ಪುಸ್ತಕ ಮೇಳದಲ್ಲಿ ಭರ್ಜರಿ ವಹಿವಾಟು
Team Udayavani, Aug 16, 2018, 12:58 PM IST
ಬೆಂಗಳೂರು: ಪುಸ್ತಕ ಓದುಗರ ಸಂಖ್ಯೆ ದಿನೇ ದಿನೆ ಕ್ಷೀಣವಾಗುತ್ತಿದೆ ಎಂಬ ಮಾತುಗಳ ನಡುವೆಯೇ ನಗರದಲ್ಲಿ ಪುಸ್ತಕ ಪ್ರಾಧಿಕಾರ ಸೇರಿದಂತೆ ಅಕಾಡೆಮಿಗಳು ಪ್ರಾರಂಭಿಸಿರುವ ಮೇಳದಲ್ಲಿ ಪುಸ್ತಕ ಮಾರಾಟ ಭರ್ಜರಿಯಾಗಿ ನಡೆದಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳು ಶೇ.50ರ ರಿಯಾಯಿತಿ ದರದಲ್ಲಿ ಕೃತಿಗಳ ಮಾರಾಟದಲ್ಲಿ ತೊಡಗಿದ್ದು, ಸುಮಾರು 3 ಲಕ್ಷ ರೂ.ವಹಿವಾಟು ನಡೆದಿದೆ.
ಆ.1 ರಿಂದ ಆರಂಭವಾಗಿರುವ ಮಾರಾಟ ಮೇಳ ಈ ತಿಂಗಳ ಅಂತ್ಯದವರೆಗೂ ಇರಲಿದ್ದು, ಐದು ಲಕ್ಷ ರೂ. ಮೇಲ್ಪಟ್ಟು ವಹಿವಾಟು ಆಗುವ ನಿರೀಕ್ಷೆಯಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಕೃತಿಗಳಿಗೆ ಆನ್‌ಲೈನ್‌ನಲ್ಲೂ ಬೇಡಿಕೆ ಉಂಟಾಗಿರುವುದು ವಿಶೇಷ.
ಓದುಗರಲ್ಲಿ ಪುಸ್ತಕ ಓದುವ ಅಭಿರುಚಿ ವೃದ್ಧಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಶೇ.50ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟದಲ್ಲಿ ತೊಡಗಿಕೊಂಡಿದ್ದು, ಸಾಹಿತ್ಯಾಸಕ್ತರನ್ನು ಸೆಳೆಯುತ್ತಿದೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿರುವ “ಸಿರಿಗನ್ನಡ ಪುಸ್ತಕ ಮಳಿಗೆ’ಯಲ್ಲಿ ಮಾರಾಟ ಮೇಳ ಆಯೋಜಿಸಲಾಗಿದ್ದು ವೈದ್ಯಕೀಯ ಲೋಕದ ಕುರಿತಾದ ಪುಸ್ತಕಗಳು, ಸಣ್ಣಕಥೆಗಳು, ವಿಮರ್ಶೆ, ಜಾನಪದ, ಕೃಷಿ ಸಂಪುಟಗಳು ಸೇರಿದಂತೆ ಸಾರಸ್ವತ ಲೋಕದ ಹೆಸರಾಂತ ಸಾಹಿತಿಗಳ ನೂರಾರು ಪುಸ್ತಕಗಳು ಇಲ್ಲಿ ಮಾರಾಟಕ್ಕಿವೆ.
