ರೂಪಕ ಅಲಂಕಾರ


Team Udayavani, Aug 10, 2018, 6:00 AM IST

x-27.jpg

ತುಂಬಾ ವರ್ಷಗಳ ನಂತರ ಒಂದು ಮದುವೆ ಸಮಾರಂಭದಲ್ಲಿ ದಿವ್ಯಾ ಸಿಕ್ಕಿದ್ದಳು. ಆಕೆಯೊಡನೆ ಆಕೆಯ ಮಗಳು ನಿಶ್ಮಿತಾ ಸಹ ಇದ್ದಳು. ದಿವ್ಯಾ ಸೌಂದರ್ಯವತಿ. ಹಾಲುಬಿಳಿಪಿನ ಬಣ್ಣದವಳು. ನಿಶ್ಮಿತಾ ಅಮ್ಮನಷ್ಟು ಬೆಳ್ಳಗಿರದೆ ಅಪ್ಪನನ್ನು ಹೋಲುತ್ತಿದ್ದಳು. ಆದರೆ, ನಿಶ್ಮಿತಾ ನೀಟಾಗಿ ಮಾಡಿಕೊಂಡಿದ್ದ ಮೇಕಪ್ಪಿನಿಂದಾಗಿ ತುಂಬಾ ಸುಂದರಿಯಾಗಿ ಕಾಣುತ್ತಿದ್ದಳು.

ಹೆಣ್ಣು ಅಲಂಕಾರಪ್ರಿಯೆ ಎನ್ನುವುದು ರೂಢಿಯ ಮಾತು. ಆಕೆಯ ಅಲಂಕಾರದ ಆಸ್ಥೆಯು ಹೆಣ್ತನದ ಹೆಮ್ಮೆಯ ಗುರುತಾಗಿಯೂ ಹಾಗೂ ಆಕೆಯ ಜೀವನೋತ್ಸಾಹದ ಪ್ರತೀಕವಾಗಿಯೂ ಕಾಣಬಹುದು. ಮೊನ್ನೆ ವಾಟ್ಸಾಪಿನಲ್ಲಿ ಹೀಗೊಂದು ಜೋಕು ಕಣ್ಣಗೆ ಬಿತ್ತು. ಕನ್ನಡಿಯ ಮುಂದೆ ಕುಳಿತ ಹೆಣ್ಣು “”ಇನ್ನು ಹತ್ತು ನಿಮಿಷದಲ್ಲಿ ಬರ್ತೀನಿ ಎಂದು ಅರ್ಧ ಗಂಟೆಯಿಂದ ಹೇಳ್ತಾನೆ ಇದ್ದೇನೆ. ಹಾಗಿದ್ದೂ ಪದೇ ಪದೇ ಆಯ್ತಾ ಆಯ್ತಾ ಅಂತ ಕೇಳುತ್ತಿದ್ದೀರಲ್ಲ” ಎಂದು ಗಂಡನಿಗೆ ಹೇಳುತ್ತಾಳೆ. ಹೀಗೆ, ಪ್ರಕೃತಿದತ್ತವಾದ ಸೌಂದರ್ಯವನ್ನು ಇನ್ನೂ ಚಂದವಾಗಿಸಿಕೊಳ್ಳುವ ಅವಳ ಜಾಣ್ಮೆ, ಹುರುಪು ದೈವದತ್ತವಾಗಿ ಅವಳಿಗೆ ಬಂದಿರುವ ವರ ಎನ್ನಬಹುದು. ಅದರಲ್ಲಿಯೂ ಇಂದಿನ ಹೆಣ್ಣುಮಕ್ಕಳು ತಮ್ಮ ಅಲಂಕಾರದ ಬಗ್ಗೆ ಹೆಚ್ಚಿನ ಗಮನ ಕೊಡುವುದರ ಜೊತೆಗೆ ಅಲಂಕಾರದಲ್ಲಿಯೂ ಆಧುನೀಕತೆಯ ಹೊಳಹು ಮೇಳೈಸಿ ಮಹಿಳೆಯರ ಜಾಗೃತಿಯ ಸಂಕೇತವೇ ಆಗಿ ಮೈದಳೆಯುತ್ತಿದ್ದಾರೆ.

