ಸ್ನೇಹಿತರ ದಿನಕ್ಕೆ 45 ಲಕ್ಷ ಹಂಚಿದ!
Team Udayavani, Aug 13, 2018, 10:26 AM IST
ಜಬಲ್ಪುರ: ಸ್ನೇಹಿತರ ದಿನದಂದು ಗೆಳೆಯರ ಕೈಗೆ ಬ್ಯಾಂಡ್ ಕಟ್ಟುವುದನ್ನು, ಸಣ್ಣಪುಟ್ಟ ಉಡುಗೊರೆ ನೀಡುವುದನ್ನು ನೋಡಿದ್ದೇವೆ. ಆದರೆ, ಮಧ್ಯಪ್ರದೇಶದ 10ನೇ ತರಗತಿಯ ಬಾಲಕನೊಬ್ಬ ಬರೋಬ್ಬರಿ 45 ಲಕ್ಷ ರೂ.ಗಳನ್ನು ಫ್ರೆಂಡ್ಶಿಪ್ ಡೇಗೆ ಖರ್ಚು ಮಾಡಿದ್ದಾನೆ.
ಜಬಲ್ಪುರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಜಮೀನು ಮಾರಿ ಬಂದಿದ್ದ 60 ಲಕ್ಷ ರೂ.ಗಳನ್ನು ಬೀರುವಿನಲ್ಲಿ ಇರಿಸಿದ್ದರು. ಈ ಪೈಕಿ 45 ಲಕ್ಷ ರೂ. ಎತ್ತಿಕೊಂಡು ಹೋದ ಅವರ ಪುತ್ರ, 15 ಲಕ್ಷ ರೂ.ಗಳನ್ನು ದಿನಗೂಲಿ ನೌಕರರೊಬ್ಬನ ಮಗನಿಗೆ, 3 ಲಕ್ಷ ರೂ.ವನ್ನು ಹೋಂವರ್ಕ್ ಮುಗಿಸಿದ ಸ್ನೇಹಿತನಿಗೆ “ಉಡುಗೊರೆ’ಯಾಗಿ ನೀಡಿದ್ದಾನೆ. ಸಹಪಾಠಿಗಳು, ಕಷ್ಟದಲ್ಲಿರುವವರು, ಹೀಗೆ ಅಗತ್ಯವಿರುವ ಎಲ್ಲರಿಗೂ ಹಣ ನೀಡಿ ಮುಗಿಸಿದ್ದಾನೆ.
ಬೀರು ತೆರೆದು ನೋಡುವವರೆಗೆ ತಂದೆಗೆ ಈ ವಿಚಾರವೇ ಗೊತ್ತಿರಲಿಲ್ಲ. ಹಣ ಕಾಣೆಯಾಗಿದ್ದು ಕಂಡ ಕೂಡಲೇ ದೂರು ನೀಡಿದರು. ವಿಚಾರಣೆ ಆರಂಭಿಸಿದ ಬಳಿಕ ಮಗನ ಕೃತ್ಯ ಬೆಳಕಿಗೆ ಬಂದಿದೆ. ಆತ 35ಕ್ಕೂ ಹೆಚ್ಚು ಸ್ನೇಹಿತರಿಗೆ ಸ್ಮಾರ್ಟ್ ಫೋನ್, ಬೆಳ್ಳಿ ಬ್ರೇಸ್ಲೆಟ್ ಮೊದಲಾದವುಗಳನ್ನು ಖರೀದಿಸಿ ನೀಡಿದ್ದಾನೆ. 15 ಲಕ್ಷ ಪಡೆದುಕೊಂಡಾತ ಅದರಿಂದ ಕಾರು ಖರೀದಿಸಿದ್ದಾನೆ. ಹಣ ಪಡೆದುಕೊಂಡವರಿಗೆ 5 ದಿನ ಸಮಯ ನೀಡಲಾಗಿದ್ದು, ಹಣ ವಾಪಸ್ ನೀಡಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Encounter: ಉತ್ತರಪ್ರದೇಶದಲ್ಲಿ ಎನ್ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್ಎಚ್ಆರ್ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.