ಡಿಮ್ಯಾಂಡ್: ಕನ್ನಡ ಪುಸ್ತಕ ಪ್ರಾಧಿಕಾರ ಹೊರ ತಂದಿರುವ ಪುಸ್ತಕಗಳಿಗೆ ಬಾರಿ ಬೇಡಿಕೆ ಇದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃಡಾ.ಜಿ.ಎಸ್.ಶಿವರುದ್ರಪ್ಪ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರ ಕೃತಿಗಳು ಹೆಚ್ಚು ಮಾರಾಟವಾಗಿವೆ. ಜಿ.ಎಸ್.ಶಿವರುದ್ರಪ್ಪ ಅವರ “ಸಮಗ್ರ ಗದ್ಯ’, ಕಂಬಾರರ “ನೆಲ ಸಂಪಿಗೆ’ ಕೃತಿಗಳಿಗೆ ಡಿಮ್ಯಾಂಡ್ ಇದ್ದು, ಈ ಪುಸ್ತಕಗಳನ್ನು ಕೇಳುವವರ ಸಂಖ್ಯೆ ಹೆಚ್ಚಿದೆ ಎಂದು ಅಕಾಡೆಮಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಇಲ್ಲಿಯವರೆಗೂ ವಿವಿಧ ಲೇಖಕರ ಸುಮಾರು 3 ಸಾವಿರ ಪುಸ್ತಕಗಳು ಖರೀದಿಯಾಗಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಒಂದರಲ್ಲಿ ಸುಮಾರು 1.5 ಲಕ್ಷ ವಹಿವಾಟು ನಡೆದಿದೆ. ಈ ತಿಂಗಳ ಅಂತ್ಯದ ವರೆಗೂ ಮಾರಾಟ ನಡೆಯಲಿದೆ. ಈ ಸಂಖ್ಯೆ ಮತ್ತಷ್ಟು ದ್ವಿಗುಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬರಗೂರು ಕೃತಿಗಳಿಗೂ ಬೇಡಿಕೆ: ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಕೇವಲ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಅಷ್ಟೇ ಇಲ್ಲ.
ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ಹಲವು ಕೃತಿಗಳು ಮಾರಾಟಕ್ಕಿವೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಸಣ್ಣ ಕಥೆ, ಪ್ರಬಂಧಗಳು ಮತ್ತು ವಿಮರ್ಶೆಗಳ ಜತೆಗೆ ಬರಗೂರು ರಾಮಚಂದ್ರಪ್ಪ ಅವರ ಕೃತಿಗಳು ಹೆಚ್ಚು ಖರೀದಿಯಾಗಿವೆ. ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದಲೆ ಒಟ್ಟು 1 ಲಕ್ಷ ವಹಿವಾಟು ನಡೆದಿದೆ.
ಆಲ್‌ಲೈನ್‌ನಲ್ಲಿ ವಹಿವಾಟು: ಕನ್ನಡ ಪುಸ್ತಕ ಪ್ರಾಧಿಕಾರ ಆನ್‌ಲೈನ್‌ನಲ್ಲೂ ಪುಸ್ತಕ ಮಾರಾಟ ಆರಂಭಿಸಿದ್ದು, ಆ.1 ರಿಂದ 47 ಸಾವಿರ 461ರೂ. ವಹಿವಾಟು ನಡೆದಿದೆ.”ಸಾಹಿತ್ಯ ರತ್ನ’, “ಸುವರ್ಣ ಪುತ್ಥಳಿ’, “ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳು’,”ಸಾಹಿತ್ಯ ಮನೆ’, “ಷೆಕ್ಸ್‌ಪಿಯರ್ ನಾಟಕ’ ಸೇರಿದಂತೆ ಹಲವು ಕೃತಿಗಳು ಮಾರಾಟವಾಗಿವೆ. ಸುಮಾರು 865 ಕೃತಿಗಳನ್ನು ಓದುಗರು ಖರೀದಿಸಿದ್ದಾರೆ. ಅಲ್ಲದೆ, ಎಂಇಎಸ್ ಕಾಲೇಜಿನ ಪ್ರಾಂಶು ಪಾಲರಾದ ಲೋಕೇಶ್ವರಪ್ಪ ಅವರು ಒಂದೇ ದಿನ ಸುಮಾರು 10 ಸಾವಿರ ರೂ. ಪುಸ್ತಕಗಳನ್ನ ಖರೀದಿ ಮಾಡಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಾಧಿಕಾರದ ಪುಸ್ತಕಗಳಿಗೆ ಡಿಮ್ಯಾಂಡ್ ಬಂದಿರುವುದು ಸಂತಸ ನೀಡಿದೆ. ಅಲ್ಲದೆ, ಪ್ರಾಧಿಕಾರದ ಆನ್ ಲೈನ್‌ನಲ್ಲೂ ಕೃತಿಗಳಿಗೆ ಬೇಡಿಕೆ ಬಂದಿದ್ದು, ಓದುಗರಿಗೆ ಸರಿಯಾದ ರೀತಿಯಲ್ಲಿ ಪುಸ್ತಕಗಳನ್ನು ತಲುಪಿಸಿದರೆ ಅವರು ಕೊಂಡು ಕೊಳ್ಳುತ್ತಾರೆ ಎಂಬುವುದ ಸಾಭೀತಾಗಿದೆ.
-ವಸುಂಧರಾ ಭೂಪತಿ, ಕನ್ನಡಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.