ಸಿನ್ಸಿನಾಟಿ ಟೆನಿಸ್ ಚಾಂಪಿಯನ್ ಮುಗುರುಜಾ ಔಟ್
Team Udayavani, Aug 17, 2018, 6:00 AM IST
ಸಿನ್ಸಿನಾಟಿ: ಹಾಲಿ ಚಾಂಪಿಯನ್ ಗಾರ್ಬಿನ್ ಮುಗುರುಜಾ ಸಿನ್ಸಿನಾಟಿ ಟೆನಿಸ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಬುಧವಾರ ರಾತ್ರಿ ಮಳೆ ನಡುವೆ ಸಾಗಿದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಉಕ್ರೇನಿನ ಲೆಸಿಯಾ ಸುರೆಂಕೊ 2-6, 6-4, 6-4 ಅಂತರದಿಂದ ಮುಗುರುಜಾ ಆಟವನ್ನು ಕೊನೆಗಾಣಿಸಿದರು.
ಸುರೆಂಕೊ ಅವರಿನ್ನು ರಶ್ಯದ ಎಕತೆರಿನಾ ಮಕರೋವಾ ವಿರುದ್ಧ ಆಡಲಿದ್ದಾರೆ. ಮಕರೋವಾ ಫ್ರಾನ್ಸ್‌ನ ಅಲಿಜೆ ಕಾರ್ನೆಟ್ ಅವರನ್ನು 6-2, 6-0 ಅಂತರದಿಂದ ಹಿಮ್ಮೆಟ್ಟಿಸಿದರು. ವಿಶ್ವದ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್ ಪಂದ್ಯಕ್ಕೂ ಮಳೆಯಿಂದ ಅಡಚಣೆಯಾಗಿದೆ. ಪಂದ್ಯ ಸ್ಥಗಿತಗೊಂಡಾಗ ಅವರು ಆಸ್ಟ್ರೇಲಿಯದ ಅಜ್ಲಾ ಟೊಮ್ಲಾನೊವಿಕ್ ವಿರುದ್ಧ 4-6, 6-3, 4-3ರ ಮುನ್ನಡೆಯಲಿದ್ದರು. ಆ್ಯಂಜೆಲಿಕ್ ಕೆರ್ಬರ್ 3 ಸೆಟ್‌ಗಳ ಹೋರಾಟದ ಬಳಿಕ ಅನಾಸ್ತಿಸಿಯಾ ಪಾವುಚೆಂಕೋವಾ ವಿರುದ್ಧ 4-6, 7-5, 6-4 ಅಂತರದಿಂದ ಗೆದ್ದು ಬಂದರು.
ಯುಎಸ್ ಓಪನ್ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಜರ್ಮನಿಯ ಟಜಾನಾ ಮರಿಯಾ ವಿರುದ್ಧ 6-3, 6-2 ಅಂತರದಿಂದ ಸೋಲಿಸಿದರು. ಇವರ ಮುಂದಿನ ಎದುರಾಳಿ ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್. ಅವರು 3-6, 6-2, 7-6 (1)ರಿಂದ ಸ್ವೀಡನ್ನಿನ ರಬೆಕಾ ಪೀಟರ್‌ಸನ್‌ಗೆ ಸೋಲುಣಿಸಿದರು.
ಬೆಲರೂಸ್‌ನ ಅರಿನಾ ಸಬಲೆಂಕೊ ಜೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು 2-6, 6-3, 7-5ರಿಂದ; ಆಸ್ಟ್ರೇಲಿಯದ ಆ್ಯಶೆ ಬಾರ್ಟಿ 7-5, 6-3ರಿಂದ ಎಸ್ತೋನಿಯಾದ ಕಯಾ ಕನೆಪಿ ಅವರನ್ನು ಸೋಲಿಸಿ 3ನೇ ಸುತ್ತಿಗೆ ಮುನ್ನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.