“ಮಹಾತ್ಮ’ರ ಹೆಸರಲ್ಲಿದೆ ಮೈದಾನ, ಉದ್ಯಾನವನ
Team Udayavani, Aug 14, 2018, 6:00 AM IST
ಕುಂದಾಪುರ: ದೇಶ 72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಈ ಸ್ವಾತಂತ್ರ್ಯಗೋಸ್ಕರ ಅದೆಷ್ಟೋ ಮಹನೀಯರು 90 ವರ್ಷಗಳ ಸುದೀರ್ಘ ಹೋರಾಟವನ್ನೇ ನಡೆಸಿದ್ದಾರೆ. ಬ್ರಿಟಿಷರ ಲಾಠಿ ಬೂಟಿಗೆ ಬೆದರದೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟೆ ತೀರುವೇ ಎನ್ನುವ ಛಲ ತೊಟ್ಟ ಮಹಾನುಭಾವರ ತ್ಯಾಗ, ಬಲಿದಾನದಿಂದ ನಾವಿಂದು ಸರ್ವ ಸ್ವತಂತ್ರರಾಗಿದ್ದೇವೆ.
ಕುಂದಾಪುರದಲ್ಲಿಯೂ ಮೈದಾನ, ಉದ್ಯಾನವನ, ರಸ್ತೆ, ಸರ್ಕಲ್‌ಗಳಿಗೆ ಅಂತಹ ಮಹಾತ್ಮರ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಅವರ ಹೋರಾಟದ ಬದುಕಿಗೊಂದು ಗೌರವ ಕೊಡಲಾಗಿದೆ.
ಗಾಂಧಿ ಪಾರ್ಕ್
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹೆಸರಲ್ಲಿರುವ “ಗಾಂಧಿ ಪಾರ್ಕ್’ ನಗರದಲ್ಲಿರುವ ಏಕೈಕ ಉದ್ಯಾನವನ ವಾಗಿದೆ. ನಿತ್ಯ ನೂರಾರು ಮಂದಿ ಇಲ್ಲಿಗೆ ವಿಹಾರಕ್ಕೆ ಬರುತ್ತಾರೆ. ವಿಶ್ರಾಂತಿ ಪಡೆದು ಹೋಗುತ್ತಾರೆ. ಆದರೆ ವಿಶಾಲವಾದ ಜಾಗದಲ್ಲಿ, ಉತ್ತಮವಾದ ಪ್ರದೇಶದಲ್ಲಿ ಈ ಪಾರ್ಕ್ ಇದ್ದರೂ, ಸರಿಯಾದ ನಿರ್ವಹಣೆ ಯಿಲ್ಲದೆ ಸೊರಗಿದೆ. ಕುಡಿಯುವ ನೀರಿನ ಘಟಕವೂ ಸರಿಯಿಲ್ಲ.
ಶಾಸ್ತ್ರಿ ಸರ್ಕಲ್
ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೆನಪಿನಲ್ಲಿ ಕುಂದಾಪುರದಲ್ಲಿ ಶಾಸ್ತ್ರಿ ಸರ್ಕಲ್ ನಿರ್ಮಿಸಲಾಗಿದೆ. ಶಾಸ್ತ್ರಿ ಅವರ ಚಂದದ ಪ್ರತಿಮೆಯೂ ಇದೆ. ಪ್ರಯಾಣಿಕರಿಗೆ ಅಥವಾ ಪ್ರವಾಸಿಗರಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳಿವೆ. ಹೈಮಾಸ್ಟ್ ದೀಪ ಇದೆ. ವಿಶೇಷ ಸಮಾರಂಭಗಳಲ್ಲಿ, ರಾಷ್ಟ್ರೀಯ ಹಬ್ಬಗಳ ಸಂದರ್ಭ ಶಾಸ್ತ್ರಿ ಪ್ರತಿಮೆಗೆ ಹಾರ ಹಾಕಲಾಗುತ್ತದೆ. ಇಲ್ಲಿ ಕುಳಿತುಕೊಳ್ಳಲು ಬೆಂಚುಗಳಿವೆ. ಆದರೆ ನಿರ್ವಹಣೆಯಿಲ್ಲದ ಕಾರಣ ಕೂರಲಾಗದು. ವೃತ್ತ ಎಂದು ಹೆಸರಿದ್ದರೂ ವೃತ್ತ ಇಲ್ಲ, ಬೇಲಿಯಿಲ್ಲ. ಹುಲ್ಲು ಬೆಳೆದಲ್ಲಿ ಹಸುಗಳು ಬಂದು ಮೇಯುತ್ತಿರುತ್ತದೆ.
