ಖರ್ಚು ಕಡಿಮೆ ಮಾಡಿ ಇಲ್ಲವೇ ಆದಾಯ ಹೆಚ್ಚಿಸಿಕೊಳ್ಳಿ 


Team Udayavani, Aug 13, 2018, 3:01 PM IST

13-agust-13.jpg

ನಮ್ಮ ಆಸೆಗಳಿಗೆ ಮಿತಿ ಇಲ್ಲ. ಆದಾಯದ ಹಂಗೂ ಇಲ್ಲ. ಆದರೆ ಅವುಗಳ ಪೂರೈಕೆಗೆ ಮಾತ್ರ ಆದಾಯವೇ ಮೂಲ. ಈ ಅಪರಿಮಿತ ಆಸೆಗಳಿಂದಲೇ ಕೆಲವೊಮ್ಮೆ ನಮ್ಮ ಆದಾಯಕ್ಕಿಂತ ನಮ್ಮ ಖರ್ಚಿನ ಪಟ್ಟಿ ಹೆಚ್ಚಾಗಿರುತ್ತದೆ.
ಹೀಗಾದಾಗ ಆರ್ಥಿಕ ಅಸಮತೋಲನ ಸಾಧಿಸುವುದು ಅಸಾಧ್ಯ. ಖರ್ಚುವೆಚ್ಚಗಳ ಸರಿಯಾದ ನಿರ್ವಹಣೆಯೊಂದಿಗೆ ನಿಗದಿತ ಆದಾಯವಿದ್ದಲ್ಲಿ ಆರ್ಥಿಕ ಸಮತೋಲನ ಸಾಧಿಸುವುದು ಅಷ್ಟೇನೂ ಕಷ್ಟವಲ್ಲ. ಇರುವ ಆದಾಯದಲ್ಲೇ
ಕೊಂಚ ಹಣವನ್ನಾದರೂ ಹೇಗೆ ಉಳಿಸಬಹುದು ಎನ್ನುವುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.

ವೆಚ್ಚದ ಪರಿಶೀಲನೆ ನಡೆಸಿ
ನಿಮ್ಮ ತಿಂಗಳ ಬಜೆಟ್‌ ತಯಾರಿಗೂ ಮುನ್ನ ನಿಮ್ಮ ಹಣವೆಲ್ಲ ಇಲ್ಲಿಯ ತನಕ ಯಾವುದಕ್ಕೆ ವಿನಿಯೋಗವಾಗುತ್ತಿತ್ತು ಎನ್ನುವುದನ್ನು ಮೊದಲು ಗಮನಿಸಿ. ಕನಿಷ್ಠ ಆರು ವಾರಗಳ ಖರ್ಚುವೆಚ್ಚಗಳನ್ನಾದರೂ ಪರಿಶೀಲಿಸಿಯೇ ನಿಮ್ಮ ಮುಂದಿನ ಬಜೆಟ್‌ ನಿರ್ಣಯವಾಗಬೇಕು. ನೀವು ವೆಚ್ಚ ಮಾಡಿದ ಅಥವಾ ವಸ್ತುಗಳನ್ನು ಕೊಂಡುಕೊಂಡಿರುವ ಬಿಲ್‌ಗ‌ಳನ್ನು ಆದಷ್ಟು ಶೇಖರಿಸಲು ನೋಡಿ. ಇವೆಲ್ಲವೂ ನಿಮ್ಮ ಆದಾಯ ಮತ್ತು ಖರ್ಚಿನ ನಿಖರ ಮಾಹಿತಿ ನೀಡಲು ಸಹಕಾರಿಯಾಗುತ್ತವೆ.

