ಟೋಲ್ ಸಂಗ್ರಹ ತಾತ್ಕಾಲಿಕ ಮುಂದೂಡಿಕೆ
Team Udayavani, Aug 17, 2018, 9:16 AM IST
ಕೋಟ/ಹೆಜಮಾಡಿ: ರಾಷ್ಟ್ರೀಯಹೆದ್ದಾರಿ 66ರಲ್ಲಿ ಸ್ಥಳೀಯರಿಗೂ ಟೋಲ್ ವಸೂಲು ಮಾಡುವ ನವಯುಗ ಕಂಪೆನಿ ಕ್ರಮಕ್ಕೆ ಸ್ಥಳೀಯರ, ರಾಷ್ಟ್ರೀಯ ಹೆದ್ದಾರಿ ಹೋರಾಟ ಗಾರರು, ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಗುರುವಾರ ಟೋಲ್ ಸಂಗ್ರ ಹಣೆ ಕ್ರಮಕ್ಕೆ ಕೋಟ ಮತ್ತು ಪಡುಬಿದ್ರಿಯ ಹೆಜಮಾಡಿಯಲ್ಲಿ ಕಂಪೆನಿ ಮುಂದಾಗುತ್ತಿದ್ದಂತೆ ಜನರು ಜಮಾಯಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಕಂಪೆನಿ ಎರಡೂ ಕಡೆ ಮುಂದಾಗುತ್ತಿದ್ದಂತೆ, ಪೊಲೀಸರು, ತಹಶೀಲ್ದಾರರು ಆಗಮಿಸಿದ್ದು ಪರಿ ಸ್ಥಿತಿ ತಹಬಂದಿಗೆ ತರುವ ಯತ್ನ ಮಾಡಿದ್ದಾರೆ.
ಮಾತುಕತೆಯ ಬಳಿಕ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ನಡೆಸಲಾಗುವ ಸಭೆಯ ಬಳಿಕಷ್ಟೇ ಟೋಲ್ ಸಂಗ್ರಹದ ಕುರಿತಾಗಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಅದುವರೆಗೆ ಹೆಜಮಾಡಿ, ಸಾಸ್ತಾನ ಟೋಲ್ ಗೇಟ್‌ಗಳಲ್ಲಿ ಯಥಾಸ್ಥಿತಿಯನ್ನು ಕಾಪಾಡಿ ಕೊಳ್ಳಬೇಕೆಂದು ಅಧಿಕಾರಿಗಳ ಸಮಕ್ಷಮ ತೀರ್ಮಾನಿಸಲಾಯಿತು.
ಕೆಎ 20 ವಾಹನಕ್ಕೂ ಟೋಲ್
ಕಳೆದ ಒಂದು ವರ್ಷದಿಂದ ಕೆಎ. 20 ವಾಹನಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಇದರಿಂದ ಕಂಪೆನಿಗೆ 200 ಕೋಟಿ ರೂ. ನಷ್ಟವಾಗಿದೆ. ಅದನ್ನು ಸರಕಾರ ನೀಡಬೇಕು ಎಂದು ಕಂಪೆನಿ ಆಗ್ರಹ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಎಲ್ಲಾ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಆದೇಶ ನೀಡಲಾಗಿತ್ತು ಎನ್ನಲಾಗಿದೆ.
500 ಮೀ. ಒಳಗೂ ಟೋಲ್!
ನೂತನ ನಿಯಮ ಜಾರಿಯಾದರೆ 500 ಮೀ. ಹೋಗಲೂ ಟೋಲ್ ಕಟ್ಟಿ ಹೋಗಬೇಕಾದ ಸ್ಥಿತಿ ಬರಲಿದೆ. ಪೆಟ್ರೋಲ್ ಹಾಕಿಸಲು, ಅಂಗಡಿಯಿಂದ ಸಾಮಾನು ತರಲೂ ಟೋಲ್ ಕಟ್ಟಬೇಕಾಗುತ್ತದೆ ಎನ್ನುವ ಆತಂಕ ಸ್ಥಳೀಯರದ್ದು.
ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎಕಾಏಕಿ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು ಸರಿಯಲ್ಲ ಹಾಗೂ ಕಾಮಗಾರಿ ಪೂರ್ಣಗೊಳ್ಳುವ ತನಕ ಯಾವುದೇ ಕಾರಣಕ್ಕೆ ಶುಲ್ಕ ಸಂಗ್ರಹಿಸಲು ಬಿಡುವುದಿಲ್ಲ. ಅನಂತರವೂ 5ಕಿ.ಮೀ. ಒಳಗಿನ ವಾಣಿಜ್ಯ ಮತ್ತು 8 ಕಿ.ಮೀ ವರೆಗಿನ ವಾಣಿಜ್ಯೇತರ ಎಲ್ಲಾ ವಾಹನಗಳಿಗೆ ಉಚಿತ ಪ್ರವೇಶ ನೀಡಬೇಕು. ಈ ಕುರಿತು ಹೋರಾಟ ಮುಂದುವರಿಯಲಿದೆ.
– ಪ್ರತಾಪ್ ಶೆಟ್ಟಿ,
ಅಧ್ಯಕ್ಷರು ಹೆದ್ದಾರಿ ಜಾಗೃತಿ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.