ವನಿತಾ ನೋಂಡಾ ಅವರು ಮಾತನಾಡಿ, ಸಣ್ಣ ಮಟ್ಟದಲ್ಲಿ ಮಹಿಳಾ ವಿಭಾಗದವರು ಈ ಆಟಿಡೊಂಜಿ ದಿನದ ಆಚರಣೆ ಮಾಡುವುದಾಗಿ ನಿರ್ಧರಿಸಿದ್ದೆವು. ಆದರೆ ಮಹಿಳಾ ವಿಭಾಗದ ಕಾರ್ಯದೊಂದಿಗೆ ಕೈ ಜೋಡಿಸಿದ ಡಾ| ಆರ್. ಕೆ. ಶೆಟ್ಟಿಯವರ ತಂಡ, ಯುವ ವಿಭಾಗದ ಸಹಕಾರದಿಂದ ಇಂದು ಈ ಕಾರ್ಯಕ್ರಮ ಇಷ್ಟೊಂದು ಉತ್ತಮ ರೀತಿಯಲ್ಲಿ ಆಚರಿಸಲು ಸಾಧ್ಯವಾಯಿತು. ನಮ್ಮ ಮಹಿಳಾ ವಿಭಾಗದಿಂದ ಅಭೂತಪೂರ್ವ ಸ್ಪಂದನೆ ದೊರೆತಿದ್ದು ಇಂದು ಸುಮಾರು 35ಕ್ಕೊ ಹೆಚ್ಚು ವಿಧದ ಖಾದ್ಯಗಳನ್ನು ತಯಾರಿಸಿ ತಂದಿದ್ದಾರೆ ಅನ್ನುವಾಗ ನಿಜಕ್ಕೂ ಆನಂದವಾಗುತ್ತದೆ. ಕೂಡು ಕುಟುಂಬದಲ್ಲಿ ಬೆಳೆದ ನಾವು ಇಲ್ಲಿಯೂ ಅದೇ ರೀತಿ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಇಂದು ಆದಷ್ಟು ಆಟಿ ತಿಂಗಳಲ್ಲಿ ತಯಾರಿಸುತ್ತಿದ್ದ ತಿಂಡಿ-ತಿನಸುಗಳನ್ನೇ ತಯಾರಿಸಿದ್ದೇವೆ ಎಂದು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಸಮಿತಿಯ ಮಹಿಳಾ ವಿಭಾಗದ ನಿರ್ಗಮನ ಕಾರ್ಯಾಧ್ಯ, ಸಂಚಾಲಕ ಆಗಿರುವ ಸುಜಾತಾ ಗುಣಪಾಲ ಶೆಟ್ಟಿ ಅವರು ಮಾತನಾಡಿ, ನಾನು ಮುಂಬಯಿಯಲ್ಲಿ ಹುಟ್ಟಿ ಬೆಳೆದವಳಾದರೂ ನನಗೆ ಆಟಿ ತಿಂಗಳ ಕಷ್ಟ, ರೋಗ ರುಜಿನಗಳ ಬಗ್ಗೆ ನನ್ನ ಅಮ್ಮ ತಿಳಿಸಿ ಹೇಳಿದ್ದಾರೆ. ಅದೇ ರೀತಿ ನಾವು ಕೂಡಾ ಮಕ್ಕಳಿಗೆ ತಿಳಿಸಬೇಕು. ಈ ತಿಂಗಳು ನಾವು ಸಾಧ್ಯವಾದಷ್ಟು ಸಮಾಜದಲ್ಲಿ ನಿರ್ಗತಿಕರನ್ನು ಹುಡುಕಿ ಅವರಿಗೆ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.
ಸಮಿತಿಯ ಯುವ ವಿಭಾಗ ಕಾರ್ಯಾಧ್ಯಕ್ಷರಾದ ರಕ್ಷಿತ ಶೆಟ್ಟಿ ಅವರು ಮಾತನಾಡಿ, ಹಿಂದೆ ಆಟಿ ತಿಂಗಳ ದಿನಗಳನ್ನು ನೆನೆಸುವುದೆಂದರೆ ಭಯ. ಬಡತನ, ಕಾಯಿಲೆ ಇವೆಲ್ಲವನ್ನು ಬಹಳ ಕಷ್ಟದಿಂದ ಕಳೆಯುತ್ತಿದ್ದ ನೆನಪುಗಳು ಎಲ್ಲರಲ್ಲಿ ಇರುತ್ತದೆ. ಸುಖದ ದಿನದಲ್ಲೂ ಆ ನೆನಪುಗಳೇ ಈಗ ಆಚರಿಸುವ ಆಟಿ ವಿಶೇಷ ಎನ್ನಬಹುದು. ಪಾಲೆದ ಕೆತ್ತೆಯ ಕಷಾಯ ಕುಡಿದರೆ ವರ್ಷ ಪೂರ್ತಿ ಬರುವ ಕಾಯಿಲೆಯಿಂದ ದೂರವಿಡಬಹುದು ಎಂಬ ನಂಬಿಕೆ ನಮ್ಮ ಪೂರ್ವಜರಲ್ಲಿ ಇತ್ತು ಎಂದರು.
