ಬಿಸಿಸಿಐ ಆಡಳಿತಾತ್ಮಕ ಶಿಫಾರಸುಗಳ ಬಲ ಕುಗ್ಗಿದೆ: ಲೋಧಾ ಬೇಸರ
Team Udayavani, Aug 11, 2018, 8:24 AM IST
ಮುಂಬಯಿ: ಲೋಧಾ ಸಮಿತಿ ಶಿಫಾರಸುಗಳು ಕಸುವು ಕಳೆದುಕೊಂಡಿವೆ. ಇದು ನನಗೆ ಬೇಸರ ಉಂಟು ಮಾಡಿದೆ ಎಂದು
ನ್ಯಾ| ಆರ್. ಎಂ. ಲೋಧಾ ಬೇಸರ ವ್ಯಕ್ತಪಡಿಸಿದ್ದಾರೆ. ಗುರುವಾರ ಸರ್ವೋಚ್ಚ ನ್ಯಾಯಾಲಯ ಬಿಸಿಸಿಐ ಹೊಸ ಸಂವಿಧಾನವನ್ನು ಅಳವಡಿಸಿಕೊಳ್ಳ ಅಂತಿಮ ಆದೇಶ ನೀಡಿತ್ತು. ಈ ತೀರ್ಪಿಗೆ ಲೋಧಾ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಲೋಧಾ ಸಮಿತಿ ಈ ಹಿಂದೆ ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆಗಳನ್ನು ಸಿದ್ಧಪಡಿಸಿತ್ತು. ಅದನ್ನು 2016ರಲ್ಲಿ ನ್ಯಾಯಪೀಠ ಯಥಾವತ್ ಸ್ವೀಕರಿ ಸಿತ್ತು. ಗುರುವಾರ ಅಂತಿಮ ಆದೇಶ ನೀಡಿದ್ದ ನ್ಯಾಯಪೀಠ ಶಿಫಾರಸಿನಲ್ಲಿ ಹಲವು ಮಾರ್ಪಾಟು ಮಾಡಿತ್ತು.
ಈ ಮಾರ್ಪಾಟುಗಳು ಲೋಧಾ ಬೇಸರಕ್ಕೆ ಕಾರಣವಾಗಿವೆ. “ಬಿಸಿಸಿಐ ನಲ್ಲಿನ ಎಲ್ಲ ದೋಷಗಳನ್ನು ಓಡಿಸಬೇಕೆಂದು ಬಲವಾದ ಆಡಳಿತಾತ್ಮಕ ಸುಧಾರಣೆಗಳನ್ನು ಸಿದ್ಧಪಡಿಸಿದ್ದೆವು. ಅವೆಲ್ಲ ಈಗ ಶಕ್ತಿ ಕಳೆದುಕೊಂಡಿವೆ. ಬಿಸಿಸಿಐನಲ್ಲಿ ಬಲವಾದ ಆಡಳಿತಾತ್ಮಕ ವ್ಯವಸ್ಥೆ ಇರಬೇಕೆಂದು ನಾವು ಬಯಸಿದ್ದೆವು. ಅಂತಹ ವ್ಯವಸ್ಥೆಯಲ್ಲಿ ಒಂದು ಇಟ್ಟಿಗೆ ಅಲ್ಲಾಡಿದರೂ ಒಟ್ಟಾರೆ ರಚನೆಗೆ ಹೊಡೆತವಾಗುತ್ತದೆ’ ಎಂದಿದ್ದಾರೆ.
ಬಿಸಿಸಿಐ ಮೇಲೆ ಸರಕಾರದ ನಿಯಂತ್ರಣ ಇರಲೇಬಾರದು ಎಂದು ನಾವು ಬಯಸಿದ್ದೆವು. ಈ ಸ್ವಾಯುತ್ತ ಸಂಸ್ಥೆಗಳನ್ನು ಹಿಂಬಾಗಿಲಿ ನಿಂದ ಸರಕಾರ ನಿಯಂತ್ರಿಸಬಾರ ದೆನ್ನುವುದು ನಮ್ಮ ಉದ್ದೇಶ. ಆದರೆ ರೈಲ್ವೇಸ್, ಸರ್ವಿಸಸ್, ಯುನಿ ವರ್ಸಿಟೀಸ್‌ಗೆ ಈಗ ಮತದಾನ ಅವ ಕಾಶ ಲಭ್ಯವಾಗಿದೆ. ನಿರ್ಣಾಯಕ ಮತದಾನದಲ್ಲಿ ಇವು ಸರಕಾರದ ಪ್ರಭಾವಕ್ಕೆ ಕಾರಣವಾಗುತ್ತವೆ ಎಂದು ಲೋಧಾ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.