ನೂತನ ಪಿಡಿಒಗಳಿಗೆ ನರೇಗಾ ತರಬೇತಿ ಕಾರ್ಯಾಗಾರ
Team Udayavani, Aug 15, 2018, 5:30 PM IST
ಯಲಬುರ್ಗಾ: ಗ್ರಾಪಂ ಮಟ್ಟದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಜನರ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಪಂನಲ್ಲಿ ಆಸ್ತಿ ಸೃಜನ ಮಾಡುವ ಯೋಜನೆಯಾಗಿದೆ. ಈ ಯೋಜನೆಯನ್ನು ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಪಿಡಿಒಗಳ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ನರೇಗಾ ಯೋಜನೆ ಮಾಹಿತಿ ವ್ಯವಸ್ಥೆ ನಿರ್ವಹಣಾ ಸಂಯೋಜನಕ ಬಸವರಾಜ ತೋಟದ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಮಂಗಳವಾರ ನೂತನವಾಗಿ ಸರ್ಕಾರದಿಂದ ನೇಮಕಗೊಂಡ 9 ಜನ ಪಿಡಿಒಗಳಿಗೆ ನರೇಗಾ ಯೋಜನೆ ಅನುಷ್ಠಾನ ಕುರಿತು ಹಮ್ಮಿಕೊಂಡ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನೂತನ ಪಿಡಿಒಗಳು ಗ್ರಾಪಂ ಕಚೇರಿಗೆ ಬರುವ ಜನತೆಯೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ನರೇಗಾ ಯೋಜನೆಯ ತಾಂತ್ರಿಕ ತಂತ್ರಾಂಶಗಳ ಕುರಿತು ಪಿಡಿಒ, ಗ್ರಾಪಂ ಅಧ್ಯಕ್ಷ, ಡಾಟಾ ಎಂಟ್ರಿ ಆಫರೇಟರ್ ತಾಲೂಕು ತಾಂತ್ರಿಕ ಸಹಾಯಕರು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದರೇ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದರು. ನರೇಗಾ ಯೋಜನೆಯಡಿ ಸಾಕಷ್ಟು ಕಾಮಗಾರಿಗಳನ್ನು ಮಾಡಬಹುದಾಗಿದೆ. ಶಾಲಾ ಕಾಂಪೌಂಡ್, ಹೊಲ ಸಮತಟ್ಟು ಮಾಡುವುದು, ಬದು ನಿರ್ಮಾಣ, ಕೃಷಿ ಹೊಂಡ ಸೇರಿದಂತೆ ಹಲವಾರು ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದರು.
ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆ ಗುಳೆ ಹೊಗದಂತೆ ತಡೆಗಟ್ಟು ನರೇಗಾ ಸಹಕಾರಿಯಾಗಿದೆ. ಇದೊಂದು ಬೇಡಿಕೆಯಾಧರಿತ ವಿನೂತನ ಕಾರ್ಯಕ್ರಮವಾಗಿದ್ದು, ಕನಿಷ್ಠ ಒಂದು ಕುಟುಂಬಕ್ಕೆ 100 ಮಾನವ ದಿನ ಕೆಲಸ ನೀಡಲಾಗುತ್ತದೆ. ಪ್ರಸ್ತುತ ವರ್ಷದಲ್ಲಿ ಸಕಾಲಕ್ಕೆ ಮಳೆಯಾಗದೇ ತಾಲೂಕಿನಾದ್ಯಂತ ಸಂಪೂರ್ಣ ಭರದ ಛಾಯೆ ಆವರಿಸಿದೆ. ಆದ್ದರಿಂದ ನೂತನ ಪಿಡಿಒಗಳು ತಾವು ಕರ್ತವ್ಯ ನಿರ್ವಹಿಸುವ ಗ್ರಾಪಂಗಳಲ್ಲಿ ಶೀಘ್ರದಲ್ಲಿ ನರೇಗಾ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು.
ತಾಲೂಕು ತಾಂತ್ರಿಕ ಸಹಾಯಕ ವಿಶ್ವನಾಥ, ವಿಷಯ ನಿರ್ವಾಹಕ ಶಿವಪುತ್ರಪ್ಪ, ಸ್ವಚ್ಛ ಭಾರತ ಸಂಯೋಜಕ ಭೀಮಪ್ಪ ಹವಳಿ, ಪಿಡಿಒಗಳಾದ ಮಹ್ಮದ್, ಅಬ್ದುಲ್, ವಿರೇಶ, ಫಯಾಜ, ನಾಗರಾಜ, ಕರಿಯಪ್ಪ, ಸೋಮಪ್ಪ, ಗೋಣೆಪ್ಪ, ಆನಂದ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.