ಪ.ಬಂಗಾಲ: ಬಿಜೆಪಿ ಬೆಂಬಲಿಸಿದ ತಾಯಿ, ಮಗಳ ಮೇಲೆ ಟಿಎಂಸಿ ಹಲ್ಲೆ
Team Udayavani, Aug 13, 2018, 6:51 PM IST
ಕೋಲ್ಕತ : ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿದ್ದಾರೆಂಬ ಶಂಕೆಯಲ್ಲಿ ಪಶ್ಚಿಮ ಬಂಗಾಲದ ಅಸನ್ಸೋಲ್ ಎಂಬಲ್ಲಿ ತಾಯಿ ಮತ್ತು ಮಗಳನ್ನು ಟಿಎಂಸಿ ಬೆಂಬಲಿಗರು ನಿರ್ದಯವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಅವರ ಮನೆಯನ್ನು ಕೂಡ ಚೆಲ್ಲಾಡಿದ್ದಾರೆ.
ಅಸನ್ಸೋಲ್ನ ರೈಲ್ಪಾರ್ ಪ್ರದೇಶದ ನಿವಾಸಿಯಾಗಿರುವ ಮುತ್ರಿ ಸಿಂಗ್ ಮತ್ತು ಆಕೆಯ ಮಗಳು ಟಿಎಂಸಿ ಕಾರ್ಯಕರ್ತರ ದೌರ್ಜನ್ಯಕ್ಕೆ ಗುರಿಯಾದವರು.
ಟಿಎಂಸಿ ನಾಯಕ ದೀಪಕ್ ಗುಪ್ತಾ ಮತ್ತು ಆತನ ಸುಮಾರು 20 ಮಂದಿ ಟಿಎಂಸಿ ಬೆಂಬಲಿಗರು ಈ ದುಷ್ಕೃತ್ಯ ನಡೆಸಿದರು. ‘ನಮ್ಮ ಸಣ್ಣ ಮನೆಯೊಳಗಿನ ಎಲ್ಲ ಸರಕು, ಸಾಮಗ್ರಿಗಳನ್ನು ಅವರು ಒಡೆದು ಹಾಕಿದರು’ ಎಂದು ಮುತ್ರಿ ಸಿಂಗ್ ದೂರಿದ್ದಾರೆ.
ಗಾಯಗೊಂಡ ಮುತ್ರಿ ಮತ್ತು ಆಕೆಯ ಮಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.