ಜಲಪ್ರಳಯ :ಕೇರಳದಲ್ಲಿ 17 ದಿನಗಳಲ್ಲಿ 164 ಮಂದಿ ಸಾವು


Team Udayavani, Aug 18, 2018, 6:00 AM IST

17ksde31a.jpg

ಕಾಸರಗೋಡು: ಈ ಹಿಂದೆ ಎಂದು ಕಾಣದ ಮಳೆಯ ರುದ್ರ ನರ್ತನದಿಂದ ಕೇರಳದಲ್ಲಿ ಕಳೆದ 17 ದಿನಗಳಲ್ಲಿ 164 ಮಂದಿ ಸಾವಿಗೀಡಾಗಿದ್ದಾರೆ. ಕಾಸರಗೋಡು ಜಿಲ್ಲೆ ಹೊರತುಪಡಿಸಿ ರಾಜ್ಯದ 13 ಜಿಲ್ಲೆಗಳಲ್ಲಿ ಜಲಪ್ರಳಯ ಉಂಟಾಗಿದ್ದು, ಮಳೆ ಇನ್ನೂ ಸುರಿಯುತ್ತಿದೆ.

ಆ. 16ರಂದು ಸುರಿದ ಭಾರೀ ಮಳೆಯಿಂದಾಗಿ ಕೊಟ್ಯಾಡಿ ಪರಪ್ಪೆಯಲ್ಲಿ ಪಯಸ್ವಿನಿ ಹೊಳೆ ಉಕ್ಕಿ ಹರಿದ ಪರಿಣಾಮವಾಗಿ ಸುಳ್ಯ-ಮುಳ್ಳೇರಿಯ ಅಂತಾರಾಜ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೊಳೆಯಲ್ಲಿ ಮಳೆ ನೀರು ಉಕ್ಕಿ ಹರಿದು ರಸ್ತೆಯ ಮೇಲೂ ಹರಿಯತೊಡಗಿತು. ಇದರಿಂದ ಬಸ್‌ ಸಹಿತ ಘನ ವಾಹನಗಳಿಗೆ ಸಂಚರಿಸಲು ಮಾತ್ರವೇ ಸಾಧ್ಯವಾಯಿತು. ಅಪಾಯ ಸಾಧ್ಯತೆಯನ್ನು ಮನಗಂಡು ಇತರ ವಾಹನಗಳಿಗೆ ಸ್ಥಳೀಯರು ಹೋಗದಂತೆ ತಡೆದರು. ಸಂಜೆಯಾಗುತ್ತಿದ್ದಂತೆ ನೀರಿನ ಪ್ರಮಾಣ ಕಡಿಮೆಯಾಯಿತು. ಆ ಬಳಿಕವಷ್ಟೇ ವಾಹನ ಸಂಚಾರ ಪುನರಾರಂಭಗೊಂಡಿತು. ಆದರೆ ಶುಕ್ರವಾರ ಬೆಳಗ್ಗಿನಿಂದ ಮತ್ತೆ ಧಾರಾಕಾರ ಮಳೆ ಸುರಿದ ಪರಿಣಾಮವಾಗಿ ಅತ್ತನಾಡಿ ಪರಿಸರದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ಇದರ ಪರಿಣಾಮವಾಗಿ ಚಂದ್ರಗಿರಿ ನದಿಗೆ ಸಂಪರ್ಕ ಕಲ್ಪಿಸುವ ಪಯಸ್ವಿನಿ ಹೊಳೆ ಉಕ್ಕಿ ಹರಿಯುತ್ತಿದೆ.

ಪ್ರವಾಹ ಪೀಡಿತ ಕೇರಳದ ಇತರ ಜಿಲ್ಲೆಗಳಲ್ಲಿ ಭಾರತೀಯ ವ್ಯೋಮಸೇನಾ ಪಡೆಯ ಮೂಲಕ ರಕ್ಷಿಸಲಾಗುತ್ತಿದೆ. ಸಂತ್ರಸ್ತರ ಶಿಬಿರದಲ್ಲಿ ಸಹಸ್ರಾರು ಮಂದಿ ಅಭಯ ಪಡೆದಿದ್ದಾರೆ. ಹೆಲಿಕಾಪ್ಟರ್‌ಗಳ ಮೂಲಕ ಆಹಾರ ತಲುಪಿಸಲಾಗುತ್ತಿದೆ. ನೆರೆಯಲ್ಲಿ ಸಿಲುಕಿದವರನ್ನು ರಕ್ಷಿಸಲು 40 ರೆಸ್ಕೂé ಡ್ರೈವಿಂಗ್‌ ಟೀಮ್‌ನ್ನು ಕಾರ್ಯಾಚರಣೆಗಿಳಿಸಲಾಗಿದೆ.

