ಅಂತೂ ಕೆಂಪಗೆರಿ ಜಲಾಶಯಕ್ಕೆ ಹರಿದು ಬಂದಳು ಗಂಗ
Team Udayavani, Aug 10, 2018, 5:29 PM IST
ನರಗುಂದ: ಕಳೆದ ಒಂದೂವರೆ ತಿಂಗಳಿಂದ ತನ್ನ ಒಡಲು ಬರಿದಾಗಿಸಿಕೊಂಡು ಪಟ್ಟಣದ ಜನತೆಗೆ ಕುಡಿವ ನೀರಿನ ಹಾಹಾಕಾರ ಸೃಷ್ಟಿಸಿದ್ದ ಪಟ್ಟಣದ ಕೆಂಪಗೆರಿ ಜಲಾಶಯ ಒಡಲಾಳಕ್ಕೆ ಅಂತೂ ಗಂಗಾಮಾತೆ (ನೀರು) ಬಂದು ಸೇರುತ್ತಿದೆ. ಮಲಪ್ರಭಾ ಕಾಲುವೆಗೆ ನೀರು ಹರಿಸಲಾಗಿದ್ದು, ಪಟ್ಟಣದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲಾಡಳಿತಕ್ಕೆ ಪುರಸಭೆ ಮೂಲಕ ತೀವ್ರ ಒತ್ತಡ ಮಧ್ಯೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಕುಡಿವ ನೀರಿಗಾಗಿ ಮಲಪ್ರಭಾ ನರಗುಂದ ಶಾಖಾ ಕಾಲುವೆಗೆ ನೀರು ಹರಿಸಲು ಅನುಮತಿ ನೀಡಿದ್ದರಿಂದ ಮಂಗಳವಾರ ಕಾಲುವೆಗೆ ನೀರು ಹರಿಬಿಡಲಾಗಿದೆ. ಗುರುವಾರ ಸಂಜೆಗೆ ಕಾಲುವೆ ನೀರು ಕೆಂಪಗೆರಿ ಒಡಲು ಸೇರಿಕೊಳ್ಳುತ್ತಿದೆ.
ತಪ್ಪಿದ ಹಾಹಾಕಾರ: ಇಡೀ ಪಟ್ಟಣಕ್ಕೆ ಕುಡಿವ ನೀರಿನ ಏಕೈಕ ಮೂಲ ಕೆಂಪಗೆರಿ ಜಲಾಶಯ. ಇದು ಒಂದೂವರೆ ತಿಂಗಳ ಹಿಂದೆಯೇ ಖಾಲಿಯಾಗಿತ್ತು. ಪರಿಣಾಮ ಪುರಸಭೆ ವ್ಯಾಪ್ತಿಯ ಒಂದಷ್ಟು ಕೊಳವೆ ಬಾವಿ ಮತ್ತು ಜಲಾಶಯದಲ್ಲಿ ಅಳಿದುಳಿದ ನೀರನ್ನೇ ಪಂಪ್ ಸೆಟ್‌ನಿಂದ ಎತ್ತಿ ಕುಡಿಯಲು ಪೂರೈಸಲಾಗಿತ್ತು.
ಹೀಗಾಗಿ ರಾಡಿ ನೀರು, ಕೊಳವೆ ಬಾವಿ ಸವಳು ನೀರು ಕುಡಿವ ದುರ್ಗತಿಗೆ ಜನತೆ ರೋಷಿ ಹೋಗಿದ್ದರು. ಪುರಸಭೆ ತಹಶೀಲ್ದಾರ್ ಮೂಲಕ 3 ಬಾರಿ ಜಿಲ್ಲಾ ಧಿಕಾರಿಗೆ ಕಾಲುವೆ ನೀರು ಹರಿಸುವಂತೆ ಪತ್ರ ರವಾನಿಸಿತ್ತು. ಈ ಮಧ್ಯೆ ಶಾಸಕ ಸಿ.ಸಿ. ಪಾಟೀಲ ಕೂಡ ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನಿಸಿ ಕೂಡಲೇ ಕಾಲುವೆಗೆ ನೀರು ಹರಿಸುವಂತೆ ಒತ್ತಡ ಹೇರಿದ್ದರು.
ಪ್ರತಿ 15 ದಿನಕ್ಕೊಮ್ಮೆ ಕುಡಿವ ನೀರು ಪಡೆಯುತ್ತಿದ್ದ ಪಟ್ಟಣದ ಜನತೆ ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಹೇಗೋ ಕೆಂಪಗೆರಿ ಜಲಾಶಯಕ್ಕೆ ಕಾಲುವೆ ನೀರು ಸೇರುತ್ತಿರುವುದು ಜನತೆ ನಿರಾಳವಾಗುವಂತಾಗಿದೆ. ಆರೇಳು ತಿಂಗಳಿಗೆ ಸಾಕಾಗುವಷ್ಟು ನೀರು ಕೆರೆಯಲ್ಲಿ ಸಂಗ್ರಹವಾಗುವ ನಿರೀಕ್ಷೆ ಕಂಡು ಬಂದಿದೆ.
