ಬೇಕಿದೆ ಮತ್ತಷ್ಟು ಮೂಲಸೌಕರ್ಯ
Team Udayavani, Aug 12, 2018, 6:00 AM IST
ಕಾರ್ಕಳ ಪುರಸಭೆಯ ಪೆರ್ವಾಜೆ-ಸದ್ಭಾವನ ನಗರ ವಾರ್ಡ್‌ನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದರೂ ಹೊಸ ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ಇತ್ಯಾದಿ ಇನ್ನೂ ಜೀವಂತವಾಗಿವೆ.
ಕಾರ್ಕಳ: ಪೆರ್ವಾಜೆ-ಸದ್ಭಾವನ ನಗರ ವಾರ್ಡ್‌ನ ಒಂದು ಭಾಗ ಹಿರ್ಗಾನ ಗ್ರಾ.ಪಂ. ಗಡಿಯಲ್ಲಿದೆ. ರಸ್ತೆ, ಚರಂಡಿ ವ್ಯವಸ್ಥೆ ಹೀಗೆ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಕೆಲವು ಅಭಿವೃದ್ಧಿ ಕಾರ್ಯಗಳು ನಡೆದರೂ ಇನ್ನೂ ಸಾಕಷ್ಟು ಬಾಕಿ ಇವೆ. ಈ ವಿಚಾರದಲ್ಲಿ ಜನರ ನಿರೀಕ್ಷೆಯೂ ಸಾಕಷ್ಟಿದೆ. ಈ ವಾರ್ಡ್‌ನಲ್ಲಿ ಕಳೆದ ನಾಲ್ಕೂ ಅವಧಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ವಾರ್ಡ್‌ನ ಕೆಲವು ಭಾಗದಲ್ಲಿ ನೀರಿನ ಸಮಸ್ಯೆಯಿದ್ದು, ಈಗಾಗಲೇ ನಾಲ್ಕು ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ ಆದರೆ ಆ ಎಲ್ಲ ಬೋರ್‌ವೆಲ್‌ಗಳು ಕೂಡ ನೀರಿಲ್ಲದೇ ನಿಷ್ಪ್ರಯೋಜವಾಗಿವೆ. ಜತೆಗೆ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ನಿರ್ಮಿಸಿದ ಬಾವಿಯೂ ಅಡಿಭಾಗದಲ್ಲಿ ಪಾದೆ ಕಲ್ಲಿನಿಂದಾಗಿ ಮುಂದುವರಿಸಲು ಸಾಧ್ಯವಾಗಿಲ್ಲ. ಸದ್ಯ ಪೂರ್ಣ ಪ್ರಮಾಣದ ನೀರಿಗಾಗಿ ಮುಂಡ್ಲಿ ಜಲಾಶಯವನ್ನೇ ಅವಲಂಭಿಸಬೇಕಾಗಿದೆ. ಮುಂಡ್ಲಿಯಲ್ಲಿ ನೀರಿಲ್ಲದಿದ್ದಾಗ ಇಲ್ಲಿ ತೊಂದರೆ ಉಂಟಾಗುತ್ತಿದ್ದು, ಪರ್ಯಾಯ ವ್ಯವಸ್ಥೆಯಾಗಬೇಕಿದೆ.
ಆದ ಕೆಲಸ
ಸೇತುವೆ ನಿರ್ಮಾಣ
ಪತ್ತೂಂಜಿಕಟ್ಟೆ-ಗುಂಡ್ಯ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಗೊಂಡಿದೆ. ನೂರಾರು ಮನೆಗಳಿಗೆ ಅವಶ್ಯಕತೆ ಇದ್ದ ಬಹು ಬೇಡಿಕೆಯ ಸೇತುವೆ ಇದಾಗಿತ್ತು. ಶಾಲಾ ಮಕ್ಕಳು, ಸಾರ್ವಜನಿಕರು ಸೇರಿದಂತೆ ಪ್ರತೀ ದಿನ ಈ ರಸ್ತೆಯಲ್ಲಿ ನೂರಾರು ಮಂದಿ ಓಡಾಡುತ್ತಾರೆ.
