ಶ್ರೀಲಂಕಾಕ್ಕೆ 178 ರನ್ ಜಯಭೇರಿ
Team Udayavani, Aug 13, 2018, 6:15 AM IST
ಕೊಲಂಬೊ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ಅಖೀಲ ಧನಂಜಯ ಅವರ ಮಾರಕ ದಾಳಿಯಿಂದಾಗಿ ಶ್ರೀಲಂಕಾ ತಂಡವು 178 ರನ್ನುಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಪಂದ್ಯದಲ್ಲಿ ಸೋತರೂ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ. 29 ರನ್ನಿಗೆ 6 ವಿಕೆಟ್ ಕಿತ್ತ ಅಖೀಲ ಧನಂಜಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜೀನ್‌ಪಾಲ್ ಡ್ಯುಮಿನಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಈಗಾಗಲೇ ಸರಣಿ ಕಳೆದುಕೊಂಡರೂ ಶ್ರೀಲಂಕಾ ತಂಡವು ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಆಟವಾಡಿತು. ಎಲ್ಲ ಆಟಗಾರರ ಉತ್ತಮ ಆಟದಿಂದಾಗಿ ಶ್ರೀಲಂಕಾ ತಂಡವು 8 ವಿಕೆಟಿಗೆ 299 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ನಾಯಕ ಏಂಜೆಲೊ ಮ್ಯಾಥ್ಯೂಸ್ 97 ಎಸೆತಗಳಿಂದ 97 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. 11 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು. ಆರಂಭಿಕ ನಿರೋಶನ್ ಡಿಕ್ವೆಲ್ಲ 43 ರನ್ ಹೊಡೆದರೆ ಮೆಂಡಿಸ್ 38 ರನ್ ಗಳಿಸಿದರು.
ಆರಂಭಿಕ ವೈಫಲ್ಯ
ಗೆಲ್ಲಲು ಕಠಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ಆರಂಭದಲ್ಲಿಯೇ ಎಡವಿತು. ರನ್ ಖಾತೆ ತೆರೆಯುವ ಮೊದಲೇ ತಂಡ ಹಾಶಿಮ್ ಆಮ್ಲ ಅವರ ವಿಕೆಟನ್ನು ಕಳೆದುಕೊಂಡಿತ್ತು. ಆ ಬಳಿಕ ಅಖೀಲ ಧನಂಜಯ ಅವರ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 24.4 ಓವರ್‌ಗಳಲ್ಲಿ 121 ರನ್ನಿಗೆ ಆಲೌಟಾಯಿತು. ನಾಯಕ ಕ್ವಿಂಟನ್ ಡಿ ಕಾಕ್ 54 ರನ್ ಗಳಿಸಿದರು. ಮಾರಕ ದಾಳಿ ಸಂಘಟಿಸಿದ ಧನಂಜಯ 29 ರನ್ನಿಗೆ 6 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು
ಶ್ರೀಲಂಕಾ 9 ವಿಕೆಟಿಗೆ 299 (ನಿರೋಶನ್ ಡಿಕ್ವೆಲ್ಲ 43, ಮೆಂಡಿಸ್ 38, ಏಂಜೆಲೊ ಮ್ಯಾಥ್ಯೂಸ್ 97, ಡಿ ಸಿಲ್ವ 30, ಮುಲ್ಡರ್ 50ಕ್ಕೆ 2, ಫೆಹ್ಲುಕ್ವಾಯೊ 60ಕ್ಕೆ 2); ದಕ್ಷಿಣ ಆಫ್ರಿಕಾ 24.4 ಓವರ್‌ಗಳಲ್ಲಿ 121 (ಕ್ವಿಂಟನ್ ಡಿ ಕಾಕ್ 54, ಮಾರ್ಕ್‌ರಮ್ 20, ಅಖೀಲ ಧನಂಜಯ 29ಕ್ಕೆ 6, ಕುಮಾರ 34ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.