ಅಡ್ಡಗಟ್ಟಿ ನೀರು: ನವಿಲುತೀರ್ಥ ರೇಣುಕಾ ಜಲಾಶಯದಿಂದ ಕಾಲುವೆಗೆ ನೀರು ಬಿಡಲಾಗಿದ್ದು, ಮಲಪ್ರಭಾ ಕಾಲುವೆಯಿಂದ ಸೋಮಾಪುರ ಕಾಲುವೆ ಮೂಲಕ ಕೆರೆಗೆ ನೀರು ಸೇರುತ್ತಿದೆ. ಹೀಗಾಗಿ ಸೋಮಾಪುರ ಕಾಲುವೆ ಗೇಟ್ ಬಳಿ ಮಲಪ್ರಭಾ ಶಾಖಾ ಕಾಲುವೆ ಮಣ್ಣಿನಿಂದ ಅಡ್ಡಗಟ್ಟಿ ನೀರು ತಿರುವಿಕೊಳ್ಳಲಾಗಿದೆ. ಪುರಸಭೆ ಕಾವಲುಗಾರರನ್ನು ನೇಮಿಸಿದೆ.
10 ದಿನ ಲಭ್ಯ: ಕೆಂಪಗೆರಿ ಜಲಾಶಯ ತುಂಬಿಸಲು ಆ.7ರಿಂದ 10 ದಿನ ಅಂದರೆ ಆ.16ರವರೆಗೆ ಕಾಲುವೆಗೆ ದಿನಕ್ಕೆ 300 ಕ್ಯುಸೆಕ್ ನೀರು ಬಿಡಲಾಗಿದೆ. ಕಾಲುವೆ ನೀರನ್ನು ದುರ್ಬಳಕೆ ಮಾಡಿಕೊಳ್ಳದಂತೆ ಪುರಸಭೆಯಿಂದ ಮೂರು ಸಿಬ್ಬಂದಿ ತಂಡ ರಚಿಸಲಾಗಿದ್ದು, ಹಗಲು ರಾತ್ರಿ ಪಾಳಿಯಲ್ಲಿ ಕಾಲುವೆ ನೀರು ಸಮರ್ಪಕವಾಗಿ ಜಲಾಶಯ ಸೇರಲು ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾರಾಯಣ ಪೇಂಡ್ಸೆ ತಿಳಿಸಿದರು.
ಆರು ತಿಂಗಳ ನಿರೀಕ್ಷೆ
ಕೆಂಪಗೆರಿ ಜಲಾಶಯ 19 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಾಲುವೆಗೆ ಹರಿಸಿದ ನೀರು ಸಮರ್ಪಕವಾಗಿ 10 ದಿನಗಳು ಜಲಾಶಯ ಸೇರಿದರೆ ಸುಮಾರು 16 ಅಡಿ ನೀರು ಸಂಗ್ರಹಿಸಿಕೊಳ್ಳಬಹುದು. ಮೇಲಾಗಿ 16 ಅಡಿ ಮಾತ್ರ ಸಂಗ್ರಹಕ್ಕೆ ಅವಕಾಶ ಇದೆ. ಕಾರಣ ಹೆಚ್ಚು ನೀರು ಸಂಗ್ರಹವಾದರೆ ಜಲಾಶಯದಲ್ಲಿ ಸೋರಿಕೆ ಉಂಟಾಗುತ್ತದೆ ಎಂಬುದು ಅಧಿಕಾರಿಗಳ ನಿಲುವು.
ರೈತರು ಸಹಕರಿಸಲಿ
ನರಗುಂದ ಪಟ್ಟಣಕ್ಕೆ ಕುಡಿವ ನೀರಿಗಾಗಿ ಕಾಲುವೆಗೆ ನೀರು ಬಿಡಲಾಗಿದೆ. ಕಾಲುವೆ ಮೇಲ್ಭಾಗದ ರೈತರು ಕಾಲುವೆ ನೀರು ಬಳಸಿಕೊಳ್ಳದಂತೆ ಸಹಕರಿಸಬೇಕು.
ನಾರಾಯಣ ಪೇಂಡ್ಸೆ, ಪುರಸಭೆ ಮುಖ್ಯಾಧಿಕಾರಿ
ಸಿದ್ಧಲಿಂಗಯ್ಯ ಮಣ್ಣೂರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.