ಗ್ರಂಥಾಲಯ ಪಿತಾಮಹನ ನೆನೆಯುತ್ತಾ…


Team Udayavani, Aug 12, 2018, 12:30 AM IST

41.jpg

ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್‌. ಆರ್‌. ರಂಗನಾಥನ್‌ ಪ್ರಮುಖ ಕಾರಣ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ರಂಗನಾಥನ್‌ಸಂದೇಶಗಳು ಮಾರ್ಗದರ್ಶಕವಾಗಿ ನೆಲೆನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚಸೂತ್ರಗಳು ಜಗನ್ಮಾನ್ಯತೆ ಗಳಿಸಿವೆ. ಒಂದು ಮಾತಂತೂ ಸತ್ಯ. ದೇಶದಲ್ಲಿ ಎಸ್‌.ಆರ್‌.ರಂಗನಾಥನ್‌ಅವರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೂಬ್ಬರಿಲ್ಲ.

ಶೃತಿ ಸ್ಮತಿಗಳಾಗಿ ಭಾರತೀಯ ವಾಗ್ಮಿಯ ಬಹಳ ಹಿಂದೆಯೇ ಅಕ್ಷರ ರೂಪವನ್ನು ತಾಳಿತಷ್ಟೆ. ಅಂದಿನ ಬರಹಗಾರರು ಕಲ್ಲು ಗಿಡದ ತೊಗಟೆ ತಾಡವೋಲೆ ಮುಂತಾದ ಮಾಧ್ಯಮಗಳನ್ನು ಉಪಯೋಗಿಸುತ್ತಿ ದ್ದರು. ಹೀಗೆ ಕಾಲಾನುಕ್ರಮದಲ್ಲಿ ಗ್ರಂಥಗಳನ್ನು ಸಂಗ್ರಹಿಸುವ, ಕೂಡಿಸುವ, ಪ್ರತಿ ಮಾಡುವ ಕಾರ್ಯಗಳು ಅನೂಚಾನವಾಗಿ ಹಾಗೂ ಅವ್ಯಾಹತವಾಗಿ ನಡೆದು ಬಂದಿವೆ. ಆದರೆ ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿ ಸಲ್ಲಬೇಕಾದದ್ದು ಅಗ್ರಗಣ್ಯರಾದ ಡಾ. ಎಸ್‌. ಆರ್‌. ರಂಗನಾಥನ್‌ ಅವರಿಗೆ. ಇವರ ಪೂರ್ಣ ಹೆಸರು ಶಿಯಾಳಿ ರಾಮಾಮೃತ ರಂಗನಾಥನ್‌. 

ಎಸ್‌. ಆರ್‌. ರಂಗನಾಥನ್‌ ಒಂದು ಸಾಮಾನ್ಯ ಬಡ ಕುಟುಂಬಕ್ಕೆ ಸೇರಿದವರಾಗಿದ್ದರು. ಎನ್‌ ರಾಮಾಮೃತ ರಂಗನಾಥನ್‌, ಸೀತಾಲಕ್ಷ್ಮೀ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀಯುತರು ಅತಿ ಬಡತನದಲ್ಲೇ ಬೆಳೆದು ಉನ್ನತ ಸ್ಥಾನಕ್ಕೆ ಬಂದವರು. ಇವರು ಗಣಿತ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿ ಸುತ್ತಿದ್ದರು. ಗ್ರಂಥಪಾಲಕ ಹುದ್ದೆಗೆ ಕರೆ ಬಂದಾಗ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ಹೊಸ ಕೆಲಸವನ್ನು ಬಹಳ ಶ್ರದ್ಧೆಯಿಂದ ವಹಿಸಿಕೊಂಡರು. 

ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ, ಪ್ರಚಾರ ಮಾಡುವಲ್ಲಿ ಅವರೇ ಮೊದಲಿಗರು. ದೇಶದಲ್ಲಿ ಎಸ್‌.ಆರ್‌.ರಂಗನಾಥನ್‌ರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೂಬ್ಬರಿಲ್ಲ. ಆದುದರಿಂದ ಅವರನ್ನು ಗ್ರಂಥಾ ಲಯ ಪಿತಾಮಹ ಎಂದು ಕರೆಯಲಾಗಿದೆ. ಹಳ್ಳಿ ಯಿಂದ ಹಿಡಿದು ದಿಲ್ಲಿಯವರೆಗೆ ಗ್ರಂಥಾಲಯದ ಮೂಲ ತತ್ವಗಳ ತೋರಣವನ್ನು ತೂಗಿಬಿಡುವಲ್ಲಿ ಅವರ ನಿಷ್ಠೆ ಮತ್ತು ಶ್ರಮ ಅಪಾರವಾದದು. 

ಸ್ನಾತಕೋತ್ತರ ಮಟ್ಟದ ಗ್ರಂಥಾಲಯ ವಿಜ್ಞಾನ ವನ್ನು ಕಲಿಸುವ ವ್ಯವಸ್ಥೆ ಮಾಡುವಲ್ಲಿ ಅವರ ಪಾತ್ರ ಬಹಳಷ್ಟಿದೆ. ಭಾರತದ ಗ್ರಂಥಪಾಲಕರ ಮತ್ತು ಗ್ರಂಥಾಲಯ ವಿಜ್ಞಾನದ ಪ್ರಾಧ್ಯಾಪಕರ ವೇತನ ಶ್ರೇಣಿಯನ್ನು ಎತ್ತರಿಸುವಲ್ಲಿ ಮತ್ತು ಇತರರಿಗೆ‌ ಸಿಗುವ ಸೌಲಭ್ಯಗಳನ್ನು ಈ ವೃತ್ತಿಗೂ ದೊರಕಿಸಿಕೊಡುವಲ್ಲಿ ಅವರದು ಪ್ರಮುಖ ಪಾತ್ರವಾಗಿದೆ. ಅವರ ಅವಿರತ ಸೇವೆಯಿಂದಾಗಿ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದಲ್ಲಿಯೇ ಅವರ ಹೆಸರು ಚಿರಸ್ಥಾಯಿಯಾಗಿದೆ.

ಡಾ. ಎಸ್‌. ಆರ್‌. ರಂಗನಾಥನ್‌ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನವನ್ನು ಕುರಿತು 60ಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ಹಾಗೂ ಸುಮಾರು 2500 ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಗ್ರಂಥಾಲ ಯದ ಪಂಚ ಸೂತ್ರಗಳು, ರಾಮಾನುಜನ್‌-ದ ಮ್ಯಾನ್‌ ಆ್ಯಂಡ್‌ ಮೆತಮಟೀಷಿಯನ್‌, ಕ್ಲಾಸಿಫೈಡ್‌ ಕೆಟ್ಲಾಗ್‌,ಡಿಕ್ಷನರಿ ಕೆಟ್ಲಾಗ್‌, ಲೈಬ್ರರಿ ಅಡ್ಮಿನಿಸ್ಟ್ರೇಷನ್‌, ಇಂಡಿಯನ್‌ ಲೈಬ್ರರಿ ಮ್ಯಾನಿಫೆಸ್ಟೋ, ಲೈಬ್ರರಿ ಮ್ಯಾನುವಲ್‌ ಫಾರ್‌ ಲೈಬ್ರರಿ ಅಥಾರಿಟೀಸ್‌, ಲೈಬ್ರರಿ ಯನ್ಸ್‌ ಆ್ಯಂಡ್‌ ಲೈಬ್ರರಿ ವರ್ಕರ್ಸ್‌, ಕ್ಲಾಸಿಫಿಕೇಷನ್‌-ಕಮ್ಯುನಿಕೇಶನ್‌, ಕಂಪ್ಯಾರಿಟಿವ್‌ ಸ್ಟಡಿ ಆಫ್ ಫೈವ್‌ ಕ್ಯಾಟಲಾಗ್ಸ್‌ ಹೀಗೆ ಹತ್ತು ಹಲವಾರು ಗ್ರಂಥಗಳು ಅವರಿಗಿದ್ದ ಆಳವಾದ ವಿದ್ವತ್ತನ್ನು ಮತ್ತು ಅನುಭವನ್ನು ಎತ್ತಿ ತೋರಿಸುತ್ತವೆ. 

