ರಂಗಮಂದಿರ ಕಾಮಗಾರಿ ನನೆಗುದಿಗೆ
Team Udayavani, Aug 12, 2018, 5:18 PM IST
ಇಳಕಲ್ಲ: ವೃತ್ತಿರಂಗಭೂಮಿ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿರುವ ನಗರದಲ್ಲಿ ವೃತ್ತಿ ರಂಗಕಲಾವಿದರಿಗೆ ತಮ್ಮ ಪ್ರತಿಭೆ ಹೊರಹೊಮ್ಮಿಸಲು ಒಂದು ಸುಸಜ್ಜಿತ ರಂಗಮಂದಿರ ಇಲ್ಲವಾಗಿದೆ. ದಿ. ಎಸ್.ಆರ್. ಕಾಶಪ್ಪನವರ ಅವರು ಸಚಿವರಾಗಿದ್ದಾಗ ಗಾಯತ್ರಿ ಬಯಲು ರಂಗಮಂದಿರ ಎಂಬ ನಾಮಕರಣದಿಂದ ಭೂಮಿಪೂಜೆ ನೆರವೇರಿಸಿದ್ದರು. ಅವರ ಅಕಾಲಿಕ ನಿಧನದಿಂದ ಬಯಲು ರಂಗಮಂದಿರದ ಕಾಮಗಾರಿ ಕೆಲಸ ಪ್ರಾರಂಭಗೊಳ್ಳಲಿಲ್ಲ.
ನಂತರ 2006ರಲ್ಲಿ ಸುವರ್ಣ ಕರ್ನಾಟಕ ವರ್ಷಾಚರಣೆ ಸವಿನೆನಪಿನ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯದ 7 ಭಾಗಗಳಲ್ಲಿ ಸುವರ್ಣ ರಂಗ ಮಂದಿರ ನಿರ್ಮಿಸಲು ಉದ್ದೇಶಿಸಿ 25 ಲಕ್ಷ ಅನುದಾನವನ್ನು ಮಂಜೂರು ಮಾಡಿತು. ರಾಜ್ಯದ 7 ಭಾಗಗಳಲ್ಲಿ ಇಳಕಲ್ಲ ನಗರವು ಒಂದಾಗಿದ್ದು, ಅಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಅ.10, 2006ರಂದು ಇಳಕಲ್ಲಗೆ ಆಗಮಿಸಿ ಸುವರ್ಣ ರಂಗಮಂದಿಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಆಗ ಶಾಸಕರಾಗಿದ್ದ ದೊಡ್ಡನಗೌಡ ಪಾಟೀಲ ಸುವರ್ಣ ರಂಗ ಮಂದಿರ ಕೇವಲ 25ಲಕ್ಷದಿಂದ ನಿರ್ಮಾಣಗೊಳ್ಳುವುದು ಅಸಾಧ್ಯ. ಅದಕ್ಕಾಗಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರಿಂದ ಹೆಚ್ಚುವರಿಯಾಗಿ 50ಲಕ್ಷ ಅನುದಾನಕ್ಕೆ ಒತ್ತಾಯಿಸಿ ಮಂಜೂರು ಮಾಡಿಸಿದ್ದರು. ಆದರೆ ರಂಗಮಂದಿರಕ್ಕಾಗಿ ಕಾಯ್ದಿರಿಸಿದ್ದ ನಿವೇಶನ ನಗರಸಭೆಯಿಂದ ಕನ್ನಡ ಹಾಗೂ ಸಂಸ್ಕೃತ ಇಲಾಖೆಗೆ ವರ್ಗಾವಣೆ ಮಾಡಬೇಕಿತ್ತು. ಅಲ್ಲದೇ ಈ ನಿವೇಶನದಲ್ಲಿದ್ದ ರಂಗಮಂದಿರ ಒಡೆಯುವುದಕ್ಕೆ ಕೆಲವೊಂದು ತಾಂತ್ರಿಕ ಅಡಚಣೆಗಳಿಂದಾಗಿ ಅಂದಿನ ಶಾಸಕ ದೊಡ್ಡನಗೌಡ ಪಾಟೀಲ ಅವಧಿಯಲ್ಲಿ ಯಾವುದೇ ಪ್ರಗತಿಯಾಗಲಿಲ್ಲ.