ಗಾಳಿಯಿಂದಲೇ ಓಡುತ್ತೆ ಈ ಕಾರು!
Team Udayavani, Aug 10, 2018, 6:00 AM IST
ಕೈರೋ: ಗಾಳಿಯಿಂದಲೂ ವಾಹನ ಓಡಲು ಸಾಧ್ಯವೇ? ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗದು. ಆಧುನಿಕ ತಂತ್ರಜ್ಞಾನದ ವೇಗ ಗಮನಿಸಿದಾಗ ಇಂಥ ಯಾವುದೇ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಈಜಿಪ್ಟ್ನ ವಿದ್ಯಾರ್ಥಿಗಳು ಇಂಥದ್ದೊಂದು ಅಚ್ಚರಿಯ ವಾಹನ ಸಿದ್ಧಗೊಳಿಸಿದ್ದಾರೆ. ನಾಲ್ಕು ಚಕ್ರಗಳ ಈ ವಾಹನವನ್ನು ಸಂಕ್ಷೇಪಿತ ಆಮ್ಲಜನಕ (compressed oxygen)ದಿಂದ ಓಡಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಇದರಿಂದ ವಾಯು ಮಾಲಿನ್ಯವೂ ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಪಾದಿಸಿದ್ದಾರೆ.
ಕೈರೋ ಹೊರವಲಯದಲ್ಲಿರುವ ಹೆಲ್ವಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ತರಗತಿಯ ಪಾಠದ ಅಂಗವಾಗಿಯೇ ಈ ವಾಹನ ಸಿದ್ಧಪಡಿಸಿದ್ದು, ಒಬ್ಬ ವ್ಯಕ್ತಿ ಕುಳಿತು ವಾಹನ ಚಲಾಯಿಸಬಲ್ಲ ಅವಕಾಶ ಇರುವಂತೆ ವಿನ್ಯಾಸಗೊಳಿಸಿದ್ದಾರೆ. ಇಂಧನಕ್ಕಾಗಿ ಸಂಕ್ಷೇಪಿತ ಆಮ್ಲಜನದ ಸಿಲಿಂಡರ್ ಬಳಸಿಕೊಂಡಿದ್ದಾರೆ.
40 ಕಿ.ಮೀ. ಮೈಲೇಜ್: ಅಷ್ಟಕ್ಕೂ ಮೈಲೇಜ್ ಲೆಕ್ಕಾಚಾರ ಇಲ್ಲದೇ ಏನು ಪ್ರಯೋಜನ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಪ್ರಕಾರ, ಪ್ರತಿ ಗಂಟೆಗೆ ಕನಿಷ್ಠ 40 ಕಿ.ಮೀ.ನಿಂದ 100 ಕಿ.ಮೀ. ಸಾಗುವ ಸಾಮರ್ಥ್ಯ ಇದಕ್ಕಿದೆ. ಸದ್ಯ ಅಳವಡಿಸಲಾದ ಸಿಲಿಂಡರ್‌ನಲ್ಲಿ 100 ಕಿ.ಮೀ. ಸಾಗಬಹುದಾಗಿದೆ. ಇನ್ನು ಈ ವಾಹನ ತಯಾರಿಕೆಗೆ ತಗಲಿರುವ ವೆಚ್ಚ ಅಂದಾಜು 70,000 ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.