ಪ್ರಧಾನಿ ಇಂದು ರಾಜ್ಯದ ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ
Team Udayavani, Aug 18, 2018, 6:00 AM IST
ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇರಳಕ್ಕೆ ಭೇಟಿಯಿತ್ತು ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆಂದು ಕೇಂದ್ರ ಸಚಿವ ಕೆಜೆ ಆಲೊ#àನ್ಸ್ ತಿಳಿಸಿದ್ದಾರೆ.
ಮೋದಿ ಅವರು ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಸಂಪರ್ಕದಲ್ಲಿದ್ದು ಕೇಂದ್ರದಿಂದ ಸರ್ವ ರೀತಿಯ ನೆರವು ನೀಡುವ ಭರವಸೆಯಿತ್ತಿದ್ದಾರೆ.
ಪ್ರಧಾನಿಯವರು ರಾಜ್ಯದಲ್ಲಿನ ಪರಿಹಾರ ಕ್ರಮಗಳಿಗೆ ಸಂಬಂಧಿಸಿ “ಇತ್ಯಾತ್ಮಕ ನಿಲುವು’ ತಾಳಿದ್ದಾರೆಂದು ವಿಜಯನ್ ಅವರು ಪ್ರಧಾನಿ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಹೇಳಿದರು.
ಕೇಂದ್ರ ಆರೋಗ್ಯ ಸಚಿವ ರಾಜನಾಥ್ ಸಿಂಗ್ ಅವರು ಆ. 12ರಂದು ರಾಜ್ಯದ ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದರು ಮತ್ತು ಪರಿಹಾರ ಕಾರ್ಯಗಳಿಗೆ ತತ್‌ಕ್ಷಣದ ನೆರವಾಗಿ 100 ಕೋಟಿ ರೂ.ಗಳ ನೆರವನ್ನು ಪ್ರಕಟಿಸಿದ್ದರು.
ಟೆಲಿಕಾಂ ಕಂಪೆನಿಗಳಿಂದ ಉಚಿತ ಕರೆ, ಡೇಟಾ ಸೇವೆ:
ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ಬಿಎಸ್‌ಎನ್‌ಎಲ್, ಜಿಯೊ, ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಸಹಿತ ಟೆಲಿಕಾಂ ಕಂಪೆನಿಗಳು ಜನರಿಗೆ ಉಚಿತ ಕರೆ ಹಾಗೂ ಡೇಟಾ ಸೇವೆಗಳನ್ನು ನೀಡಲು ಮುಂದಾಗಿವೆ.
ಬಿಎಸ್‌ಎನ್‌ಎಲ್ 20 ನಿಮಿಷಗಳ ಉಚಿತ ಕರೆಯ ಕೊಡುಗೆ ನೀಡಿದೆ. ಜನರು ಬಿಎಸ್‌ಎನ್‌ಎಲ್ ಹಾಗೂ ಇತರ ನೆಟ್‌ವರ್ಕ್‌ಗಳಿಗೆ ಪ್ರತಿದಿನ 20 ನಿಮಿಷಗಳ ತನಕ ಉಚಿತ ಕರೆಗಳನ್ನು ಮಾಡಬಹುದಾಗಿದೆ. ಅಲ್ಲದೆ 7 ದಿನಗಳ ಕಾಲ ಉಚಿತ ಡೇಟಾ ಹಾಗೂ ಉಚಿತ ಎಸ್‌ಎಂಎಸ್ ಸೇವೆಗಳನ್ನು ನೀಡುವುದಾಗಿ ತಿಳಿಸಿದೆ.
ಐಡಿಯಾ ಕಂಪೆನಿ 10 ರೂ.ಗಳಿಗೆ ಉಚಿತ ಕರೆಗಳ ಕೊಡುಗೆ ನೀಡಿದೆ. ಅಲ್ಲದೆ 1 ಜಿಬಿ ಉಚಿತ ಡೇಟಾವನ್ನು ನೀಡಿದ್ದು ಇದನ್ನು 7 ದಿನಗಳ ಕಾಲ ಬಳಸಬಹುದಾಗಿದೆ. ಜಿಯೊ ಒಂದು ವಾರ ಕಾಲ ಅಪರಿಮಿತ ಕರೆ ಹಾಗೂ ಡೇಟಾವನ್ನು ಒದಗಿಸಿದೆ. ವೊಡಾಫೋನ್ 30 ರೂ.ಗಳಿಗೆ ಉಚಿತ ಕರೆ ವ್ಯವಸ್ಥೆ ಹಾಗೂ 1 ಜಿಬಿ ಡೇಟಾವನ್ನು ಒದಗಿಸಿದೆ. ಅಂತೆಯೇ ಏರ್‌ಟೆಲ್ ಕೂಡ ಒಂದು ವಾರ ಅವಧಿಗೆ 30 ರೂ.ಗಳಿಗೆ 1 ಜಿಬಿ ಉಚಿತ ಡೇಟಾ ಹಾಗೂ ಉಚಿತ ಕರೆ ಸೌಲಭ್ಯವನ್ನು ಕಲ್ಪಿಸಿದೆ.