ಅದೊಂದು ಕಾಲವಿತ್ತು. ಹೆಂಗಸರು ಹಣೆಗೆ ಕಾಸಗಲದ ಬೊಟ್ಟನಿಟ್ಟು , ಹೊಳೆಯುವ ಮೂಗುತಿ ಧರಿಸಿ, ಮುಂಗುರುಳು ತೀಡಿ, ಜಡೆ ಇಲ್ಲವೆ ತುರುಬು ಕಟ್ಟಿ ಮುಡಿತುಂಬಾ ಹೂ ಮುಡಿದರೆ ಅಲ್ಲಿಗೆ ಅವರ ಅಲಂಕಾರ ಮುಗಿಯುತ್ತಿತ್ತು. ಆದರೆ, ಇಂದಿನ ಸ್ತ್ರೀಯರಲ್ಲಿ ಅಲಂಕಾರ ಎನ್ನುವುದು ಜೀವನೋತ್ಸಾಹ ತುಂಬುವ, ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಕನ್ನಡಿ ಎಂಬಂತಾಗಿದೆ. ಯಾವುದೇ ಸಭೆ-ಸಮಾರಂಭಗಳಿರಲಿ, ಖಾಸಗಿ ಕಾರ್ಯಕ್ರಮಗಳಲ್ಲಿ , ಸರ್ವಾಲಂಕಾರ ಭೂಷಿತೆಯರಾಗಿ ಓಡಾಡುವ ಹೆಂಗಳೆಯರಿಂದ ಆ ಕಾರ್ಯಕ್ರಮಗಳು ಇನ್ನಷ್ಟು ಕಳೆಗಟ್ಟುತ್ತವೆ ಎಂದರೆ ಅತಿಶಯೋಕ್ತಿಯಲ್ಲ.

ಹಿಂದೆಯೂ ರೂಪವತಿಯರು ಇರಲಿಲ್ಲವೆಂತಲ್ಲ. ಆಗೆಲ್ಲ ಸರಳ, ಸಹಜ ಸೌಂದರ್ಯ. ತಿಳಿ ಬೆಳದಿಂಗಳ ಹಾಗೆ. ದೃಷ್ಟಿಯನ್ನು ತೀಕ್ಷ್ಣಗೊಳಿಸಿದಾಗ ಕಾಣುತ್ತಿದ್ದ ರೂಪಗಳು. ಅಚ್ಚ ಮಲ್ಲಿಗೆಯ ಹೂಗಳು ಅರಳಿದಂತೆ. ಇಂದು ಹೆಣ್ಣುಮಕ್ಕಳ ಅಂದವನ್ನು ಹೆಚ್ಚಿಸುವ ಆಧುನಿಕ ಸೌಂದರ್ಯ ಪ್ರಸಾಧ‌ನಗಳಿಂದಾಗಿ ರೂಪಸಿಯರೂ ಇನ್ನಷ್ಟು , ಮತ್ತಷ್ಟು ಚಂದ ಕಾಣುತ್ತಾರೆ. ಚಂದವಿಲ್ಲದವರೂ ರೂಪಸಿಯರಾಗಿ ಕಾಣುತ್ತಾರೆ.
ಅದ್ದೂರಿ ಮೇಕಪ್‌ಗ್ಳ ಭರಾಟೆ, ವಸ್ತ್ರವಿನ್ಯಾಸ, ವಿಧವಿಧವಾದ ಹೇರ್‌ಸ್ಟೈಲ್‌ಗ‌ಳು, ನಡೆನುಡಿಯಲ್ಲಿನ ನಾಜೂಕು ಎಲ್ಲವೂ ಮೇಳೈಸಿದ ಸೌಂದರ್ಯದ ಅನಾವರಣ ಈಗಿನದ್ದು ಎಂದರೆ ತಪ್ಪಿಲ್ಲ.

