ಮುಚ್ಚಿದ ಶಾಲೆಯಲ್ಲೀಗ ಮಕ್ಕಳ ಕಲರವ​​​​​​​

Team Udayavani, Aug 14, 2018, 6:00 AM IST

1208bas2aa.jpg

ಬಸ್ರೂರು: ಸರಕಾರಿ ಕನ್ನಡ ಮಾಧ್ಯಮ  ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಆಂಗ್ಲಮಾಧ್ಯಮ ಶಾಲೆಗಳ ವ್ಯಾನ್‌ಗಳಿಗೆ ತಮ್ಮ ಮಕ್ಕಳನ್ನು ಹತ್ತಿಸಿದರೆ  ಮಾತ್ರ  ಧನ್ಯರು ಎಂಬ ಭಾವನೆ ಹೆತ್ತವರಲ್ಲಿದೆ. ಶತಮಾನದ ಇತಿಹಾಸ ಹೊಂದಿರುವ ಬಸ್ರೂರಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಅಪವಾದಕ್ಕೆ ಹೊರತಾಗಿದೆ. ಒಂದು ಕಾಲದಲ್ಲಿ ನೂರಾರು ಮಕ್ಕಳ ಕಲರವ ಕೇಳಿ ಬರುತ್ತಿರುವ ಈ ಶಾಲೆಯಲ್ಲಿ  ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ  ಬಂದು 2006-7ನೇ ಸಾಲಿನಲ್ಲಿ  ಮಕ್ಕಳ ಸಂಖ್ಯೆ ಶೂನ್ಯವಾದಾಗ  ಬಸ್ರೂರಿನ ಉರ್ದು ಶಾಲೆಯ ಬಾಗಿಲು ಮುಚ್ಚಿತು.
 
ಬಾಗಿಲು ತೆರೆಯಿತು
ಶಾಲೆಯ ಬಾಗಿಲು ಮಾತ್ರ ಮುಚ್ಚಿದ್ದು  ಶಾಲೆಯ ಹಳೆ ವಿದ್ಯಾರ್ಥಿಗಳ, ಎಸ್‌.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್‌ ಅಜೀಜ್‌, ಸದಸ್ಯರ ಮನಸ್ಸು ಮುಚ್ಚಿರಲಿಲ್ಲ. ಇವರೆಲ್ಲಾ ಶಾಲಾವರಣದಲ್ಲಿ ಒಟ್ಟಾಗಿ ಶಾಲೆ ತೆರೆಯುವ ಬಗ್ಗೆ ಚಿಂತಿಸಿದರು. ಮನೆ ಮನೆಗೆ ತೆರಳಿ ಶಾಲೆಯನ್ನು ಪುನ: ತೆರೆಯುತ್ತಿದ್ದೇವೆ; ತಮ್ಮ ಮಕ್ಕಳನ್ನು ನಮ್ಮ ಶಾಲೆಗೇ ಸೇರಿಸಿ ಎಂದು ವಿನಂತಿಸಿದರು. ಶಾಲೆಯ ಮೂಲ ಅವಶ್ಯಕತೆಗಳಿಗಾಗಿ ಹಣಕಾಸಿಗೆ ಚರ್ಚಿಸಿದರು. ಹೆತ್ತವರ ಮನವೊಲಿಸುವಲ್ಲಿ ಹಳೆ ವಿದ್ಯಾರ್ಥಿಗಳು ಎಸ್‌.ಡಿ.ಎಂ.ಸಿ.ಯವರು ಯಶಸ್ವಿಯಾದರು. ಮುಂದಿನ  ಶೈಕ್ಷಣಿಕ ವರ್ಷದಲ್ಲೇ ಶಾಲೆಯ ಬಾಗಿಲು ತೆರೆಯಿತು! 

