ಕಣ್ಮರೆಯಾದ ಯಕ್ಷ ಪ್ರತಿಭೆ ಶ್ರೀನಿಧಿ
Team Udayavani, Aug 10, 2018, 6:00 AM IST
ಕಟೀಲಿನ ಅರ್ಚಕ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಶ್ರೀನಿಧಿ ಯಕ್ಷಗಾನ ಕ್ಷೇತ್ರಕ್ಕೆ ನವನಿಧಿಯಂತಿದ್ದರು. ಉದಯೋನ್ಮುಖ ಯಕ್ಷಗಾನ ಕಲಾವಿದನಾಗಿ ತನ್ನ ಛಾಪನ್ನು ಎಳೆ ಹರೆಯದಲ್ಲಿಯೇ ಮೂಡಿಸಿದ ಯುವ ಪ್ರತಿಭೆ ಶ್ರೀನಿಧಿ ಅಸ್ರಣ್ಣ. ಕಟೀಲು ದೇವಳದ ನವರಾತ್ರಿ, ಜಾತ್ರೆ ಮೊದಲಾದ ಉತ್ಸವಗಳಲ್ಲಿ ಇವರ ಸೇವಾ ಪರಿ ಅನನ್ಯ. ಇತ್ತೀಚೆಗೆ ಇವರ ಚೆಂಡೆಯ ನುಡಿತವಿಲ್ಲದ ಬಲಿ ಇರಲಿಲ್ಲ. ಕಟೀಲಿನ ರಥಬೀದಿಯ ಆಟಗಳಲ್ಲಿ ತನ್ನ ಚಂಡೆ ವಾದನದ ಸೇವೆಯನ್ನು ಮಾಡುತ್ತಿದ್ದರು.ಅನುಭವಿಗಳು ಹೇಳುವಂತೆ ಇವರ ಚಂಡೆಯ ಉರುಳಿಕೆ ವಿಶಿಷ್ಟವಾಗಿತ್ತು. ಹಿಮ್ಮೇಳ ಗುರುಗಳಾಗಿದ್ದ ಹರಿನಾರಾಣ ಬೈಪಡಿತ್ತಾಯರು ನುಡಿದಂತೆ ಅರ್ಧ ಘಂಟೆಯೋಳಗೆ ತನಗೆ ನೀಡಿದ ಪಾಠಗಳನ್ನು ಮರು ಒಪ್ಪಿಸುತ್ತಿದ್ದರು.
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಓರ್ವ ಉತ್ತಮ ಹಿಮ್ಮೇಳ, ಮುಮ್ಮೇಳದ ಕಲಾವಿದರಾಗಿದ್ದರು. ಪಕಡಿ, ಕಿರೀಟ, ಕೇಶವಾರಿ ಕಿರೀಟ ವೇಷಗಳನ್ನು ಲೀಲಾಜಾಲವಾಗಿ ನಿರ್ವಹಿಸುತಿದ್ದರು. ಬೆಳೆಯಬೇಕಿದ್ದ ಪ್ರತಿಭೆ ಎಳವೆಯಲ್ಲೆ ಕಳೆದು ಹೋದದ್ದು ಕಲಾಕ್ಷೇತ್ರಕ್ಕಾದ ದೊಡ್ಡ ನಷ್ಟ.
ಡಾ| ಎಂ. ಪದ್ಮನಾಭ ಮರಾಠೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.