ಮನೆಮನೆಯಲ್ಲಿ ಯಕ್ಷಗಾನದ ರಂಗು
Team Udayavani, Aug 10, 2018, 6:00 AM IST
ಅಳದಂಗಡಿಯ ಸಿದ್ಧಿವಿನಾಯಕ ಯಕ್ಷಗಾನ ಚಿಕ್ಕಮೇಳ ಎರಡು ತಿಂಗಳಿಂದ ವೇಣೂರು ಸುತ್ತಮುತ್ತಲಿನ ಪರಿಸರದಲ್ಲಿನ ಮನೆಗಳ ಚಾವಡಿಯಲ್ಲಿ ನರ್ತಿಸುವ ಮೂಲಕ ವಿನೂತನವಾಗಿ ಯಕ್ಷಗಾನವನ್ನು ಪ್ರದರ್ಶಿಸಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಸಂಜೆ 6 ಗಂಟೆಯಿಂದ 10.30 ರ ವರೆಗೆ ಮೊದಲೇ ತಿಳಿಸಿದ ಮನೆಗಳಿಗೆ ಹೋಗಿ ಹದಿನೈದು ನಿಮಿಷಗಳ ಆಟವನ್ನು ಪ್ರದರ್ಶಿಸುವುದು ಇವರ ವಿಶೇಷ. ಸಿದ್ಧಿವಿನಾಯಕ ಮೇಳದ ಗಣಪತಿ ಭಾಗವತರಿಂದ ಸೊಗಸಾದ ಭಾಗವತಿಗೆ, ಇವರಿಗೆ ಸಾಥ್ ನೀಡುವ ಮೃದಂಗ, ತಾಳ, ಇದಕ್ಕೆ ಸರಿಯಾಗಿ ಯಕ್ಷಗಾನ ಅರ್ಥದಾರಿಗಳಿಂದ ನೃತ್ಯ.
ದಶರಥ ಮಹಾರಾಜ ಯುದ್ಧ ಮುಗಿಸಿ ಅಯೋಧ್ಯೆಗೆ ಆಗಮಿಸಿದಾಗ ಕೈಕೇಯಿ ಮಾತನಾಡಿಸದೆ ಇದ್ದುದರಿಂದ ರಾಜನಿಗೆ ಬೇಸರವಾಗುತ್ತದೆ. ಕೈಕೇಯಿ ತಾನು ರಾಜ ಧಣಿದಿರಬಹುದೆಂದು ಊಹಿಸಿ ಮಾತನಾಡಿಸದೆ ಇದ್ದುದಾಗಿ ಸಂತೈಸಿದ ಪರಿಯನ್ನು ಅಚ್ಚುಕಟ್ಟಾಗಿ ತಾಳ ಲಯಬದ್ದವಾಗಿ ಸೀಮಿತ ಅವಧಿಯಲ್ಲಿ ವ್ಯಕ್ತಪಡಿಸಿದ ರೀತಿ ಮನೆಮಂದಿಗಳನ್ನು ಯಕ್ಷಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಯಿತು. ಇದೇ ರೀತಿ ಚಿಕ್ಕಪುಟ್ಟ ಸನ್ನಿವೇಶಗಳನ್ನು ಬೇರೆಬೇರೆ ಮನೆಗಳಲ್ಲಿ ಆಡಿ ಜನರಲ್ಲಿ ಯಕ್ಷಗಾನ ಅಭಿರುಚಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಈ ತಂಡ.
ವಂದನಾ ಕೇವಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.