ಸದ್ಗುಣಗಳಲ್ಲಿ ಲಕ್ಷ್ಮೀ ವಾಸ
Team Udayavani, Aug 14, 2018, 10:37 AM IST
ಕಲಬುರಗಿ: ಸತ್ಯ, ತಪಸ್ಸು, ದಾನ- ಧರ್ಮ, ವ್ರತ, ಪರಾಕ್ರಮ, ಧೈರ್ಯ, ಸದ್ಗುಣಗಳಿದ್ದಲ್ಲಿ ಲಕ್ಷ್ಮೀ ವಾಸವಿರುತ್ತದೆ. ಭಗವಂತನ ಅರ್ಧಾಂಗಿನಿ, ಸಂಪತ್ತಿನ ಅಧಿದೇವತೆ ಲಕ್ಷ್ಮೀ ಕಟಾಕ್ಷಕ್ಕಾಗಿ ಬಾಹ್ಯ ಹಾಗೂ ಆಂತರಿಕ ಶುದ್ಧಿಯೊಂದಿಗೆ ಭಗವಂತನನ್ನು, ಮಹಾಲಕ್ಷ್ಮೀಯನ್ನು ಪೂಜಿಸಬೇಕು ಎಂದು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.
ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಎನ್.ವಿ. ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಮಂಟಪದ ಪ್ರಧಾನ ವೇದಿಕೆಯಲ್ಲಿನ ಭಾಗವತ ಪ್ರವಚನ, ಅನುಗ್ರಹ ಸಂದೇಶದಲ್ಲಿ ಅವರು ಮಾತನಾಡಿದರು. ಇಂದ್ರದೇವರು ಮತ್ತು ಲಕ್ಷ್ಮೀದೇವಿ ನಡುವಿನ ಸಂವಾದ ನಮ್ಮೆಲ್ಲರ ಕಣ್ತೆರೆಸುತ್ತದೆ. ಬಲಿ ಚಕ್ರವರ್ತಿಯ ದರ್ಬಾರಲ್ಲಿನ ಇಂದ್ರದೇವರ ಉಪಸ್ಥಿತಿಯಲ್ಲಿ ನಡೆದಂತಹ ಪುರಾಣ ಪ್ರಸಂಗ ವಿವರಿಸುತ್ತ ಬಲಿ ಚಕ್ರವರ್ತಿಯ ಶರೀರದಿಂದ ಹೊರಬಂದ ಸಲಕ್ಷಣ ಮುತ್ತೈದೆ ಆಚೆ ಬಂದು ಇಂದ್ರನತ್ತ ಹೊರಟು ಬಂದಳು.
ಕುತೂಹಲದಿಂದ ನೀವ್ಯಾರೆಂದು ಕೇಳಿದ ಇಂದ್ರದೇವರಿಗೆ ಆಕೆ ತಾನು ಲಕ್ಷ್ಮೀ ಎಂದು ಪರಿಚಯ ಹೇಳಿಕೊಳ್ಳುತ್ತಾಳೆಂದು ಪುರಾಣ ಪ್ರಸಂಗ ವಿವರಿಸಿದರು.
ಲಕ್ಷ್ಮೀ ಹಾಗೂ ಇಂದ್ರನ ನಡುವಿನ ಈ ಸಂವಾದದ ಪ್ರಸಂಗ ನಮಗೆಲ್ಲರಿಗೂ ಪಾಠ. ಇದರಿಂದ ನಾವು ತಿಳಿದುಕೊಳ್ಳಬೇಕಾದ ಆದರ್ಶವೆಂದರೆ ಸತ್ಯ ವ್ರತ, ದಾನ, ಧರ್ಮ, ಧೈರ್ಯ, ತಂದೆ-ತಾಯಿಗಳ ಸೇವೆ, ಗುರುಗಳ
ಸೇವೆ, ವೇದಗಳ ಅಧ್ಯಯನ ತಪ್ಪದೇ ಮಾಡಬೇಕು. ಅದುವೇ ನಿಜವಾದ ಸಂಪತ್ತು. ಅಲ್ಲೇ ಲಕ್ಷ್ಮೀ ವಾಸವಿರುತ್ತದೆ ಎಂದರು.
ನಾಲ್ಕು ಕೃತಿಗಳ ಬಿಡುಗಡೆ: ಇದೇ ಸಂದರ್ಭದಲ್ಲಿ ಸತ್ಯಾತ್ಮತೀರ್ಥರು ಸ್ಥಳೀಯವಾಗಿ ರಘುನಾಥತೀರ್ಥ ಅಧ್ಯಯನಾಶ್ರಮದಲ್ಲಿ ಕುಲಪತಿ ಪಂ. ರಾಮಾಚಾರ್ಯ ಅವಧಾನಿ ಅವರ ಬಳಿ ಪಾಠ ಹೇಳಿಸಿಕೊಳ್ಳುತ್ತಿರುವ ಪ್ರೊ| ನಿತಿನ್ ಮಾಹುರಕರ್ ಬರೆದಿರುವ ಗೀತಾ ಸಂದೇಶ (ಆಂಗ್ಲ), ಪುಣೆಯ ಲೇಖಕರು ಬರೆದಿರುವ ದಾಸರ ಕುರಿತಾದ ಜೀವನ ವೃಂತಾಂತದ ಮರಾಠಿ ಆವೃತ್ತಿ ಸೇರಿದಂತೆ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ತದನಂತರ ಪಂ. ಪ್ರಮೋದಾಚಾರ್ಯ ಪೂಜಾರ ಅವರಿಂದ ಖಾಂಡವ ದಹನ ಉಪನ್ಯಾಸ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.