ದೆಹಲಿ ವಿಶ್ವವಿದ್ಯಾಲಯ 1948 ಮತ್ತು ಪಿಟ್ಸ್‌ ಬರ್ಗ್‌ ವಿಶ್ವವಿದ್ಯಾಲಯ 1964ರಲ್ಲಿ ಡಿ.ಲಿಟ್‌ ಪದವಿ ಯನ್ನು  ಹಾಗೂ 1935ರಲ್ಲಿ ಬ್ರಿಟಿಷ್‌ ಸರಕಾರ ರಾವ್‌ ಸಾಹೇಬ್‌ ಬಿರುದು, ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. 1970ರಲ್ಲಿ ಅಮೆರಿಕದ ಮಾರ್ಗರೇಟ್‌ ಮಾನ್‌ ಪಾರಿತೋಷಕವನ್ನು ಪಡೆದ ಪ್ರಥಮ ಭಾರತೀಯರಿವರು. ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್‌. ಆರ್‌. ರಂಗ ನಾಥನ್‌ರೇ ಪ್ರಮುಖ ಕಾರಣ. ಕರ್ನಾಟಕದಲ್ಲಿ ಸಾರ್ವ ಜನಿಕ ಗ್ರಂಥಾಲಯ ಕಾನೂನು 1965ರಲ್ಲಿ ಸರಕಾರದಿಂದ ಸ್ವೀಕೃತವಾಗಿ 1966ರಲ್ಲಿ ಕಾರ್ಯ ರೂಪಕ್ಕೆ ತರುವಲ್ಲಿ ಅವರೇ ಮೂಲ ಪುರುಷರು. ಅವರ ಅದ್ವಿತೀಯ ಸೇವೆಯನ್ನು ಪರಿಗಣಿಸಿ ಸರ್ಕಾ ರವು 2007ರಿಂದ ಅವರ ಹುಟ್ಟು ಹಬ್ಬದ ದಿನವಾದ ಅಗಸ್ಟ 12ರಂದು ಗ್ರಂಥಪಾಲಕರ ದಿನಾಚರಣೆ ಯಾಗಿ ಆಚರಿಸಬೇಕೆಂದು ಆದೇಶ ಹೊರಡಿಸಿದೆ. 

ಗ್ರಂಥಾಲಯ ಸೇವೆಯಲ್ಲಿರುವವರಿಗೆ ಡಾ. ಎಸ್‌. ಆರ್‌. ರಂಗನಾಥನ್‌ರ ಸಂದೇಶಗಳು ಮಾರ್ಗದರ್ಶಕ ವಾಗಿ ನೆಲೆನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚಸೂತ್ರಗಳು 1.  ಗ್ರಂಥ ಓದಲು 2.  ಗ್ರಂಥ ಕ್ಕೊಬ್ಬರು 3.  ಎಲ್ಲರಿಗೂ ಗ್ರಂಥಗಳು 4.  ಓದುಗರ ಸಮಯವನ್ನು ಉಳಿಸಿರಿ 5.  ಗ್ರಂಥಾಲಯ ಬೆಳೆ ಯುವ ಶಿಶು ಗ್ರಂಥಪಾಲಕರಿಗೆ ದಾರಿದೀಪವಾಗಿವೆ. ಡಾ. ಎಸ್‌. ಆರ್‌. ರಂಗನಾಥ್‌ ಹಾಕಿಕೊಟ್ಟ ಹಾದಿ ಯಲ್ಲಿ ಪ್ರತಿಯೊಬ್ಬ ಗ್ರಂಥಪಾಲಕರೂ ನಡೆಯುತ್ತಾ ಬರುತ್ತಿರುವುದು ಶ್ಲಾಘನೀಯ. 

ವೀರಣ್ಣ ಭ ಬಬ್ಲಿ

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.