ವಿದೇಶದಲ್ಲೂ ಸಭೆ
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಾಲಾ ಅನ್ವರ್‌ ಊರು ಹಾಗೂ ವಿದೇಶದಲ್ಲಿರುವ ಹಳೆ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಫಲವಾಗಿ ಪ್ರಸ್ತುತ ಬಸೂÅರಿನ ಉರ್ದು ಶಾಲೆಗೀಗ 2 ಲಕ್ಷ ರೂ. ವೆಚ್ಚದ ಶಾಲಾ ಬಸ್‌ ಮಕ್ಕಳ ಸಂಚಾರಕ್ಕಾಗಿಯೇ ಮೀಸಲಿರಿಸಲಾಗಿದೆ. ಪೂರ್ವ ಪ್ರಾ. ಶಾಲಾ ವಿದ್ಯಾರ್ಥಿಗಳ ಸಂಚಾರಕ್ಕಾಗಿ 55 ಸಾವಿರ ರೂ. ವೆಚ್ಚದಲ್ಲಿ ಕಾರಿನ ವ್ಯವಸ್ಥೆ ಮಾಡಲಾಯಿತು. 

ಗೌರವ ಶಿಕ್ಷಕರು
ಶಾಲೆಯ ಪುನಶ್ಚೇತನ ಕಾರ್ಯ ಇಷ್ಟಕ್ಕೇ ನಿಂತಿಲ್ಲ. ಪೂರ್ವ ಪ್ರಾಥಮಿಕ ಶಾಲೆಯ “ಆಯಾ’ರ ವೇತನಕ್ಕಾಗಿ ರೂ. 30,000, ಮಕ್ಕಳ ಸಂಖ್ಯೆ ಹೆಚ್ಚಾದಾಗ ಶಿಕ್ಷಕರ ಕೊರತೆಯಾಗದಂತೆ ಗೌರವ ಶಿಕ್ಷಕರಿಗೆ ರೂ. 70,000 ಹಣವನ್ನು ಹಳೆ ವಿದ್ಯಾರ್ಥಿಗಳು, ಎಸ್‌. ಡಿ.ಎಂ.ಸಿ.ಯವರು ಹೊಂದಿಸಿದ್ದಾರೆ. ಇದೆಲ್ಲ ಶಾಲೆಯ ಏಳಿಗೆಗೆ ಕಾರಣವಾಗಿ ಮಕ್ಕಳಿಲ್ಲದೇ ಮುಚ್ಚಲಾಗಿದ್ದ ಈ ಉರ್ದು ಶಾಲೆಯಲ್ಲೀಗ ಮಕ್ಕಳ ಕಲರವ ರಿಂಗಿಣಿಸುತ್ತದೆ! ಶಾಲೆಯಲ್ಲಿ ನಾಲ್ವರು ಶಿಕ್ಷಕರ ಜತೆಗೆ ಮೂವರು ಗೌರವ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ದಾನಿಗಳ ನೆರವು
ಕೊಠಡಿಗಾಗಿ ದಾನಿಯೊಬ್ಬರ ಸ್ಥಳದಾನದಿಂದ  3 ಕೊಠಡಿಗಳನ್ನು ಕಟ್ಟಲಾಯಿತು. ದಾನಿಗಳಿಂದಾಗಿ ರೂ. 25,000 ವೆಚ್ಚದಲ್ಲಿ ಧ್ವನಿವಧ‌ìಕ ಖರೀದಿಸಲಾಯಿತು. ವಿದ್ಯುತ್‌ ಮೋಟಾರ್‌, ಪ್ರತ್ಯೇಕ  ಶೌಚಾಲಯ, ನೀರಿನ ಟ್ಯಾಂಕ್‌ಗಳು, ನೆಲಕ್ಕೆ ಟೈಲ್ಸ್‌, ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲು ನೆಲದ ಮೇಲಿನ ಹಾಸು  ಮತ್ತು ತಿಂಗಳಿಗೊಮ್ಮೆ ಹೆತ್ತವ‌ರಿಗೆ ಮಕ್ಕಳ ಜತೆ ವಿಶೇಷ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದ್ದು ಶಾಲೆಯೀಗ ಹೊಸ  ಕಳೆಯಿಂದ ಕಂಗೊಳಿಸುತ್ತಿದೆ! ಶಾಲಾ ವಾಹನ ಮತ್ತಿತರ ಕಾರ್ಯಗಳಿಗಾಗಿ ಒಟ್ಟು ರೂ. 3.55 ಲಕ್ಷ  ಹಣವನ್ನು ಶಾಲೆಯ ಏಳಿಗೆಗಾಗಿ ವ್ಯಯಿಸಲಾಗುತ್ತಿದೆ. 