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸ್ಥಾನವು ಇದೇ ಭಾಗದಲ್ಲಿ ಆಯ್ಕೆಗೊಂಡ ಕಲಾವಿದೆ ಉಮಾಶ್ರೀ ಅವರು ವಹಿಸಿಕೊಂಡಾಗ ಕಲಾವಿದರ ಕಷ್ಟಗಳನ್ನು ಒಬ್ಬ ಕಲಾವಿದೆಯೇ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬಂತೆ ಇವರ ಅವಧಿ ಯಲ್ಲಿ ಸುವರ್ಣ ರಂಗ ಮಂದಿರ ಪೂರ್ಣಗೊಳ್ಳವುದು ಎಂದು ಸಾಕಷ್ಟು ಕನಸು ಕಂಡ ಕಲಾವಿದರಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಸೆ.18 2013ರಲ್ಲಿ ಸುವರ್ಣ ರಂಗಮಂದಿರ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು. ಒಟ್ಟು 1.50 ಲಕ್ಷ ಮೊತ್ತದ ಕಾಮಗಾರಿಗೆ ಈಗಾಗಲೇ 75 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಇನ್ನೂ 75 ಲಕ್ಷ ಅನುದಾನವನ್ನು ತಂದು ಭವ್ಯ ರಂಗಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದಾಗ ನಗರದ ಕಲಾವಿದರಲ್ಲಿ ಹೊಸದೊಂದು ಆಸೆ ನೆಲೆಸಿತು. ಬಿಡುಗಡೆಯಾಗಿದ್ದ 75ಲಕ್ಷ ಅನುದಾನದಲ್ಲಿ ಅಡಿಪಾಯದವರೆಗೆ ನಿರ್ಮಿಸಿದ ಭೂ ಸೇನಾ ನಿಗಮ ಅನುದಾನದ ಕೊರತೆಯಿಂದ ಕಾಮಗಾರಿ ಕೆಲಸ ಆಮೆಗತಿಯಲ್ಲಿ ಕುಂಟುತ್ತ ಸಾಗಿತು.
ಭೂ ಸೇನಾ ನಿಗಮ ಕಾಮಗಾರಿ ಕೆಲಸವನ್ನು ಸರಿಯಾಗಿ ನಿರ್ವಹಿಸಿದ ಕಾರಣ ನಿರ್ಮಿತಿ ಕೇಂದ್ರಕ್ಕೆ ಕೇಂದ್ರಕ್ಕೆ ಕಾಮಗಾರಿ ಕೆಲಸವನ್ನು ವಹಿಸಿ ಇಲಾಖೆಯು 50 ಲಕ್ಷ ಅನುದಾನವನ್ನು ಸಹಿತ ಮಂಜೂರು ಮಾಡಿದ್ದೇವೆ. ಆದರೆ ನಿರ್ಮಿತ ಕೇಂದ್ರದವರು 50 ಲಕ್ಷ ಅನುದಾನವನ್ನು ಮರಳಿಸಿದ್ದರೇ ಪಿಡಿ.ಖಾತೆಗೆ ಜಮಾ ಬರಬೇಕಿತ್ತು. ಅನುದಾನ ಮರಳಿಸಿದ ಒಂದು ಪ್ರತಿಯನ್ನಾದರೂ ಇಲಾಖೆಗೆ ಕಳುಹಿಸಬೇಕಿತ್ತು. ಈಚೆಗೆ ಎ.ಜಿ. ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ನಿರ್ಮಿತ ಕೇಂದ್ರದವರು ಕಾಮಗಾರಿ ಕೆಲಸ ಆರಂಭಿಸುವುದಾಗಿ ಹೇಳಿದ್ದರು.
ನಾಗರಾಜ,
ಕನ್ನಡ-ಸಂಸ್ಕೃತಿ ಇಲಾಖೆ ಅಧಿಕಾರಿ.
ಭೂ ಸೇನಾ ನಿಗಮ ಕಾಮಗಾರಿ ಕೆಲಸವನ್ನು ಅರ್ಧಕ್ಕೆ ಮೊಟುಕುಗೊಳಿಸಿದ್ದರಿಂದ ಅಂದಿನ ಶಾಸಕರಾದ ವಿಜಯಾನಂದ ಕಾಶಪ್ಪನವರ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಕೆಲಸ ವಹಿಸಿದ್ದರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 50 ಲಕ್ಷ ಅನುದಾನವನ್ನು ಮಂಜೂರು ಮಾಡಿದ ಎರಡು ತಿಂಗಳಲ್ಲೆ ಇಲಾಖೆಯು ಅನುದಾನವನ್ನು ಮರಳಿಸುವಂತೆ ಸೂಚಿಸಿದ್ದರಿಂದ ಕಾಮಗಾರಿ ಕೆಲಸ ಮುಂದುವರಿಸಲಿಲ್ಲ.
ಶಂಕರಲಿಂಗ ಗೋಗಿ, ನಿರ್ಮಿತ ಕೇಂದ್ರ ಯೋಜನಾ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.