ಚೆಂಬೂರು ಸುಬ್ರಹ್ಮಣ್ಯ ಮಠ: ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ
Team Udayavani, Aug 16, 2018, 2:55 PM IST
ಮುಂಬಯಿ: ಚೆಂಬೂರು ಛೆಡ್ಡಾನಗರದ ಶ್ರೀ ನಾಗ ಸುಬ್ರಹ್ಮಣ್ಯ ಸನ್ನಿಧಿ, ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀಮದ್ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ನಾಗರ ಪಂಚಮಿ ಆಚರಣೆಯು ಆ. 15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6.30 ರಿಂದ ಪವಮಾನ ಹೋಮ, ಬೆಳಗ್ಗೆ 8 ರಿಂದ ಅಭಿಷೇಕ, ಬೆಳಗ್ಗೆ 9ರಿಂದ ಸಂತಾನ-ಆರೋಗ್ಯ- ಸಂಪತ್ತು ಪ್ರಾಪ್ತಿಗಾಗಿ ಸಾಮೂಹಿಕ ಆಶ್ಲೇಷಾ ಬಲಿ, ನವಕ ಪ್ರಧಾನ ಕಲಶ, ಸರ್ಪದೋಷ-ಸರ್ಪಶಾಪ ಪರಿಹಾ ರಾರ್ಥಕವಾಗಿ ಸರ್ಪತ್ರಾಯ ಮಂತ್ರ ಹೋಮ, ಪೂರ್ವಾಹ್ನ 10 ರಿಂದ ಮಹಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ 12ರಿಂದ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ 5.30 ರಿಂದ ಸರ್ವ ಐಶ್ವರ್ಯ ಸಿದ್ಧಿಗಾಗಿ ಅಷ್ಟಕುಲ ನಾಗಪೂಜೆ, ರಾತ್ರಿ 7.30ರಿಂದ ಮಂಗಳಾರತಿ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ಉದ್ಯಮಿಗಳಾದ ನಾಗೇಂದ್ರ ಅರುಣ ಆಚಾರ್ಯ ಅವರು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.
ಧಾರ್ಮಿಕ ವಿಧಿ-ವಿಧಾನಗಳನ್ನು ನಾರಾವಿ ಗುರುರಾಜ್ ಭಟ್, ವಿಷ್ಣುರಾಜ್ ಉಪಾಧ್ಯ,
ಕ್ಷೇತ್ರದ ಪ್ರಬಂಧಕ ವಿಷ್ಣುಮೂರ್ತಿ ಕಾರಂತ್, ಶ್ರೀಪ್ರಸಾದ್ ಭಟ್ ಹಾಗೂ ಅರ್ಚಕ ವೃಂದದವರು ನೆರವೇರಿಸಿದರು.
ತುಳು-ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ರಾಜಕೀಯ ಧುರೀಣರು, ವಿವಿಧ ತುಳು-ಕನ್ನಡಪರ ಹಾಗೂ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.