ಡಿಎಫ್ಸಿಸಿಐಎಲ್‌ನಲ್ಲಿ 1,572 ಹುದ್ದೆಗಳು
Team Udayavani, Aug 14, 2018, 6:00 AM IST
ಭಾರತೀಯ ರೈಲ್ವೆ, ವರ್ಷವಿಡೀ ಚಟುವಟಿಕೆಯಿಂದಿರುವ, ಅತಿ ಹೆಚ್ಚು ಲಾಭವನ್ನು ಹೊಂದಿರುವ ಇಲಾಖೆ. ರೈಲ್ವೆ ಇಲಾಖೆಗೆ ಬಿಡಿ ಉತ್ಪನ್ನಗಳ ಅಗತ್ಯ ತುಂಬಾ ಇರುತ್ತದೆ. ಅವುಗಳನ್ನು ಪೂರೈಸಲೆಂದೇ ಹಲವು ಕಂಪನಿ-ಕಾರಿಡಾರ್‌ಗಳು ಇರುತ್ತವೆ. ಅವುಗಳ ಪೈಕಿ, ಡಿಎಫ್ಸಿಸಿಐಎಲ್(ಡೆಡಿಕೇಟೆಡ್ ಪ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ) ಕೂಡ ಒಂದು. ಇದನ್ನು ಭಾರತದ ಮೀಸಲು ಸರಕು ಕಾರಿಡಾರ್ ಕಾರ್ಪೊರೇಶನ್ ಎಂದೂ ಕರೆಯಲಾಗುತ್ತದೆ. ಸರಕು ಸೇವೆ ಒದಗಿಸುವ ಡಿಎಫ್ಸಿಸಿಐಎಲ್‌ನಲ್ಲಿ ಎಕ್ಸಿಕ್ಯುಟಿವ್, ಜೂ.ಎಕ್ಸಿಕ್ಯುಟಿವ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ನ 1,572 ಅಭಿಯಂತರರ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಹುದ್ದೆ ಪಡೆಯಬೇಕೆಂದರೆ…
ಹುದ್ದೆಗಳ ವಿಂಗಡನೆ
ಎಕ್ಸಿಕ್ಯುಟಿವ್- 327
ಸಿವಿಲ್- 82
ಎಲೆಕ್ಟ್ರಿಕಲ್-39
ಸಿಗ್ನಲ್ ಅಂಡ್ ಟೆಲಿಕಮ್ಯುನಿಕೇಷನ್- 97
ಆಪರೇಟಿಂಗ್(ಸ್ಟೇಷನ್ ಮಾಸ್ಟರ್ ಮತ್ತು ಕಂಟ್ರೋಲರ್)- 109
ಜೂನಿಯರ್ ಎಕ್ಸಿಕ್ಯುಟಿವ್(ಗ್ರೇಡ್3)- 349
ಸಿವಿಲ್ ಆರ್ಟಿಸನ್- 239
ಎಲೆಕ್ಟ್ರಿಕಲ್- 68
ಸಿಗ್ನಲ್ ಅಂಡ್ ಟೆಲಿಕಮ್ಯುನಿಕೇಷನ್-42
ಮಲ್ಟಿ ಟಾಸ್ಕಿಂಗ್ ಸ್ಟಾಫ್(ಗ್ರೇಡ್4)- 896
ಸಿವಿಲ್(ಟ್ರಾಕ್ ಮನ್)- 451
ಎಲೆಕ್ಟ್ರಿಕಲ್(ಹೆಲ್ಪರ್)- 37
ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಷನ್- 6
ಆಪರೇಟಿಂಗ್- 402
ಎಲ್ಲ ಹುದ್ದೆಗಳೂ ಸೇರಿ ಒಟ್ಟು- 1,572
ಹುದ್ದೆಗಳನ್ನು ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ, ವರ್ಗದ ಅಭ್ಯರ್ಥಿಗಳಿಗೆ ವಿಂಗಡನೆ ಮಾಡಲಾಗಿದೆ.