ಗಾಂಧಿ ಮೈದಾನ
ಗಾಂಧಿ ಪಾರ್ಕ್ ಪಕ್ಕದಲ್ಲೇ ಗಾಂಧಿ ಮೈದಾನವಿದ್ದು, ತಾಲೂಕು ಮೈದಾನವಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ದಿನಾಚರಣೆ ನಡೆಯುತ್ತದೆ. ಬೇರೆ – ಬೇರೆ ಕ್ರೀಡಾಕೂಟ ನಡೆಯುತ್ತವೆ.
ನೆಹರೂ ಮೈದಾನ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಹೆಸರಲ್ಲಿರುವ ನೆಹರೂ ಮೈದಾನ ಕೇವಲ ಹೆಸರಿಗಷ್ಟೇ ಮೈದಾನವಾಗಿದೆ. ಇಲ್ಲಿ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಶಾಲಾ ಮಕ್ಕಳಿಗೆ ಆಟ ವಾಡಲೂ ಅವಕಾಶವಿಲ್ಲ. ಆಗೊಮ್ಮೆ- ಈಗೊಮ್ಮೆ ಯಕ್ಷಗಾನ ವಷ್ಟೇ ನಡೆಯು ತ್ತದೆ. ಇದು ವಲಸೆ ಕಾರ್ಮಿಕರ ಅಡ್ಡವಾಗಿ ಮಾರ್ಪಾಡಾಗಿದೆ. ಇದು ಕೂಡ ಸಮರ್ಪಕವಾದ ನಿರ್ವಹಣೆಯಿಲ್ಲದೆ ನಿಷ್ಪಯೋಜಕವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರು ಹೆಸರಲ್ಲಿ ರಸ್ತೆ ಕುಂದಾಪುರ ಪುರಸಭೆ ವ್ಯಾಪ್ತಿ ಯಲ್ಲಿಯೂ ಸ್ವಾತಂತ್ರ್ಯ ಹೋರಾಟ ಗಾರರ ಸ್ಮರಣೆ ನಡೆದಿದೆ. ಟಿ.ಟಿ. ರಸ್ತೆ (ತಾತ್ಯಾ ಟೋಪಿ ರಸ್ತೆ), ಜೆಎಲ್‌ಬಿ ರಸ್ತೆ (ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆ), ಶಾಂತಿ ನಿಕೇತನ ಪಕ್ಕ ಭಗತ್ ಸಿಂಗ್ ರಸ್ತೆ, ಬೋರ್ಡ್ ಹೈಸ್ಕೂಲ್ ಪಕ್ಕ ಚಂದ್ರಶೇಖರ ಆಝಾದ್ ರಸ್ತೆ, ಮಂಗಲ್‌ಪಾಂಡೆ ರಸ್ತೆ ಹೀಗೆ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡಲಾಗಿದೆ. ಆದರೆ ಆ ರಸ್ತೆಗಳಿಗೆ ಪೂರ್ಣ ಹೆಸರಿನಿಂದ ಕರೆಯದೇ ಅರ್ಧ ಹೆಸರಿನಿಂದ ಕರೆಯುವ ಮೂಲಕ ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ಉಂಟು ಮಾಡಲಾಗುತ್ತಿದೆ.
ಭಾರತೀಯ ಸ್ವಾತಂತ್ರ್ಯ ಹೋರಾಟದ ಅಮರ ಕಥೆಗಳನ್ನು ಬಲ್ಲ ಈ ತಲೆಮಾರಿನ ಯುವಜನತೆ ಈ ಸಂತಸದ ಶುಭ ಘಳಿಗೆಗೆ ಕಾರಣರಾದ ವೀರ ಯೋಧರನ್ನು ಸ್ಮರಿಸುವುದು ಆದ್ಯ ಕರ್ತವ್ಯ ಕೂಡ. ಆದರೆ ಅವರ ಹೆಸರಲ್ಲಿ ಉದ್ಯಾನವನ, ಮೈದಾನ, ರಸ್ತೆಗಳನ್ನು ನಿರ್ಮಿಸಿ, ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ ಮಾತ್ರ ಅವರಿಗೆ ಅಗೌರವ ತೋರಿದಂತೆ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.