PF ಭವಿಷ್ಯಕ್ಕೊಂದು ಭದ್ರತೆ
Team Udayavani, Aug 13, 2018, 2:46 PM IST
ಸುಂದರ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಬೇಕು ಎಂಬ ಆಸೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ತಮ್ಮ ಕುಟುಂಬ ನಿರ್ವಹಣೆಗೆ ಇದು ಅಗತ್ಯವೂ ಆಗಿದೆ. ಹೀಗಿದ್ದಾಗಲೂ ಕೈಯಲ್ಲಿದ್ದ ಹಣ ಒಂದಲ್ಲ ಒಂದು ರೂಪದಲ್ಲಿ ಖರ್ಚಾಗಿ ಬಿಡುತ್ತದೆ. ಈ ನಿಟ್ಟಿನಲ್ಲಿ ಹಣ ಉಳಿತಾಯ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ. ಹಣ ಉಳಿತಾಯಕ್ಕೆ ಭವಿಷ್ಯ ನಿಧಿ ತುಂಬಾ ಸಹಕಾರಿಯಾಗುತ್ತದೆ. ಹೆಚ್ಚಿನ ಸಂಸ್ಥೆಗಳಲ್ಲಿ ತಮ್ಮ ನೌಕರರಿಗೆ ಪಿಎಫ್ ಸೌಲಭ್ಯ ನೀಡುತ್ತಾರೆ. ಖಾತೆ ನಿವೃತ್ತಿ ಅನಂತರದ ಉಳಿತಾಯ ಯೋಜನೆ ಇದಾಗಿದ್ದು, ಸಿಬಂದಿಯ ಸಂಬಳದಲ್ಲಿ ಒಂದಿಷ್ಟು ಹಣ ಪಿಎಫ್ ಖಾತೆಗೆ ಕಡಿತವಾಗುತ್ತದೆ. ಅದೇ ರೀತಿ ಮಾಲಕರು ಸಿಬಂದಿಯ ಖಾತೆಗೆ ಹಣ ಹೂಡಿಕೆ ಮಾಡುತ್ತಾರೆ.
ಒಂದು ಸಂಸ್ಥೆಯಲ್ಲಿ 5 ಮಂದಿಗಿಂತ ಹೆಚ್ಚು ಸಿಬಂದಿಯಿದ್ದರೆ ಆ ಸಂಸ್ಥೆ ಭವಿಷ್ಯ ನಿಧಿ ಯೋಜನೆಗೆ ಒಳಪಡಬೇಕು. ನೌಕರರು ತಾನು ಕೆಲಸ ನಿರ್ವಹಿಸುವ ಸಂಸ್ಥೆಯಲ್ಲಿ ಕನಿಷ್ಠ 6,500 ರೂ.ನಿಂದ ಹೆಚ್ಚಿನ ಸಂಬಳ ಪಡೆಯುವವನಾಗಿದ್ದರೆ ಆತ ಪಿಎಫ್ ಲಾಭ ಪಡೆಯಲು ಅರ್ಹನಾಗಿರುತ್ತಾರೆ.
ಈ ಸಮಯದಲ್ಲಿ ಪ್ರತೀ ತಿಂಗಳ ತನ್ನ ಸಂಬಳದಲ್ಲಿ ಶೇ. 12ರಷ್ಟು ಪಿಎಫ್ ಖಾತೆಗೆ ಜಮಾ ಆಗುತ್ತದೆ. ಅದರಂತೆಯೇ ಮಾಲಕನು ಶೇ. 13.2ರಷ್ಟು ಹಣವನ್ನು ಸಿಬಂದಿಯ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಇದರಲ್ಲಿ ಶೇ. 8.33 ಭಾಗ ಪಿಂಚಣಿಗೆ ಮತ್ತು ಉಳಿದ ಶೇ.3.67ರಷ್ಟು ಭಾಗ ಭವಿಷ್ಯ ನಿಧಿಗೆ ಜಮೆಯಾಗುತ್ತದೆ. ಪಿಎಫ್ ಹಣಕ್ಕೆ ಬ್ಯಾಂಕ್‌ಗಳಲ್ಲಿ ಶೇ. 8ರಿಂದ 8.5ರಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
ಪಿಎಫ್ ಹಣವನ್ನು ಉದ್ಯೋಗಿಗಳಿಗೆ ನಿವೃತ್ತಿಯಾದ ಬಳಿಕ ನೀಡಲಾಗುತ್ತದೆ. ಕೆಲ ಪ್ರಮುಖ ಉದ್ದೇಶಗಳಿಗಾಗಿ ಪಿಎಫ್ ಹೂಡಿಕೆದಾರರು ತಮ್ಮ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇದಕ್ಕಾಗಿ ಕನಿಷ್ಠ 5 ವರ್ಷ ಸೇವಾವಧಿಯನ್ನು ಪೂರೈಸಿರಬೇಕು.
ಅನೇಕ ಸಂದರ್ಭಗಳಲ್ಲಿ ಪಿಎಫ್ ಖಾತೆಯಿಂದ ಉಪಯೋಗವಾಗುತ್ತದೆ. ಅಗತ್ಯ ಸಮಯದಲ್ಲಿ ಹಣ ಪಡೆಯಲು ಪಿಎಫ್ ಖಾತೆ ನೆರವಾಗುತ್ತದೆ. ಕೆಲಸದಿಂದ ನಿವೃತ್ತಿಯಾದ ಬಳಿಕ ತನ್ನ ಮುಂದಿನ ಜೀವನದ ಖರ್ಚಿಗೆ ಹಣದ ಅವಶ್ಯಕತೆ ಇದೆ. ಈ ವೇಳೆ ಪ್ರತೀ ತಿಂಗಳು ಪಿಎಫ್‌ನಿಂದ ಪಿಂಚಣಿ ಬರುತ್ತದೆ.
