ಪುರುಷರಲ್ಲೂ ಹೆಚ್ಚಾಗುತ್ತಿದೆ ‘ಶ್ರಗ್’ ಟ್ರೆಂಡ್,
Team Udayavani, Aug 17, 2018, 2:01 PM IST
ಫ್ಯಾಶನ್ ಜಗತ್ತಿಗೆ ಇಂದಿನ ಯುವಜನತೆಗೆ ಎಷ್ಟು ವಾಲಿದ್ದಾರೆ ಅಂದರೆ, ದಿನ ಬೆಳಗಾಗುವುದರಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗುತ್ತಿವೆ. ಇಂದಿನ ಯುವಕ -ಯುವತಿಯರು ಕೂಡ ಈ ಟ್ರೆಂಡ್‌ಗೆ ಒಗ್ಗಿಕೊಂಡಿದ್ದು, ಮಾರುಕಟ್ಟೆಗೆ ಬರುವಂತಹ ಹೊಸ ಟ್ರೆಂಡ್ ಬಗ್ಗೆ ಕಾತುರದಿಂದ ಕಾಯುತ್ತಿರುತ್ತಾರೆ. ಅಂದಹಾಗೆ, ಸದ್ಯ ಮಳೆಗಾಲವಾಗಿದ್ದರೂ, ಸೆಕೆ ನಿಂತಿಲ್ಲ. ಈ ಸಮಯದಲ್ಲಿ ಬಟ್ಟೆ ಮೇಲೆ ಜಾಕೆಟ್ ಧಿರಿಸುವುದು ಕಷ್ಟ. ಹೀಗಿದ್ದಾಗ ಶ್ರಗ್ ಧರಿಸುವಂತಹ ಹೊಸ ಟ್ರೆಂಡ್ ಪ್ರಾರಂಭವಾಗಿದೆ.
ಮಂಗಳೂರಿನ ಅಂಗಡಿಗಳಲ್ಲಿಯೂ ವಿವಿಧ ಬಣ್ಣದ ಶ್ರಗ್‌ಗಳಿಂದು ಹೆಚ್ಚಾಗಿ ಮಾರಾಟವಾಗುತ್ತಿದೆ. ಒಂದು ಕಾಲದಲ್ಲಿ ಮಹಿಳೆಯರೇ ಹೆಚ್ಚಾಗಿ ಧಿರಿಸುತ್ತಿದ್ದ ಶ್ರಗ್ ಗಳಿಂದು ಪುರುಷರು, ಮಕ್ಕಳ ಫೆವರೇಟ್ ಡ್ರೆಸ್ ಗಳಾಗಿವೆ. ನೋಡಲು ಥೇಟ್ ಅಂಗಿಯಂತಿರುವ ಶ್ರಗ್‌ಗೆ ಬಟನ್, ಗುಂಡಿಗಳಿರುವುದಿಲ್ಲ. ಇದೇ ಕಾರಣದಿಂದಾಗಿ ಇದನ್ನು ಮೇಲುಡುಪಿನಂತೆ ಧರಿಸುತ್ತಾರೆ. ಜಾಕೆಟ್‌ನಂತೆ ಧರಿಸುವುದು ಕೂಡ ಫ್ಯಾಶನ್ ಆಗಿದೆ.
ಹೆಚ್ಚಾಗಿ ಜೀನ್ಸ್ ಪ್ಯಾಂಟ್-ಟೀ ಶರ್ಟ್ ತೊಡುವ ಮಂದಿಗೆ ಶ್ರಗ್‌ಗಳು ಅಂದವಾಗಿ ಕಾಣುತ್ತವೆ. ಇತ್ತೀಚಿನ ದಿನಗಳಲ್ಲಿ ಶ್ರಗ್‌ನ ಆಕಾರದಲ್ಲಿಯೂ ತುಂಬಾ ಬದಲಾವಣೆಯಾಗಿವೆ. ಚಿಕ್ಕ ಶ್ರಗ್, ಕಾಟನ್, ನೆಟೆಡ್, ಲೈಕ್ರಾ, ಜೆರ್ಸಿ, ಲೇಸ್, ಡೆನಿಮ್, ಮಿಕ್ಸ್ ಆ್ಯಂಡ್ ಮ್ಯಾಚ್, ಕಾಟನ್ ಕಾರ್ಗೊ, ಉಲ್ಲನ್‌ನಿಂದ ಮಾಡಿರುವಂತಹ ಶ್ರಗ್‌ಗಳಿಗಿಂದು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.
