ಕೈ ನಾಯಕರಿಗೆ ಎಮ್ಮೆ ದಾಳಿ!
Team Udayavani, Aug 15, 2018, 10:26 AM IST
ದೇವಸ್ (ಮಧ್ಯಪ್ರದೇಶ): ಪ್ರತಿಭಟನೆಗಾಗಿ ಕರೆ ತಂದವರೇ ನಮ್ಮ ಮೇಲೆ ಹಲ್ಲೆ ನಡೆಸಿದರೆ, ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರೆ ಹೇಗಿರುತ್ತೆ? ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರನ್ನು ಕೇಳಿದರೆ ಇದಕ್ಕೆ ಸೂಕ್ತ ಉತ್ತರ ಸಿಗುತ್ತದೆ. ಏಕೆಂದರೆ, ಇಂಥದ್ದೊಂದು ಪೇಚಿಗೆ ಸಿಲುಕಿ ಆಡಳಿತಾರೂಢ ಬಿಜೆಪಿ ನಾಯಕರು ಬಿದ್ದು ಬಿದ್ದು ನಗುವಂತೆ ಮಾಡಿಕೊಂಡಿದ್ದಾರೆ ಅವರು!
ಆಗಿದ್ದಿಷ್ಟೇ. ಮಧ್ಯ ಪ್ರದೇಶದ ಇಂದೋರ್ ಮತ್ತು ದೇವಾಸ್ ನಡುವೆ ಇಂಟರ್ ಸಿಟಿ ಬಸ್ ಸೌಲಭ್ಯಕ್ಕೆ ಅನುಮತಿ ನೀಡಲು ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್, ಮಂಗಳವಾರ ಸರಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿತ್ತು.
ನಮ್ಮಲ್ಲಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಪ್ರತಿಭಟನೆ ವೇಳೆ ಎಮ್ಮೆ, ಎತ್ತುಗಳನ್ನು ಎಳೆದು ತರುವಂತೆ ಅಲ್ಲಿಯೂ ಕಾಂಗ್ರೆಸ್ ನಾಯಕರು ತಮ್ಮ ಪ್ರತಿಭಟನೆಗೆ ಎಮ್ಮೆಯೊಂದನ್ನು ತಂದಿದ್ದರಲ್ಲದೆ, ಅದಕ್ಕೊಂದು ಹೂವಿನ ಹಾರ ಹಾಕಿ ಅದನ್ನು ಜತೆಗಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೊರಟಿದ್ದರು. ಅಷ್ಟೇ ಮಾಡಿದ್ದರೆ ಸಾಕಾಗಿತ್ತು. ಪ್ರತಿಭಟನಾಕಾರರಲ್ಲೊಬ್ಬ ಎಮ್ಮೆಯ ಮುಂದೆ ಕೊಳಲು ಊದಿ ಬಿಟ್ಟಿದ್ದಾನೆ. ಈ ವೇಣು ಗಾನ ಕಿವಿಗೆ ಬೀಳುತ್ತಲೇ ಎಮ್ಮೆ ರೊಚ್ಚಿಗೆದ್ದು ಎಲ್ಲರ ಮೇಲೆ ದಾಳಿ ನಡೆಸಿ ಕಾಲಿನಿಂದ ತುಳಿದು ಓಡಿ ಹೋಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.