ವಿದ್ಯಾರ್ಹತೆ, ವಯೋಮಿತಿ
ಎಕ್ಸಿಕ್ಯುಟಿವ್ ಆಗಲು ಬಯಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ಪ್ರಮಾಣೀಕೃತ ವಿ.ವಿ.ಯಲ್ಲಿ ಎಂಜಿನಿಯರಿಂಗ್ ಅಥವಾ ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿರಬೇಕು. ಜೂ. ಎಕ್ಸಿಕ್ಯುಟಿವ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಆಗುವವರು ಐಟಿಐ ತತ್ಸಮಾನ ಓದು ಜತೆಗೆ ಕಂಪ್ಯೂಟರ್ ಜ್ಞಾನ ಇರಬೇಕು. ಪದವಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.
ಎಲ್ಲ ಹುದ್ದೆ ಸಂಬಂಧಿತ ಅಭ್ಯರ್ಥಿಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 18- 33 ವಯೋಮಿತಿ ಇರುತ್ತದೆ.
ಎಕ್ಸಿಕ್ಯುಟಿವ್ ಹುದ್ದೆಗೆ- 12,600 ರಿಂದ 32,500ರೂ.
ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗೆ- 10,000- 25,000ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ- 6,000-12,000ರೂ. ವೇತನವನ್ನು ನಿಗದಿ ಮಾಡಲಾಗಿದೆ.
ಆಯ್ಕೆ ಹೇಗೆ?
ಎಲ್ಲ ಹುದ್ದೆಗಳಿಗೂ ಕಂಪ್ಯೂಟರ್ ಆಧಾರಿತ ಪರೀಕ್ಷೆ ನೀಡಲಾಗುವುದು. ಆಯಾ ಹುದ್ದೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. 120 ಅಂಕಗಳಿಗೆ 2 ಗಂಟೆಗಳ ಅವಧಿಗೆ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಗೆ ಬೆಂಗಳೂರು, ಪಾಟ್ನಾ, ಅಹಮದಾಬಾದ್, ಚೆನ್ನೆç, ಭೂಪಾಲ್ ಇತರೆಡೆ ಸೆಂಟರ್‌ಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆ ಬಯಸುವ ಅಭ್ಯರ್ಥಿಗಳು ಗಣಕ ಸಂಬಂಧಿತ ಹುದ್ದೆಯ ಜತೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳನ್ನೂ ಎದುರಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಡಿಎಫ್ಸಿಸಿಐಎಲ್ ಜಾಲತಾಣ (www.dfccil.gov.in) ಮೂಲಕ ಪ್ರವೇಶ ಪಡೆದು ಅದರಲ್ಲಿ ಕೆರಿಯರ್ ಆಯ್ಕೆ ಮಾಡಿಕೊಂಡು ತಮ್ಮ ಇ-ಮೇಲ್ ಐಡಿ, ಮೊಬೈಲ್ ನಂಬರ್ ಸಂಬಂಧಿಸಿದ ಮಾಹಿತಿಯನ್ನು ತುಂಬಿ ಆನ್‌ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಬಳಿಕ ಹುದ್ದೆಗೆ ಸಂಬಂಧಿಸಿದ ಆಯ್ಕೆಯನ್ನು ಮಾಡಿಕೊಂಡು ಅಗತ್ಯ ಮಾಹಿತಿಯನ್ನು ತುಂಬಬೇಕು. ಬಳಿಕ ಪರೀಕ್ಷೆಗೆ ಸಂಬಂಧಿಸಿದ ಇಮೇಲ್ ನಿಮಗೆ ಬರುತ್ತದೆ. ಇದರ ಮೂಲಕ ಅರ್ಜಿಗೆ ಸಂಬಂಧಿಸಿದ ಫೀಸನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕಾಗುತ್ತದೆ. ಪರೀಕ್ಷೆಯ ದಿನಾಂಕ ಮುಂತಾದ ವಿವರಗಳನ್ನು ಪೋಸ್ಟ್ ಮೂಲಕ ಕಳಿಸಿಕೊಡುತ್ತಾರೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ- ಆಗಸ್ಟ್ 30
ಎಕ್ಸಿಕ್ಯುಟಿವ್ ಹುದ್ದೆಗೆ- 900ರೂ.
ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗೆ- 700ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ- 500ರೂ. ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ: goo.gl/rj1rQA
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.