ಯಾವಾಗ ಹಣ ತೆಗೆಯಬಹುದು?
ಒಂದು ವೇಳೆ ನೌಕರನು ಒಂದು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬೇರೊಂದು ಸಂಸ್ಥೆಗೆ ವರ್ಗಾವಣೆಯಾದರೆ ಭವಿಷ್ಯ ನಿಧಿ ಖಾತೆಯನ್ನು ವರ್ಗಾವಣೆ ಮಾಡಬೇಕೆಂದಿಲ್ಲ. ಈಗಿರುವ ಖಾತೆಗೆ ಅಲ್ಲಿನ ನೌಕರರ ಭವಿಷ್ಯ ನಿಧಿ ಹಣವೂ ಜಮೆಯಾಗುತ್ತದೆ. ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ಪಿಎಫ್ ಖಾತೆಯಿಂದ ಹಣ ತೆಗೆಯಲು ಕೂಡ ಸಾಧ್ಯವಿದೆ.
ಅದರಲ್ಲಿಯೂ ಮದುವೆಗೆ ಉದ್ಯೋಗಿಗಳು ಪಿಎಫ್ ಖಾತೆಯಿಂದ ಅವನ/ಅವಳ, ಮಕ್ಕಳ, ಸಹೋದರರ ಮದುವೆ ಉದ್ದೇಶಕ್ಕಾಗಿ ಹಣ ವಿತ್ ಡ್ರಾ ಮಾಡಬಹುದು. ಹಣ ತೆಗೆಯಲು ಆತ ಸಂಸ್ಥೆಯಲ್ಲಿ ಕನಿಷ್ಠ ಐದು ವರ್ಷಗಳ ಸೇವಾವಧಿಯನ್ನು ಪೂರೈಸಿರಬೇಕು. ಇದರಿಂದ ಶೇ. 50ರಷ್ಟು ಮೊತ್ತವನ್ನು ಹಿಂಪಡೆಯಲು ಸಾಧ್ಯವಿದೆ.
ಅದೇ ರೀತಿ ಮನೆ ನಿರ್ಮಾಣ ಅಥವಾ ಫ್ಲ್ಯಾಟ್ ಖರೀದಿಗಾಗಿ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹದು. ಆಸ್ತಿ ಖರೀದಿಸುವಾಗ ಅದು ಅವನ/ಅವಳ, ಸಂಗಾತಿ ಅಥವಾ ಜಂಟಿಯಾಗಿ ನೋಂದಣಿಯಾಗಿರಬೇಕು. ಖಾತೆದಾರ ತನ್ನ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ಹಣ ಪಡೆಯಲು ಸಾಧ್ಯವಿದೆ. ಮನೆ ರಿಪೇರಿ, ಬದಲಾವಣೆ ಮನೆ, ದುರಸ್ತಿ, ನವೀಕರಣ ಅಥವಾ ಬದಲಾವಣೆಗಾಗಿ ಪಿಎಫ್ ಖಾತೆಯಿಂದ ಮೊತ್ತ ಹಿಂಪಡೆಯಬಹುದು. ಇದಕ್ಕಾಗಿ ಮನೆ ಅವನ/ಅವಳ, ಸಂಗಾತಿ ಅಥವಾ ಜಂಟಿಯಾಗಿ ನೋಂದಣಿ ಆಗಿರಬೇಕು.
ಪಿಎಫ್ ಖಾತೆದಾರ ತನ್ನ, ಪಾಲಕರ, ಸಂಗಾತಿ ಮತ್ತು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಹಣ ವಿತ್ ಡ್ರಾ ಮಾಡಲು ಅವಕಾಶವಿರುತ್ತದೆ. ಒಟ್ಟು ಕಾರ್ಪಸ್ ಆಧಾರದ ಮೇಲೆ ವೈದ್ಯಕೀಯ ಚಿಕಿತ್ಸೆಗಾಗಿ ಹಣ ಪಡೆಯಬಹುದು. ಮಕ್ಕಳ ಶಿಕ್ಷಣ ಖಾತೆದಾರರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಇದಕ್ಕಾಗಿ ಕನಿಷ್ಠ ಏಳು ವರ್ಷ ಸೇವೆ ಸಲ್ಲಿಸಿರಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕೋರ್ಸ್ ಪ್ರಮಾಣ ಪತ್ರ, ಸಂಸ್ಥೆಯಿಂದ ಅಂದಾಜು ವೆಚ್ಚ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ.
ಇನ್ನು ಉದ್ಯೋಗ ತೊರೆದ ವ್ಯಕ್ತಿಯು ಉದ್ಯೋಗ ರಹಿತನಾದ 30 ದಿನಗಳ ಬಳಿಕ ಭವಿಷ್ಯ ನಿಧಿಯಿಂದ ಶೇ. 75ರಷ್ಟು ಮತ್ತು ಬಾಕಿ ಉಳಿದ ಶೇ. 25ರಷ್ಟು ಮೊತ್ತವನ್ನು ಎರಡು ತಿಂಗಳ ಬಳಿಕ ಅಂತಿಮ ಲೆಕ್ಕಾಚಾರದ ಬಳಿಕ ಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತಾವಕ್ಕೆ ಇತ್ತೀಚೆಗಷ್ಟೇ ಭವಿಷ್ಯ ನಿಧಿ ಮಂಡಳಿ ಅನುಮತಿ ನೀಡಿದೆ. ಅಲ್ಲದೇ ಖಾತೆದಾರರಿಗೆ ಭವಿಷ್ಯ ನಿಧಿ ಮಂಡಳಿಯಲ್ಲಿ ಖಾತೆ ಮುಂದುವರಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.