ನಿಧಾನಗತಿ ಓವರ್‌ಗಳಿಗೆ ಇನ್ನು ರನ್ ರೂಪದ ದಂಡ!
Team Udayavani, Aug 10, 2018, 6:30 AM IST
ಲಂಡನ್: ಕ್ರಿಕೆಟ್ ಪಂದ್ಯಗಳ ಮೇಲೆ ನಿಧಾನಗತಿಯ ಓವರ್‌ಗಳ ಮೇಲೆ ಇನ್ನು ಪೆನಾಲ್ಟಿ ರೂಪದಲ್ಲಿ ಎದುರಾಳಿ ತಂಡಕ್ಕೆ ರನ್‌ಗಳನ್ನು ನೀಡುವ ಹೊಸ ಪ್ರಸ್ತಾವನೆಯನ್ನು ಕ್ರಿಕೆಟ್ ನಿಯಮಗಳ ರಕ್ಷಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೆರಿಲ್‌ಬಾನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ವಿಶ್ವ ಕ್ರಿಕೆಟ್ ಸಮಿತಿಗೆ ಪ್ರಸ್ತಾವಿಸಿದೆ.
ಮಾಜಿ ನಾಯಕಾದ ಮೈಕ್ ಗ್ಯಾಟಿಂಗ್ ಮುಖ್ಯಸ್ಥರಾಗಿರುವ ಈ ಸಮಿತಿಯಲ್ಲಿ ಸೌರವ್ ಗಂಗೂಲಿ ಹಾಗೂ ರಿಕಿ ಪಾಂಟಿಂಗ್ ಪ್ರಮುಖ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಸಭೆ ಸೇರಿದ ಪ್ರಮುಖರು, ಓವರ್ ಗತಿ ಮೇಲೆ ನಿಗಾ ಇರಿಸಲು ಶಾಟ್ ಕ್ಲಾಕ್ ಬಳಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಬಾಸ್ಕೆಟ್‌ಬಾಲ್‌ನಲ್ಲಿ ಆಟದ ವೇಗ ಹೆಚ್ಚಿಸಲು “ಟೈಮರ್’ ಶಾಟ್ ಕ್ಲಾಕ್ ಬಳಸಲಾಗುತ್ತದೆ. ಇತ್ತೀಚೆಗೆ ಇದು ಟೆನಿಸ್ ಪಂದ್ಯಾವಳಿಗಳಲ್ಲೂ ಚಾಲ್ತಿಗೆ ಬಂದಿದೆ. ಪ್ರತಿ ಓವರ್ ನಡುವಿನ ವಿರಾಮದ ಅವಧಿಯಲ್ಲಿ ಶಾಟ್ ಕ್ಲಾಕ್ ಚಲಿಸುತ್ತಿರುತ್ತದೆ. ಬೌಲರ್ ರನ್ ಅಪ್‌ಗೆ ಬಂದಾಗ ಸ್ಥಗಿತಗೊಳ್ಳುತ್ತದೆ. ಇಂತಿಷ್ಟೇ ಸಮಯದಲ್ಲಿ ಪ್ರತಿ ಓವರ್ ಮುಕ್ತಾಯಗೊಳ್ಳಬೇಕು ಎಂದು ಬೌಲರ್‌ನನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ವೇಗದ ಬೌಲರ್‌ಗಳಿಗೆ ಹೆಚ್ಚಿನ ಅವಧಿ ಬೇಕಾಗುತ್ತದೆ. ಬೌಂಡರಿ, ಸಿಕ್ಸರ್ ಸಿಡಿಸಿದಾಗ, ಔಟಾದಾಗ ವಿಳಂಬವಾಗುತ್ತದೆ. ಆದರೆ, ಎರಡು ಓವರ್‌ಗಳ ಮಧ್ಯೆ ಎಷ್ಟು ಸಮಯ ತೆಗೆದುಕೊಂಡರೆಂಬ ಲೆಕ್ಕ ಇಡಬೇಕಾಗುತ್ತದೆ. ಹೊಸ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬಂದು ಆಟಕ್ಕೆ ಸಿದ್ಧವಾಗಲು ತೆಗೆದುಕೊಳ್ಳುವ ಸಮಯವನ್ನೂ ಲೆಕ್ಕ ಹಾಕಲಾಗುತ್ತದೆ ಎಂದು ಪಾಂಟಿಂಗ್ ವಿವರಿಸಿದ್ದಾರೆ.
11 ವರ್ಷಗಳಲ್ಲೇ ಕನಿಷ್ಠ ಓವರ್ ರೇಟ್
ಐಸಿಸಿ ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ ಆಡಿದ ಟೆಸ್ಟ್ ಪಂದ್ಯಗಳಲ್ಲಿ 11 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಓವರ್ ರೇಟ್ ದಾಖಲಾಗಿದೆ. ಟಿ20 ಪಂದ್ಯಗಳಲ್ಲಿ ಇನ್ನೂ ನಿಧಾನ. ಹಾಲಿ ನಿಯಮಗಳ ಪ್ರಕಾರ ಓವರ್ ಗತಿ ವಿಳಂಬವಾದರೆ ಆಟಗಾರರಿಗೆ ಮತ್ತು ತಂಡದ ನಾಯಕನಿಗೆ ದಂಡ ಶಿಕ್ಷೆಯಿದೆ.
ಪುನರಾವರ್ತನೆಯಾದರೆ ತಂಡದ ನಾಯಕನಿಗೆ ಪಂದ್ಯಗಳ ಮೇಲೆ ನಿಷೇಧ ಹೇರಲಾಗುತ್ತದೆ. ಹೀಗಾಗಿ, ಐಸಿಸಿ ಸಮಿತಿ ಶಾಟ್ ಕ್ಲಾಕ್ ಬಳಕೆ ಮತ್ತು ರನ್ ಪೆನಾಲ್ಟಿ ವಿಧಿಸುವ ಕುರಿತು ಚರ್ಚಿಸಿದೆ. ನಾಯಕನಿಗೆ ಹೆಚ್ಚಿನ ಜವಾಬ್ದಾರಿ ವಹಿಸುವ ಜತೆಗೆ, ನಿಗದಿತ ಅವಧಿಯಲ್ಲಿ ತಂಡವೊಂದು 3-4 ಓವರ್‌ಗಳಷ್ಟು ಹಿಂದುಳಿದರೆ 20 ರನ್‌ಗಳ ವರೆಗೆ ಪೆನಾಲ್ಟಿ ವಿಧಿಸುವ ಚಿಂತನೆ ಇದೆ. ನಿರ್ದಿಷ್ಟವಾಗಿ ಎಷ್ಟೆಂಬುದು ಇನ್ನೂ ನಿರ್ಧಾರವಾಗಿಲ್ಲ.
ಬೌಲರ್‌ಗಳಿಗೂ ಹೆಲ್ಮೆಟ್
ಇದೇ ವೇಳೆ ಬೌಲರ್‌ಗಳೂ ಹೆಲ್ಮೆಟ್ ಒದಗಿಸುವ ಕುರಿತು ಚರ್ಚೆ ನಡೆದಿದೆ. 2022ರ ಕಾಮನ್ವೆಲ್ತ್ ಗೇಮ್ಸ್ ಹಾಗೂ 2028ರ ಒಲಿಂಪಿಕ್ಸ್‌ಗೆ ಮಹಿಳಾ ಕ್ರಿಕೆಟ್ ಸೇರಿಸುವ ಐಸಿಸಿ ಪ್ರಯತ್ನಕ್ಕೂ ಸಮಿತಿ ಮೆಚ್ಚುಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.