ಮುಖದ ಆಕಾರಕ್ಕನುಗುಣವಾಗಿ ಕಣ್ಣು , ಮೂಗು, ಹುಬ್ಬು , ತುಟಿ- ಹೀಗೆ ಎಲ್ಲವನ್ನೂ ಹೊಂದಿಕೊಳ್ಳುವಂತೆ ಮೇಕಪ್ಪಿನಲ್ಲೇ ತಿದ್ದಿ ತೀಡುವ ಪರಿ, ಒಂದು ಅದ್ಭುತ ಕಲೆಯೇ ಸರಿ. ಧಾರಾವಾಹಿಗಳಲ್ಲಿ, ಸಿನೆಮಾಗಳಲ್ಲಿ ನಾವು ನೋಡುವ ನಾಯಕಿಯರು, ನಟಿಯರ ಸೌಂದರ್ಯವನ್ನು ಕಂಡು ಬೆರಗಾಗಿ “”ವಾಹ್‌! ಎಂಥಾ ಸೌಂದರ್ಯ, ಅವರಿಗಿರುವ ಆ ಸೌಂದರ್ಯ ತಮಗಿಲ್ಲವಲ್ಲ” ಎಂದು ಕೊರಗುವ ಎಷ್ಟೋ ಹುಡುಗಿಯರನ್ನು ಕಾಣಬಹುದು.

ಪ್ರಸಾಧನಗಳ ಜಾಹೀರಾತಿನಲ್ಲಿ ತಮ್ಮ ಸೌಂದರ್ಯದ ಗುಟ್ಟು ಇದೇ ಎಂದು ಅವರು ತೋರಿಸುವ ಮೇಕಪ್ಪು ಸಾಮಗ್ರಿಗಳನ್ನು ಕೊಂಡು, ತಮಗೆ ಒಪ್ಪುತ್ತದೋ ಇಲ್ಲವೊ ಎನ್ನುವುದನ್ನೂ ನೋಡದೆ ಹಣವನ್ನು ವ್ಯಯಮಾಡುವವರೂ ಕಡಿಮೆ ಇಲ್ಲ. ಅವರುಗಳು ಮೇಕಪ್ಪು ತೆಗೆದ ನಂತರ ಅಥವಾ ಮೇಕಪ್ಪು ಇಲ್ಲದ ನಟಿಯರ ಮುಖವನ್ನು ನೋಡಿದಾಗ ಎಲ್ಲರಂತೆ ಸಾಧಾರಣವಾಗಿರುವ ಅವರನ್ನು  ನೋಡಿ, “ಸೌಂದರ್ಯದ ದೇವತೆಯಂತೆ ಕಾಣುವ ಆ ಚೆಲುವೆ ಇವರೇನಾ?’ ಎಂದು ಬೇಸ್ತು ಬೀಳುವ ಸರದಿ ನಮ್ಮದಾಗುತ್ತದೆ.

ಈ ಮೇಕಪ್ಪಿನ ಕರಾಮತ್ತು ಅಷ್ಟರಮಟ್ಟಿಗೆ ಜಾದೂ ಮಾಡಿರುತ್ತದೆ ಎಂಬುದನ್ನು ಗಮನಿಸಬೇಕು. ಇನ್ನು ಅಗ್ಗದ ಮೇಕಪ್ಪಿಗೆ ಮಾರುಹೋಗಿ ತಮ್ಮ ನೈಜ ಸೌಂದರ್ಯವನ್ನು ಹಾಳುಮಾಡಿಕೊಂಡವರೂ ಹಲವರಿದ್ದಾರೆ. ಮೇಕಪ್ಪಿನಲ್ಲಿ ಬಳಸುವ ರಾಸಾಯನಿಕಗಳೂ ಮೃದುವಾದ ಚರ್ಮದ ಮೇಲೆ ಹಾನಿಕಾರಕ ಪರಿಣಾಮ ಬೀರಿ ಮುಖದ ಮೇಲೆ ಕಲೆಗಳೂ, ಬಂಗುಗಳೂ ಆಗುವ ಸಾಧ್ಯತೆಯೂ ಇದೆ. ಇಂದಿನ ಮೇಕಪ್ಪುಗಳ ಜಾದೂ ಏನೆಂದರೆ, ಯಾವುದೇ ಚಹರೆಯ ಮೂಲಸ್ವರೂಪವನ್ನೇ ಬದಲಾಯಿಸಿ ಹೊಸತೊಂದು ರೂಪವನ್ನು ಆವಿಷ್ಕಾರಗೊಳಿಸುವಷ್ಟು ಸಶಕ್ತವಾಗಿಹ, ಉತ್ಕೃಷ್ಟ ಮಟ್ಟದ ಒಂದು ಮಾಯಾಜಾಲವೇ ಸೃಷ್ಟಿಸಿಬಿಡುತ್ತದೆ.

