ಸಮೃದ್ಧ ಭಾರತ ನಿರ್ಮಾಣಕ್ಕೆ  ಕ್ರಿಯಾಶೀಲಗೊಳ್ಳಬೇಕಿದೆ ಮಾಧ್ಯಮ


Team Udayavani, Aug 11, 2018, 5:50 PM IST

11-agust-22.jpg

ಗದಗ: ದೇಶದ ಶಾಸಕಾಂಗ, ಕಾರ್ಯಾಂಗಕ್ಕಿಂತ ನ್ಯಾಯಾಂಗ ಹಾಗೂ ಮಾಧ್ಯಮಗಳ ಮೇಲೆ ಸಾರ್ವಜನಿಕರಿಗೆ ಅಪಾರ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸಮಸ್ಯೆಗಳ ನಿವಾರಣೆಯೊಂದಿಗೆ ಸಮಗ್ರ, ಸಮೃದ್ಧ ಭಾರತ ನಿರ್ಮಾಣಕ್ಕೆ ಮಾಧ್ಯಮಗಳು ಸಕಾರಾತ್ಮಕವಾಗಿ ಕ್ರಿಯಾಶೀಲಗೊಳ್ಳಬೇಕಿದೆ ಎಂದು ಭೂಪಾಲ್‌ ನ ನಿವೃತ್ತ ಪ್ರಾಧ್ಯಾಪಕ ಪ್ರೊ| ಕಮಲ ದೀಕ್ಷಿತ ಹೇಳಿದರು.

ಇಲ್ಲಿನ ಬಸವೇಶ್ವರ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಈಶ್ವರೀಯ ವಿಶ್ವ ವಿದ್ಯಾಲಯದ ಮಿಡಿಯಾ ವಿಂಗ್‌ ಸಹಯೋಗದಲ್ಲಿ ಪತ್ರಕರ್ತರಿಗೆ ಆಯೋಜಿಸಿದ್ದ ‘ಸಮಾಜದ ಸಕಾರಾತ್ಮಕ ಪರಿವರ್ತನೆಗೆ ಮಾಧ್ಯಮಗಳ ಪಾತ್ರ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲಿ ನಡೆದ ಅದೆಷ್ಟೋ ಭ್ರಷ್ಟಾಚಾರ, ಹಗರಣ ಹಾಗೂ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ನಿರ್ವಹಿಸಿವೆ. ಮಾಧ್ಯಮಗಳು ಸಮಾಜ ಕಾಯುವ ನಾಯಿಯಿದ್ದಂತೆ. ಸಮಾಜ ಹಾಗೂ ಆಡಳಿತ ವಲಯದಲ್ಲಿ ನಡೆಯುವ ತಪ್ಪುಗಳನ್ನು ಹಿರಿಯರು, ಹಿತೈಷಿಗಳ ಸ್ಥಾನದಲ್ಲಿ ನಿಂತು ಸರಿಪಡಿಸಿ, ಸನ್ಮಾರ್ಗವನ್ನು ತೋರಬೇಕಾದ ಜವಾಬ್ದಾರಿಯೂ ಮಾಧ್ಯಮಗಳ ಮೇಲಿದೆ ಎಂದು ಕಿವಿಮಾತು ಹೇಳಿದರು.

ಸೇವಾ ಕ್ಷೇತ್ರವಾಗಿದ್ದ ಮಾಧ್ಯಮ ಇತ್ತೀಚಿನ ವರ್ಷಗಳಲ್ಲಿ ಉದ್ಯಮದ ರೂಪ ಪಡೆದಿದ್ದು, ಸೇವಾ ಮನೋಭಾವ ಕ್ಷೀಣಿಸುತ್ತಿದೆ. ಸಮಾಜ ಸೇವೆಯೇ ಮುಖ್ಯ ಧ್ಯೇಯವನ್ನಾಗಿಸಿಕೊಂಡಿದ್ದ ಪತ್ರಕರ್ತರು ನೌಕರಿಗೆ ಸೀಮಿತವಾಗುತ್ತಿದ್ದಾರೆ. ಅದಕ್ಕಿರುವ ನಾನಾ ಕಾರಣಗಳನ್ನೂ ಕಡೆಗಣಸುವಂತಿಲ್ಲ. ಕೆಲ ಮಾಧ್ಯಮಗಳು ಏಕ ವ್ಯಕ್ತಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಲುಕಿ ನಲಗುತ್ತಿದೆ ಎಂದು ಕಳವಳ ವ್ಯಕ್ತಿಪಡಿಸಿದ ಅವರು, ಇಂದು ಉದ್ಯಮವಾಗಿ ಬೆಳೆದಿದೆ. ಸ್ವಾತಂತ್ರ್ಯ ಪಡೆಯುವಾಗಿನಿಂದ ಹಿಡಿದು ಇಂದಿನವರೆಗೂ ಮಾಧ್ಯಮಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಎಲ್ಲ ಅಡೆತಡೆಗಳನ್ನು ಮೀರಿ, ಸಮಾಜಮುಖೀ ವರದಿಗಳನ್ನು ನೀಡುವ ನಿಟ್ಟಿನಲ್ಲಿ ಪತ್ರಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಈಶ್ವರೀಯ ವಿಶ್ವ ವಿದ್ಯಾಲಯದ ಮಿಡಿಯಾ ವಿಂಗ್‌ನ ನ್ಯಾಷನಲ್‌ ಕೋ-ಆರ್ಡಿನೇಟರ್‌ ದೆಹಲಿಯ ಬಿ.ಕೆ. ಸುಶಾಂತ ಮಾತನಾಡಿ, ಸಕರಾತ್ಮಕ ಪರಿವರ್ತನೆಗೆ ಮಾಧ್ಯಮದ ಪಾತ್ರ ಕುರಿತು ಮಾತನಾಡಿದರು.

ದೆಹಲಿ ಮಿಡಿಯಾ ವಿಂಗ್‌ನ ಝೋನಲ್‌ ಕೋ-ಆರ್ಡಿನೇಟರ್‌ ಬಿ.ಕೆ. ಸುನಿತಾ ಮಾತನಾಡಿ, ಪ್ರತಿಯೊಬ್ಬರಲ್ಲಿ ಯೋಗ ಜ್ಞಾನ ಪ್ರಮುಖವಾಗಿದೆ. ಆದ್ದರಿಂದ ಆತ್ಮಶಾಂತಿಗಾಗಿ ಯೋಗ ಜ್ಞಾನ ಪ್ರಮುಖವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಯೋಗದ ಮೋರೆ ಹೋಗಬೇಕು ಎಂದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕನವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ವಿವಿಧ ಗ್ರಾಮೀಣ ಹಾಗೂ ತಾಲೂಕಿನ ಪತ್ರಕರ್ತರು ಭಾಗವಹಿಸಿದ್ದರು. 

ಟಾಪ್ ನ್ಯೂಸ್

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

siddaramaiah

Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ

1

Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

siddaramaiah

Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Crime: ಶೀಲ ಶಂಕಿಸಿ ಪತ್ನಿ  ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.