ಶಿರೂರು: ಅಕ್ರಮ ಗೋ ಸಾಗಾಟ; ಐವರ ಬಂಧನ
Team Udayavani, Aug 14, 2018, 12:15 PM IST
ಬೈಂದೂರು: ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಕಂಟೈನರ್‌ನಲ್ಲಿ ಆ. 13ರಂದು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 19 ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.
ವಾಹನಗಳಲ್ಲಿದ್ದ ಭಟ್ಕಳದ ಇಕ್ಕೆರಿ ಇಸ್ತಿಯನ್ ಅಹಮ್ಮದ್, ದಾವಣಗೆರೆಯ ಮೆಹಬೂಬ್, ತನ್ವೀರ್ ಸಾಬ್, ನಾಗರಾಜ, ಜಾವೇದ್ ಬಂಧಿತರು.
ಆ. 13ರ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಶಿರೂರು ಚೆಕ್‌ಪೋಸ್ಟ್ ಬಳಿ ಅಕ್ರಮವಾಗಿ ಒಂದು ಕಂಟೈನರ್‌ನಲ್ಲಿ 10 ಹಾಗೂ ಇನ್ನೊಂದು ಕಂಟೈನರ್‌ನಲ್ಲಿ 9 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಅದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ಜಾನುವಾರುಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆದುಕೊಂಡರು.
ಜಾನುವಾರುಗಳನ್ನು ಅಕ್ರಮವಾಗಿ ಭಟ್ಕಳ ಮೂಲಕವಾಗಿ ಗೋವಾದ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ನಿಷೆೇಧ ಹಾಗೂ ಗೋ ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.