ಇದರ ಮಾಯಾಜಾಲದ ಪ್ರಭಾವದಿಂದಾಗಿ ಮಧುವಣಗಿತ್ತಿ ಯಾರು? ಅನ್ಯರು ಯಾರು? ತಾಯಿ ಯಾರು? ಅಜ್ಜಿ ಯಾರು? ಎನ್ನುವ ಅಯೋಮಯ ಸ್ಥಿತಿ ನೋಡುಗರ ಕಣ್ಣಿಗೆ ತಿಳಿಯದಂತಾಗುತ್ತದೆ. ಧಾರಾವಾಹಿಗಳ ಪ್ರಭಾವವೋ ಏನೊ ಎಂಬಂತೆ ಮೇಕಪ್‌ ಇಲ್ಲದ ಮುಖವೇ ಇಲ್ಲವೇನೊ ಎನ್ನುವಷ್ಟರ ಮಟ್ಟಿಗೆ ಈ ಮೇಕಪ್ಪು ಎನ್ನುವುದು ಎಲ್ಲಾ ಕಡೆ ವಿಜೃಂಭಿಸುತ್ತಿದೆ. ಚಿಕ್ಕಬಾಲೆಯರಂತೂ ತಮ್ಮ ಅಮ್ಮಂದಿರನ್ನು ಅನುಕರಿಸುವಂತೆ ಮೇಕಪ್ಪು ,  ಲಿಪ್‌ಸ್ಟಿಕ್‌ ಹಾಕಿಕೊಳ್ಳುವುದೇ ಒಂದು ಸಂಭ್ರಮ ಅವರುಗಳಿಗೆ. ಪುಟ್ಟ ಮಕ್ಕಳ ಆಟದಲ್ಲಿ ಈಗ ಹೊಸದಾಗಿ ಬ್ಯೂಟಿಪಾರ್ಲರ್‌ ಆಟವೂ ಸೇರ್ಪಡೆಯಾಗಿರುವುದನ್ನು ಕಾಣಬಹುದು.

ಇಂದು ಸೌಂದರ್ಯ ಹೆಚ್ಚಿಸುವ, ಅಲಂಕಾಲಕ್ಕೊದಗುವ, ನೂರಾರು ರೀತಿಯ ಪ್ರಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಭಿನ್ನವಾದ, ವೈವಿಧ್ಯವಾದ ಪ್ರಸಾಧನಗಳ ಜಾಹೀರಾತುಗಳನ್ನು ದಿನನಿತ್ಯ ಟಿವಿಗಳಲ್ಲಿ ಕಾಣುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಸಾಧಾರಣದಿಂದ ಹಿಡಿದು ಉತ್ಕೃಷ್ಟ ಗುಣಮಟ್ಟದ ಪ್ರಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯ. ಸೌಂದರ್ಯ ಪ್ರಸಾಧ‌ನಗಳ ಹೊಸ ಹೊಸ ಆವಿಷ್ಕಾರವಾದಂತೆ ಉದ್ಯಮವೂ ಬೃಹತ್ತಾಗಿ ಬೆಳೆದು ಲೆಕ್ಕವಿಲ್ಲದಷ್ಟು ಕಂಪೆನಿಗಳು ತಲೆಎತ್ತಿ, ತಮ್ಮ ಗ್ರಾಹಕರನ್ನು ಸೆಳೆಯಲು ಉನ್ನತವಾದ ಪ್ರಸಾಧನಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ.

ಇನ್ನು ಇದರ ಸಮನ್ವಯವೇ ಆಗಿರುವ ಬ್ಯೂಟಿಪಾರ್ಲರ್‌ಗಳೂ ಇಂದು ಅನೇಕರಿಗೆ ಬದುಕು ಕೊಟ್ಟಿದೆ. ಇದರಿಂದಾಗಿ ಇಂದು ಎಷ್ಟೋ ಮಹಿಳೆಯರು ತಮ್ಮ ಬಾಳಿಗೊಂದು ಸಂಪಾದನೆಯ ಮಾರ್ಗ ಕಂಡುಕೊಂಡಿದ್ದು , ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಂಡಿದ್ದಾರೆ.

ಎಂ. ಇಂದಿರಾ ಶೆಟ್ಟಿ

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.