ಕಲರ್ ಕಾಂಬಿನೇಷನ್
ಯಾವುದೇ ಡ್ರೆಸ್ ಧರಿಸುವಾಗ ಕಲರ್ ಕಾಂಬಿನೇಷನ್ ಆಯ್ಕೆ ಬಹುಮುಖ್ಯ. ಹಳದಿ ಅಂಗಿಗೆ ಕೆಂಪು ಬಣ್ಣದ ಶ್ರಗ್ ಹೊಂದಿಕೆ ಆಗುವುದಿಲ್ಲ. ಅದರ ಬದಲು ಪುರುಷರಿಗೆ ಹೊಂದಿಕೊಳ್ಳುವ ಕಪ್ಪು, ನೀಲಿ, ಬೂದು, ನೇರಳೆ ಬಣ್ಣದ ಶ್ರಗ್‌ಗಳು ಸಾಧಾರಣವಾಗಿ ಎಲ್ಲಾ ಬಗೆಯ ಡ್ರೆಸ್‌ಗಳಿಗೆ ಹೊಂದಿಕೆಯಾಗುತ್ತದೆ. ಶ್ರಗ್ ಖರೀದಿ ಮಾಡುವ ಸಮಯದಲ್ಲಿನ ಹೆಚ್ಚಿನ ಮಂದಿ ಸಣ್ಣ ಗಾತ್ರದ ಶ್ರಗ್‌ಗಳನ್ನು ಆಯ್ಕೆ ಮಾಡುವುದಿಲ್ಲ. ಪುರುಷರು ಶ್ರಗ್ ಆಯ್ಕೆ ಮಾಡುವಾಗ ಸೊಂಟದವರೆಗೆ ಉದ್ದವಿರುವ ಶ್ರಗ್‌ಗಳನ್ನು ಆಯ್ಕೆ ಮಾಡುತ್ತಾರೆ. ಸಮ್ಮರ್ ಸಮಯದಲ್ಲಿ ಕಾಟನ್, ಫುಲ್ ಸ್ಲೀವ್ ಶ್ರಗ್,ವಾಟರ್ ಫಾಲ್ ಫುಲ್ ಸ್ಲೀವ್ ಶ್ರಗ್, ಕಟನ್ ಬ್ಲೆಂಡ್ ಶ್ರಗ್ ಸೇರಿದಂತೆ ಮತ್ತಿತರ ವಿನ್ಯಾಸಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಸಿನಿಮಾದಿಂದ ಟ್ರೆಂಡ್ ಶುರು
ಈ ಹಿಂದೆ ಮಹಿಳೆಯರು ಹೆಚ್ಚಾಗಿ ಶ್ರಗ್‌ಗಳನ್ನು ಧಿರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬರುವಂತಹ ಚಲನಚಿತ್ರಗಳಲ್ಲಿ ಶ್ರಗ್ ಬಳಕೆ ಕಂಡು ಹುಡುಗರು ಕೂಡ ಈ ಟ್ರೆಂಡ್‌ನತ್ತ ವಾಲಲು ಪ್ರಾರಂಭಿಸಿದ್ದಾರೆ. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಗೂ ವಿಸ್ತರಿಸಿದ್ದು, ವಿವಿಧ ಬಗ್ಗೆಯ ಆಯ್ಕೆಗಳು ಸಿಗುತ್ತಿವೆ. ಅಲ್ಲದೆ, ಶ್ರಗ್‌ಗಳಿಗೆ ಅನ್‌ಲೈನ್ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಪುರುಷರ ಶ್ರಗ್ ಗಳು ಸುಮಾರು 500 ರೂ. ನಿಂದ ಪ್ರಾರಂಭವಾಗಿ 3000ರೂ.ಗಳಿಗೂ ಮೇಲ್ಪಟ್ಟ ಧಿರಿಸುಗಳಿವೆ.
ಟ್ರೆಂಡ್ ಹೆಚ್ಚಾಗಿದೆ
ಮಂಗಳೂರು ಮಾರುಕಟ್ಟೆಯಲ್ಲಿ ಶ್ರಗ್ ಟ್ರೆಂಡ್ ಹೆಚ್ಚಾಗಿದೆ. ಈ ಹಿಂದೆ ಮಹಿಳೆಯರು ಮಾತ್ರ ಶ್ರಗ್ ಧರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪುರುಷರು, ಮಕ್ಕಳಲ್ಲಿಯೂ ಈ ಟ್ರೆಂಡ್ ಬಂದುಬಿಟ್ಟಿದೆ.
– ಪ್ರಕಾಶ್ ಬಟ್ಟೆ ವ್ಯಾಪಾರಸ್ಥ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.