ತಾತ್ಕಾಲಿಕ ಕಟ್ಟಡದಲ್ಲಿ ಮೂಲಸೌಕರ್ಯವಿಲ್ಲ
Team Udayavani, Aug 11, 2018, 6:00 AM IST
ಹೆಬ್ರಿ: ನೂತವಾಗಿ ರಚನೆ ಗೊಂಡ ಹೆಬ್ರಿ ತಾಲೂಕು ಕಚೇರಿ ಇದುವರೆಗೆ ಬೋರ್ಡಿಗೆ ಮಾತ್ರ ಸೀಮಿತ ವಾಗಿದ್ದು ಈಗ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದೆ. ಕಚೇರಿಯ ಅವರಣದ ಪ್ರವೇಶದ್ವಾರದ ಎದರು ಗೇಟು ಇಲ್ಲದೆ ಇರುವುದರಿಂದ ಸಾರ್ವಜನಿಕರು ತಮ್ಮ ವಾಹನವನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಈ ಬಗ್ಗೆ ಇಲಾಖೆ ಕೂಡ ಮೌನವಹಿಸಿದೆ. ಇದರೊಂದಿಗೆ ತಾಲೂಕು ಕಚೇರಿಯಲ್ಲಿ ಮೂಲಸೌಕರ್ಯ, ಸಾರ್ವಜನಿಕ ಕೆಲಸ ಗಳಿಲ್ಲದೆ ನಾಮ್‌ಕೆವಾಸ್ತೆ ಎಂಬಂತಿದೆ.
ತಾತ್ಕಾಲಿಕ ಕಟ್ಟಡ ಸೋರುತ್ತಿದೆ
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಹಳೆ ಕಟ್ಟಡದಲ್ಲಿ ತಾತ್ಕಲಿಕವಾಗಿ ತಾಲೂಕು ಕಚೇರಿಯನ್ನು ಆರಂಭಿಸಿದ್ದು ಯಾವಾಗಲೂ ಬಾಗಿಲು ಹಾಕಿರುತ್ತಿತ್ತು. ಈಗ ಡಿ ಗ್ರೂಪ್ ನೌಕರರ ನೇಮಕವಾಗಿ ಕಚೇರಿ ತೆರೆದಿದ್ದರೂ ಯಾವುದೇ ಸೇವೆಗಳು ಲಭ್ಯವಿಲ್ಲ. ಹಳೆ ಕಟ್ಟಡವಾದ್ದರಿಂದ ಮಳೆಗಾಲದಲ್ಲಿ ಸೋರುತ್ತಿದೆ.
ಹೆಬ್ರಿ ತಾಲೂಕಿಗೆ ಉಪ ತಹಶೀಲ್ದಾರ್ ಅವರನ್ನು ನೇಮಿಸಿದ್ದರೂ, ಹಳೆಯ ಕಟ್ಟಡದಲ್ಲಿ ಕಂಪ್ಯೂಟರ್ ಇತ್ಯಾದಿ ಮೂಲ ಸೌಕರ್ಯ ಇಲ್ಲದ್ದರಿಂದ ಕಾರ್ಕಳ ತಾ| ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೋಬಳಿ ವಿಂಗಡನೆಯಲ್ಲಿ ಗೊಂದಲ
ಇದೀಗ ಅಜೆಕಾರು ಹೋಬಳಿಯ ಬದಲು ಹೆಬ್ರಿ ಹೋಬಳಿ ರಚನೆಯಾದಲ್ಲಿ ಅಜೆಕಾರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಸುಮಾರು 11ಗ್ರಾಮಗಳು ಕಾರ್ಕಳ ಅಥವಾ ಹೆಬ್ರಿಗೆ ಸೆರ್ಪಡೆ ಯಾಗ ಬೇಕಾಗುತ್ತದೆ. ಆಗ ತಾಲೂಕು ಕಾರ್ಕಳ ಹೋಬಳಿ ಹೆಬ್ರಿ ಆಗುವ ಗೊಂದಲವಿದೆ.
ಕಚೇರಿಗೆ ಸ್ಥಳ ಪರಿಶೀಲನೆ
ಎಲ್ಲಾ ಇಲಾಖಾ ಕಚೇರಿಗಳು ಒಂದೇ ಕಟ್ಟಡದಲ್ಲಿರುವಂತೆ ತಾಲೂಕು ಕಚೇರಿಗೆ ಕಾದಿರಿಸಿದ ನಾಲ್ಕು ಪ್ರದೇಶವನ್ನು ಕಂದಾಯ ಅಧಿಕಾರಿಗಳು ಪರಿಶೀಲನೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಗೇಟ್ ಇಲ್ಲದಿರುವುದು ಕಾರಣ
ಪಂಚಾಯತ್‌ನಿಂದ ನಿರ್ಮಾಸಿದ ಉಚಿತ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಜನರಿಗೆ ವಾಹನ ನಿಲ್ಲಿಸಲು ತಿಳಿಸಲಾಗಿದ್ದು ಜನರು ತಾಲೂಕು ಕಚೇರಿ ಅವರಣದ ಒಳಗೆ ಕೂಡ ಇಡುತ್ತಿದ್ದಾರೆ.ಈ ಬಗ್ಗೆ ತಾಲೂಕು ಆವರಣಕ್ಕೆ ಗೇಟ್ ಇಲ್ಲದಿರುವುದು ಕಾರಣವಾಗಿದ್ದು ಇಲಾಖೆ ಗೇಟ್ ನಿರ್ಮಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಸಮಸ್ಯೆ ಪರಿಹಾರ ವಾಗುತ್ತದೆ.
– ಸುಧಾಕರ ಹೆಗ್ಡೆ
ಅಧ್ಯಕ್ಷರು, ಗ್ರಾ.ಪಂ. ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.