ಸಮಿತಿಯ ಉಪಾಧ್ಯಕ್ಷರಾದ ನ್ಯಾಯವಾದಿ ಆರ್. ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಶೆಟ್ಟಿ ಅವರು ವರದಿ ವಾಚನ ಮಾಡಿದರು. ಬಂಟರ ಸಂಘದ ಮಹಿಳಾ ವಿಭಾಗದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಶಾಂತಿ ದಿವಾಕರ ಶೆಟ್ಟಿ ಪ್ರಾರ್ಥನೆ ಹಾಡಿದರು. ಸಮಿತಿಯ ಮಹಿಳಾ ವಿಭಾಗದ ಉಪಾಧ್ಯಕ್ಷರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕರುಣಾಕರ ಶೆಟ್ಟಿ ಅವರು ವಂದಿಸಿದರು.
ಪ್ರಶಾಂತಿ ಡಿ. ಶೆಟ್ಟಿ, ಜಯಂತಿ ಡಿ. ಕೆ. ಶೆಟ್ಟಿ, ವನಿತಾ ನೋಂಡಾ, ಅನಿತಾ ಆರ್. ಕೆ. ಶೆಟ್ಟಿ, ಗೀತಾ ಶೆಟ್ಟಿ, ಸುಜಾತಾ ಗುಣಪಾಲ ಶೆಟ್ಟಿ, ಹರ್ಷಲತಾ ಅಪ್ಪಣ್ಣ ಶೆಟ್ಟಿ, ಶೋಭಾ ರಮೇಶ್ ಸರಿ, ಶೋಭಾ ಶಂಕರ ಶೆಟ್ಟಿ, ವಜ್ರಾ ಪಿ. ಪೂಂಜಾ, ಸವಿತಾ ಕರುಣಾಕರ ಶೆಟ್ಟಿ, ಶೈಲಾ ಎಸ್. ಶೆಟ್ಟಿ, ಗೀತಾ ಆರ್. ಶೆಟ್ಟಿ, ಸುಜಾತಾ ಆರ್. ಶೆಟ್ಟಿ, ನಿಧಿ ವಿ. ಶೆಟ್ಟಿ, ಉಷಾ ವಿ. ಕೆ. ಶೆಟ್ಟಿ, ಸುಚಿತ್ರಾ ಶೆಟ್ಟಿ, ಅನಿತಾ ಯು. ಶೆಟ್ಟಿ, ತ್ರಿವೇಣಿ ಶೆಟ್ಟಿ, ಲಕ್ಷ¾ಣ ಶೆಟ್ಟಿ, ಚಿತ್ರಾ ವಿಶ್ವನಾಥ ಶೆಟ್ಟಿ ಪೇತ್ರಿ, ಸೂರಜ್ ಶೆಟ್ಟಿ, ಮರಾಠ ಸುಧಾಮ ಶೆಟ್ಟಿ ಮೊದಲಾದವರು ವಿವಿಧ ಖಾದ್ಯಗಳನ್ನು ತಯಾರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಈ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿರುವ ಡಾ| ಆರ್. ಕೆ. ಶೆಟ್ಟಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವವರು. ಅವರು ತಮ್ಮ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಸಮಾಜ ಸೇವೆಯ ಸದುದ್ದೇಶದಿಂದ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಬಂಟರ ಸಂಘದಲ್ಲಿ ಸಕ್ರಿಯರಾಗಿರುವ ಅವರು ಈ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಿಜಕ್ಕೂ ಅಭಿಮಾನದ ವಿಷಯ. ಈ ಸಮಿತಿಯಲ್ಲಿ ತುಂಬಾ ಮಂದಿ ಪ್ರತಿಭಾವಂತರಿದ್ದಾರೆ. ಬೇರೆ ಬೇರೆ ಕ್ಷೇತ್ರದ ಸಾಧಕರಿದ್ದಾರೆ. ಎಲ್ಲರೂ ಜೊತೆಯಾಗಿ ಬಹಳ ಖುಷಿಯಿಂದ ಕೆಲಸ ಮಾಡುತ್ತಿರುವುದನ್ನು ಕಂಡಾಗ ನಮಗೂ ಸಂತೋಷವಾಗುತ್ತದೆ.
ಮಹೇಶ್ ಎಸ್. ಶೆಟ್ಟಿ ,
ಜತೆ ಕಾರ್ಯದರ್ಶಿ : ಬಂಟರ ಸಂಘ ಮುಂಬಯಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.