ಬಜೆಟ್‌ ಸಿದ್ಧಪಡಿಸಿ
ಒಮ್ಮೆ ನಿಮ್ಮ ಖರ್ಚಿನ ಲೆಕ್ಕ ಸಿಕ್ಕಿದ್ದೇ ಆದಲ್ಲಿ ನಿಮ್ಮ ಬಜೆಟ್‌ ತಯಾರಿ ಸ್ವಲ್ಪ ಸುಲಭವಾಗಿರುತ್ತದೆ. ಕುಟುಂಬದ ಪ್ರತೀ ಸದಸ್ಯರ ಖರ್ಚು ವೆಚ್ಚಗಳು ನಿಮ್ಮ ಬಜೆಟ್‌ನಲ್ಲಿರಲಿ. ಏಕೆಂದರೆ ಸಾಮಾನ್ಯವಾಗಿ ಕುಟುಂಬದ ಮುಖ್ಯಸ್ಥರ ಆದಾಯದ ಆಧಾರದಲ್ಲಿಯೇ ಇತರ ಸದಸ್ಯರ ಖರ್ಚು ವೆಚ್ಚಗಳಿರುತ್ತವೆ. ಆ ಕಾರಣ ಬೆಜೆಟ್‌ ನಿರ್ವಹಣೆ ಕುಟುಂಬದ ಪ್ರತೀ ಸದಸ್ಯರ ಜವಬ್ದಾರಿ. 

ಹಣ ಹೊಂದಿಸಿಕೊಳ್ಳಿ
ಒಂದು ವೇಳೆ ನಿಮ್ಮ ಬಜೆಟ್‌ ನಿಮ್ಮ ಆದಾಯಕ್ಕಿಂತ ಹೆಚ್ಚಿದ್ದಲ್ಲೇ ಆದಲ್ಲಿ ಕೆಲವು ಸುಧಾರಣೆಗಳನ್ನು ನೀವು ಮಾಡಿಕೊಳ್ಳಲೇಬೇಕಾಗುತ್ತದೆ. ಏಕೆಂದರೆ ಆಗ ನಮಗಿರುವ ಆಯ್ಕೆಗಳು ಎರಡೇ. ಒಂದೋ ಆದಾಯ ಹೆಚ್ಚಿಸಿಕೊಳ್ಳಬೇಕು ಇಲ್ಲವೇ ಖರ್ಚನ್ನು ಕಡಿತಗೊಳಿಸಬೇಕು.

ಬಜೆಟ್‌ ಹೀಗಿರಲಿ
ಸಾಮಾನ್ಯವಾಗಿ ನಾವು ಒಂದು ನಿರ್ದಿಷ್ಟ ಕಾರಣಕ್ಕೆ ವಿನಿಯೋಗಿಸುವ ಹಣ ನಮ್ಮ ಬಜೆಟ್‌ನಲ್ಲಿ ಕೊಂಚ ಕಡಿಮೆಯೇ ಇದ್ದರೆ ಕೊನೆಗೆ ಅದು ಪ್ರಸ್ತುತ ಇರುವ ಖರ್ಚಿನಷ್ಟಕ್ಕಾದರೂ ನಿಲ್ಲುತ್ತದೆ. ಇಲ್ಲಿದಿದ್ದಲ್ಲಿ ಮುಂದಿನ ಬಾರಿ ಅದು ನಮ್ಮ ಬಜೆಟ್‌ ಅನ್ನೂ ಮೀರಬಹುದು. ಉದಾಹರಣೆಗೆ ಟೆಲಿಫೋನ್‌ ಅಥವಾ ಮೊಬೈಲ್‌ ಗೆಂದು ನಾವು ವಿನಿಯೋಗಿಸುವ ಹಣ ತಿಂಗಳಿಗೆ 300 ರೂ. ಇದ್ದರೆ. ನಮ್ಮ ಬಜೆಟ್‌ನಲ್ಲಿ ಅದು 250 ರೂ. ಗೆ ಇರಲಿ. ಆಗ ಕನಿಷ್ಠ 300 ರೂ. ಗಳಿಗಾದರೂ ನಾವು ನಮ್ಮ ವೆಚ್ಚವನ್ನು ನಿಲ್ಲಿಸಬಹುದು. 

 ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.