ಇಲಾಖೆಯಿಂದಲೂ ನೆರವಿನ  ಮಹಾಪೂರ
ಬಸ್ರೂರಿನ ಉರ್ದು ಶಾಲೆಯ ಕಟ್ಟಡ  ಬೀಳುತ್ತಿದೆ ಎಂದು 2 ವರ್ಷಗಳ  ಹಿಂದೆ ಅನೇಕ ಬಾರಿ ಜನ ಪ್ರತಿನಿಧಿಗಳಿಗೆ ಮನವಿ ಮಾಡಲಾಗಿತ್ತಾದರೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯ ಗ್ರಾ.ಪಂ.ನವರು ಶಾಲೆಯ ಮಾಡು ಬೀಳದಂತೆ ತುರ್ತು ಸಹಾಯವನ್ನು  ಮಾತ್ರ ಒಮ್ಮೆ ಮಾಡಿದ್ದರು. ಬೀಳುತ್ತಿರುವ ಕಟ್ಟಡದ ಬಗ್ಗೆ ಪತ್ರಿಕೆಯಲ್ಲಿಯೂ ಸಚಿತ್ರ ವರದಿಯೂ ಪ್ರಕಟವಾಗಿತ್ತು.ಅನೇಕ ದಿನಗಳ ಅನಂತರ ಸರಕಾರದಿಂದ ನೂತನ ಕಟ್ಟಡ ಮಂಜೂರಾಗಿ ಹೊಸ ಕಟ್ಟಡದ ರಚನೆಯೂ ಆಯಿತು.  ಇಲಾಖೆಯ ಜತೆಗೆ ದಾನಿಗಳ  ನೆರವಿನಿಂದ ಶಾಲೆಯೀಗ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಿಂತ ಕಡಿಮೆಯಿಲ್ಲದ ಶಾಲೆಯಾಗಿ ರೂಪುಗೊಂಡಿದೆ.

ಸರ್ವರ ಸಹಕಾರ
ಹಳೆವಿದ್ಯಾರ್ಥಿಗಳು, ಶಿಕ್ಷಕರು, ಎಸ್‌.ಡಿ. ಎಂ.ಸಿ. ಸದಸ್ಯರು ಮಾತ್ರವಲ್ಲದೆ ಊರ ಶಿಕ್ಷಣಾಭಿಮಾನಿಗಳು ಹೆಗಲು ಕೊಡುತ್ತಿದ್ದಾರೆ. ಇವರೆಲ್ಲರ  ಸಹಕಾರದಿಂದ ಶಾಲೆಯ ಸರ್ವತೋಮುಖ ಏಳಿಗೆಯಾಯಿತು.
– ಅಬ್ದುಲ್‌ ಅಜೀಜ್‌,ಎಸ್‌.ಡಿ.ಎಂ.ಸಿ. ಅಧ್ಯಕ್ಷ 

ಇಲಾಖೆಯೂ ಸ್ಪಂದಿಸಿದೆ
ಬಸ್ರೂರಿನ ಉರ್ದು ಶಾಲೆಯ ಉಳಿವಿಗೆ ಶಿಕ್ಷಣ ಇಲಾಖೆಯೂ ಸಹಕರಿಸುತ್ತಿದ್ದು ಮಕ್ಕಳಿಗೆ ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿ ವೇತನ, ಬೆಳಗ್ಗೆ ಕುಡಿಯಲು ಹಾಲು ಮತ್ತಿತರ ಸೌಕರ್ಯಗಳನ್ನು  ನೀಡಿದ್ದು  ಶಾಲೆಯನ್ನು ಉತ್ತಮ ರೀತಿಯಲ್ಲಿ ರೂಪುಗೊಳಿಸಲು ಸಹಕಾರವಾಯಿತು. 
– ಲಾಲಾ ಅನ್ವರ್‌,  
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ

– ದಯಾನಂದ ಬಳ್ಕೂರು

ಟಾಪ್ ನ್ಯೂಸ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.