ರಾಜ್ಯದ 13 ಜಿಲ್ಲೆಗಳಲ್ಲಿ ಅತೀ ಜಾಗೃತೆ ನಿರ್ದೇಶ ನೀಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವಿದ್ಯುತ್‌ ಮತ್ತು ವಾರ್ತಾವಿನಿಮಯ ಸೌಕರ್ಯವೂ ಅಸ್ತವ್ಯಸ್ತಗೊಂಡಿದೆ. ನೆರೆ ಪ್ರದೇಶದಿಂದ ಜನರು ಸಾಮೂಹಿಕವಾಗಿ ಪಲಾಯನಗೈಯುತ್ತಿರುವ ದೃಶ್ಯವೂ ಕಂಡು ಬಂದಿದೆ. ರಾಜ್ಯದ ಎಲ್ಲಾ ಶಾಲೆಗಳಿಗೆ ಶುಕ್ರವಾರದಿಂದ ಆ.29 ರ ವರೆಗೆ ರಜೆ ಸಾರಲಾಗಿದೆ. ರಾಜ್ಯದ ಎಲ್ಲಾ ದೀರ್ಘ‌ ದೂರ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿದೆ. ಪ್ರವಾಹ ನೀರು ತುಂಬಿರುವ ನೆಡುಂಬಾಶೆÏàರಿ ವಿಮಾನ ನಿಲ್ದಾಣದಲ್ಲಿ ಆ.26 ರ ತನಕ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಎರಡು ದಿನಗಳ ವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಡಲ್ಕೊರೆತ ಸಾಧ್ಯತೆಯಿದ್ದು, ಜಾಗೃತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.

ಮರ ಬಿದ್ದು ಬೈಕ್‌ಗೆ ಹಾನಿ 
ನಗರದ ಅಡ್ಕತ್ತಬೈಲ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರದ ರೆಂಬೆಯೊಂದು ಮುರಿದು ಬಿದ್ದು ರಸ್ತೆ ಬದಿ ನಿಲ್ಲಿಸಿದ್ದ ಸೂರ್ಲು ನಿವಾಸಿಯ ಬೈಕ್‌  ಹಾನಿಗೀಡಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರೆಂಬೆ ಕಡಿದು ತೆಗೆದು ಸಾರಿಗೆ ಸಂಚಾರ ಸುಗಮಗೊಳಿಸಿದರು. ಮೊಗ್ರಾಲ್‌ ಕೊಪ್ಪರ ಬಜಾರ್‌ ರಾ.ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಮರವೊಂದು ರಸ್ತೆಗೆ ಅಡ್ಡ ಬಿದ್ದಿದೆ.

ನೀರು ಪಾಲಾದ ವ್ಯಕ್ತಿಯ ರಕ್ಷಣೆ  
ಕರಿಚ್ಚೇರಿ ಹೊಳೆಯಲ್ಲಿ ನೀರು ಪಾಲಾದ ಬೇಡಗ ಬಿಂಬುಂಗಲ್‌ ಚಂದ್ರನ್‌(40) ಅವರನ್ನು ಸ್ಥಳೀಯರು ರಕ್ಷಿಸಿದರು. ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ಚಂದ್ರನ್‌ ಅವರ ಬೊಬ್ಬೆ ಕೇಳಿ ಸ್ಥಳೀಯರು ಒಗ್ಗೂಡಿ ಹೊಳೆಗೆ ಹಗ್ಗ ಎಸೆದರು. ಹಗ್ಗವನ್ನು ಹಿಡಿದುಕೊಂಡ ಅವರನ್ನು ರಕ್ಷಿಸಿ ದಡಕ್ಕೆ ತರಲಾಯಿತು. ಆ ಬಳಿಕ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಯಿತು.

ತೃಕ್ಕನ್ನಾಡ್‌ನ‌ಲ್ಲಿ  ಮುಂದುವರಿದ ಕಡಲ್ಕೊರೆತ  
ಬೇಕಲ ತೃಕ್ಕನ್ನಾಡ್‌ನ‌ಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಈ ಪರಿಸರದ 30 ರಷ್ಟು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೋಟಿಕುಳಂ ಫಿಶರೀಸ್‌ ಹೈಸ್ಕೂಲ್‌ನಲ್ಲಿ ಸಂತ್ರಸ್ತರ ಶಿಬಿರವನ್ನು ಆರಂಭಿಸಲಾಗಿದೆ. ಮಳೆಯಿಂದ ತೊಂದರೆಗೀಡಾದ ಕುಟುಂಬಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತಿದೆ.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಮಂಜನಾಡಿ: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಓರ್ವ ಸಾವು

Road Mishap ಮಂಜನಾಡಿ: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಓರ್ವ ಸಾವು

Kasaragod: ತನಿಖೆಗೆ ಬಂದ ಪೊಲೀಸರಿಗೆ ಕಾರು ಢಿಕ್ಕಿ; ಆನ್‌ಲೈನ್‌ ವಂಚನೆ ಆರೋಪಿ ಪರಾರಿ

Kasaragod: ತನಿಖೆಗೆ ಬಂದ ಪೊಲೀಸರಿಗೆ ಕಾರು ಢಿಕ್ಕಿ; ಆನ್‌ಲೈನ್‌ ವಂಚನೆ ಆರೋಪಿ ಪರಾರಿ

Kasaragod ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭ

Kasaragod ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭ

Kasaragod: ಮನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ: ಬಂಧನ

Kasaragod: ಮನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ: ಬಂಧನ

Kasaragod: ವಾಯುಭಾರ ಕುಸಿತ; ಭಾರೀ ಮಳೆ ಸಾಧ್ಯತೆ 

Kasaragod: ವಾಯುಭಾರ ಕುಸಿತ; ಭಾರೀ ಮಳೆ ಸಾಧ್ಯತೆ 

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.