ದೇಶಾಭಿಮಾನ ಮೂಡಿಸುವ ಗೀತೆಗಳ ಸಮ್ಮಿಲನ
Team Udayavani, Aug 16, 2018, 12:57 PM IST
ಬೆಂಗಳೂರು: ಜನಪದ ಸೊಗಡು, ಅದಕ್ಕೆ ಪೂರಕವಾಗಿ ನೃತ್ಯರೂಪಕಗಳ ಮೆರಗು, ದೇಶಾಭಿಮಾನ ಮೂಡಿಸುವ ಗೀತೆಗಳ ಸಮ್ಮಿಲನದ ಸಂಸ್ಕೃತಿಯ ಅನಾವರಣಕ್ಕೆ ರವೀಂದ್ರ ಕಲಾಕ್ಷೇತ್ರ ಬುಧವಾರ ವೇದಿಕೆಯಾಯಿತು.
ಸ್ವಾತಂತ್ರೊéàತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವು ಗಣ್ಯರ ಗೈರುಹಾಜರಿ ನಡುವೆಯೂ ಪ್ರೇಕ್ಷಕರ ಮನಗೆದ್ದಿತು. ನಾಡಹಬ್ಬದ ಪ್ರಯುಕ್ತ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ರಾಜ್ಯಪಾಲರು ವಜೂಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಆಹ್ವಾನಿಸಲಾಗಿತ್ತು ಹಾಗೂ ಆಹ್ವಾನ ಪತ್ರಿಕೆಯಲ್ಲಿ ಗಣ್ಯರ ಹೆಸರೂ ಇತ್ತು.
ಆದರೆ, ಅವರಾರೂ ಆಗಮಿಸಲಿಲ್ಲ. ಈ ಗೈರುಹಾಜರಿ ನಡುವೆಯೇ ಕಲಾವಿದರು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಕೊರತೆ ನೀಗಿಸಿತು.ಮಂಡ್ಯದ ಕೆ.ಎಂ.ನಾಗೇಶ್ ಮತ್ತು ತಂಡದ ಪೂಜಾ ಕುಣಿತ, ಚಾಮರಾಜನಗರದ ಬಾಲು ಮತ್ತು ತಂಡದ ಗೊರವರ ಕುಣಿತ, ಮೂಡಬಿದರೆ ಲೀಲಾಧರ ಹಾಗೂ ತಂಡದ ಕಂಗೀಲು ನೃತ್ಯ, ವಿಜಯಪುರದ ಹುಚ್ಚಪ್ಪ ಮಾದಾರ ಹಾಗೂ ತಂಡದ ಕೀಲುಕುದುರೆ, ಚಿತ್ರದುರ್ಗದ ಶ್ರೀನಿವಾಸ ಮತ್ತು ತಂಡದ ಗಾರುಡಿ ಗೊಂಬೆ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.
ಪ್ರೇಮಲತಾ ದಿವಾಕರ ಶಾಸಿ ಮತ್ತು ತಂಡದ ದೇಶಭಕ್ತಿ ಹಾಗೂ ಸುಗಮ ಸಂಗೀತ, ಶಿವಮೊಗ್ಗದ ಗಣೇಶ್ ದೇಸಾಯಿ ಮತ್ತು ತಂಡದಿಂದ ಜನಪದ ಗೀತೆ, ನಗರದ ಪದ್ಮಿನಿ ಅಚ್ಚಿ ಮತ್ತು ತಂಡದ ನೃತ್ಯ ರೂಪಕ, ಬೆಂಗಳೂರು ಗ್ರಾಮಾಂತರದ ರವಿತೇಜ್ ನಾಗ್ ಮತ್ತು ತಂಡ ಪ್ರದರ್ಶಿಸಿದ ಡೊಳ್ಳು ಕುಣಿತಕ್ಕೆ ನೆರೆದ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.