ಲಾರ್ಡ್ಸ್ ಗಂಟೆ ಬಾರಿಸಲಿಲ್ಲ ಸಚಿನ್ ತೆಂಡುಲ್ಕರ್
Team Udayavani, Aug 10, 2018, 6:55 AM IST
ಲಂಡನ್: ಐತಿಹಾಸಿಕ ಲಾರ್ಡ್ಸ್ನಲ್ಲಿ ದಿನದ ಪಂದ್ಯದ ಆರಂಭವನ್ನು ಗಂಟೆ ಬಾರಿಸುವ ಮೂಲಕ ಸಾರುವುದೊಂದು ಸಂಪ್ರದಾಯ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ದಿನದಾಟದ ಈ ಗೌರವ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್ಗೆ ಲಭಿಸಿತ್ತು. ಆದರೆ ಮಳೆಯಿಂದಾಗಿ ಆಟ ಆರಂಭವಾಗದೇ ಇದ್ದುದರಿಂದ ಸದ್ಯ ಸಚಿನ್ಗೆ ಈ ಅವಕಾಶ ತಪ್ಪಿದೆ.
ಟೆಸ್ಟ್ ಪಂದ್ಯದ ಐದೂ ದಿನಗಳ ಕಾಲ ಖ್ಯಾತ ಮಾಜಿ ಕ್ರಿಕೆಟಿಗರಿಗೆ ಈ ಅವಕಾಶ ಸಿಗುತ್ತದೆ. ಈ ಪಂದ್ಯದ 3ನೇ ದಿನಗಂಟೆ ಹೊಡೆಯುವ ಅವಕಾಶ ಭಾರತ ತಂಡದ ಕೋಚ್ ರವಿಶಾಸ್ತ್ರಿ ಅವರಿಗೆ ದೊರೆತಿದೆ.
ಪಂದ್ಯದ 2ನೇ ದಿನ ಇಂಗ್ಲೆಂಡಿನ ಮಾಜಿ ಆಲ್ರೌಂಡರ್, 82ರ ಹರೆಯದ ಟೆಡ್ ಡೆಕ್ಸ್ಟರ್, 4ನೇ ದಿನ ಇಂಗ್ಲೆಂಡ್ ವನಿತಾ ಕ್ರಿಕೆಟಿನ ಖ್ಯಾತ ವೇಗಿ ಅನ್ಯಾ ಶ್ರಬೊಲ್ ಅವರನ್ನು ಗಂಟೆ ಬಾರಿಸಲು ಆರಿಸಲಾಗಿದೆ. ಲಾರ್ಡ್ಸ್ ಕಚೇರಿಯ ಆಡಳಿತಾಧಿಕಾರಿ ಹ್ಯೂಗೊ ಬರ್ನಾರ್ಡ್ ಈ ಯಾದಿಯನ್ನು ಬಿಡುಗಡೆ ಮಾಡಿದರು. ಆದರೆ 5ನೇ ದಿನ ಗಂಟೆ ಬಾರಿಸುವ ಆಟಗಾರ ಯಾರೆಂಬುದು ಇನ್ನೂ ಅಂತಿಮಗೊಂಡಿಲ್ಲ. ಮೊದಲ ದಿನ ಗಂಟೆ ಬಾರಿಸದ ಸಚಿನ್ಗೆ ಮರಳಿ ಅವಕಾಶ ಲಭಿಸುವ ಸಾಧ್ಯತೆ ಇದೆ. ಈಗಾಗಲೇ ಭಾರತದ ಸುನೀಲ್ ಗಾವಸ್ಕರ್, ಮನ್ಸೂರ್ ಅಲಿ ಖಾನ್ ಪಟೌಡಿ, ದಿಲೀಪ್ ವೆಂಗ್ ಸರ್ಕಾರ್, ರಾಹುಲ್ ದ್ರಾವಿಡ್, ಕಪಿಲ್ದೇವ್ ಮತ್ತು ಸೌರವ್ ಗಂಗೂಲಿ ಲಾರ್ಡ್ಸ್ನಲ್ಲಿ ಗಂಟೆ ಬಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.