ನೀರಿನ ಟ್ಯಾಂಕ್
ಪತ್ತೂಂಜಿಕಟ್ಟೆ ಸರಕಾರಿ ಶಾಲೆಯ ಸಮೀಪದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದೆ. ಆ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಟ್ಯಾಂಕ್ ನಿರ್ಮಾಣದ ಅನಂತರ ಆ ಭಾಗದ ಹೆಚ್ಚಿನ ನೀರಿನ ಸಮಸ್ಯೆ ಬಗೆಹರಿದಿದೆ.
ಕಾಂಕ್ರಿಟ್ ರಸ್ತೆಗಳು
ಪ್ರಮುಖ ರಸ್ತೆಯಾದ ಪತ್ತೂಂಜಿಕಟ್ಟೆ-ಮೂರುಸೆನ್ಸ್ ಮಿಲ್ ಸಮೀಪದ ರಸ್ತೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ವಾರ್ಡ್‌ನಲ್ಲಿ ಬರುವ ಪ್ರಮುಖ ರಸ್ತೆ ಇದಾಗಿದ್ದು, 25 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಲಾಗಿದೆ. ವಾಹನ ಸಂಚಾರಕ್ಕೆ ಯೋಗ್ಯವಾಗಿದೆ.
ಆಟದ ಮೈದಾನ
ವಾರ್ಡ್‌ನಲ್ಲಿ ಸಾಧಾರಣ ಮಟ್ಟದ ಆಟದ ಮೈದಾನವೊಂದು ನಿರ್ಮಾಣವಾಗಿದೆ. ಹೀಗಾಗಿ ಅಲ್ಲಿನ ಸಣ್ಣ ಮಕ್ಕಳಿಗೆ ಆಟಕ್ಕೆ ಇತರೆಡೆಗೆ ತೆರಳಬೇಕಾದ ಅವಶ್ಯಕತೆಯಿಲ್ಲ. ಪತ್ತೂಂಜಿಕಟ್ಟೆ ಪ್ರದೇಶದಲ್ಲಿ ಪಾರ್ಕ್ ಕೂಡ ನಿರ್ಮಾಣಗೊಂಡಿದೆ.
ದಾರಿದೀಪ
ವಾರ್ಡ್‌ನ ಒಳಭಾಗದ ರಸ್ತೆಗಳಲ್ಲಿ ದಾರಿದೀಪಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಭಾಗಕ್ಕೆ ತೆರಳುವ ರಸ್ತೆಗಳಲ್ಲಿಯೂ ವ್ಯವಸ್ಥಿತವಾಗಿ ದಾರಿದೀಪಗಳ ವ್ಯವಸ್ಥೆ ಮಾಡಲಾಗಿದೆ.
ಆಗದೆ ಇರುವ ಕೆಲಸ
ಹೊಸ ರಸ್ತೆಗಳು
ಮೂರುಸೆನ್ಸ್ ಭಾಗದಲ್ಲಿ ಈಗಾಗಲೇ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಸಮೀಪದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಣವಾಗಬೇಕಿದೆ. ಹೆಚ್ಚು ನೀರು ನಿಲ್ಲುವ ಪ್ರದೇಶವಾದ್ದರಿಂದ ಅಲ್ಲಿ ಡಾಮಾರು ಸೂಕ್ತವಲ್ಲ. ಜತೆಗೆ ಕೆಲವು ಹೊಸ ರಸ್ತೆಗಳು ರಸ್ತೆಗಳ ನಿರ್ಮಾಣ, ಇದ್ದ ರಸ್ತೆಗಳು ಮೇಲ್ದರ್ಜೆಗೇರಬೇಕಿದೆ. ಚರಂಡಿ ವ್ಯವಸ್ಥೆಯೂ ಆಗಬೇಕಿದೆ.
ಬಾವಿ ನಿರ್ಮಾಣವಾಗಬೇಕು
ಮೂರು ಸೆನ್ಸ್ ಸಮೀಪದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಆ ಭಾಗದಲ್ಲಿ ಒಂದು ಬಾವಿ ನಿರ್ಮಾಣ ಆಗಬೇಕು ಎನ್ನುವ ಬೇಡಿಕೆ ಬಹಳ ಸಮಯದಿಂದ ಇದೆ. ಶೀಘ್ರ ಬಾವಿ ಅಥವಾ ಬೋರ್‌ವೆಲ್ ನಿರ್ಮಾಣ ಗೊಂಡಲ್ಲಿ ಈ ಭಾಗದ ಜನರ ನೀರಿನ ಸಮಸ್ಯೆ ಬಗೆಹಗರಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.