ಸಾಮಾಜಿಕ ಮಾಧ್ಯಮ ಮೂಲಕ ಜನರ ಮೊರೆ
ಮಳೆಯಿಂದ ಜರ್ಝರಿತ ರಾಜ್ಯ ದಲ್ಲಿ ರಸ್ತೆಗಳೇ ನದಿಗಳಾಗಿ ಪರಿವರ್ತಿತವಾಗಿರುವ ಸಂದರ್ಭದಲ್ಲಿ ಗಗನಚುಂಬಿ ಕಟ್ಟಡಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು, ಹಾಸ್ಟೆಲ್‌ಗಳಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು ಹಾಗೂ ಚರ್ಚ್‌ಗಳಲ್ಲಿ ಸಿಕ್ಕಿಬಿದ್ದಿರುವ ಶ್ರದ್ಧಾಳುಗಳು ಸಹಾಯವನ್ನು ಯಾಚಿಸುವು ದಕ್ಕಾಗಿ ಮತ್ತು ತಾವಿರುವ ಸ್ಥಳದ ಕುರಿತು ಮಾಹಿತಿ ದಾಟಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ.
ಜನರು ಕೈಮುಗಿದು ಸಹಾಯಕ್ಕಾಗಿ ಮೊರೆಯಿಡುತ್ತಿರುವ ವಿಡಿಯೋಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗ್ಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ ಮತ್ತು ನೂರಾರು ಮಂದಿ ಶೇರ್ ಮಾಡುತ್ತಿದ್ದಾರೆ. ತಮ್ಮ ಪ್ರೀತಿಪಾತ್ರರು ಸಿಲುಕಿಹಾಕಿಕೊಂಡಿರುವ ವಿವಿಧ ಪ್ರದೇಶಗಳ ಕುರಿತು ಆತಂಕಿತ ಜನರು ಗೂಗಲ್ ಮ್ಯಾಪ್ ಬಳಸಿ ಲೊಕೇಶನ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.
ಅನೇಕ ಪ್ರಾದೇಶಿಕ ಚಾನೆಲ್‌ಗಳು ಸಂಕಷ್ಟದಲ್ಲಿರುವವರು ತಮ್ಮನ್ನು ಸಂಪರ್ಕಿಸುವುದಕ್ಕಾಗಿ ಮತ್ತು ಅವರು ಇರುವ ಸ್ಥಳದ ಕುರಿತು ವಿವರಗಳನ್ನು ಹಂಚಿಕೊಳ್ಳುವುದಕ್ಕಾಗಿ ನ್ಯೂಸ್ ಬುಲೆಟಿನ್‌ಗಳ ಮೂಲಕ ತಮ್ಮ ನಂಬರ್‌ಗಳನ್ನು ಪ್ರಕಟಿಸಿವೆ. ಬಹುತೇಕ ನೀರಲ್ಲಿ ಮುಳುಗಿರುವ ಪತ್ತನಂತಿಟ್ಟದಲ್ಲಿ ವಿದ್ಯಾರ್ಥಿಗಳು ಹಾಗೂ ಚರ್ಚ್‌ಗಳಲ್ಲಿ ಸಿಕ್ಕಿಬಿದ್ದಿರುವ ಜನರು ಸಾಮಾಜಿಕ ಮಾಧ್ಯಮ ಮೂಲಕ ಸಹಾಯ ಯಾಚಿಸುತ್ತಿದ್ದಾರೆ.
25 ರೈಲುಗಳ ಯಾನ ರದ್ದು
ರಾಜ್ಯದಲ್ಲಿ ಸಂಭವಿಸಿರುವ ಅಭೂತಪೂರ್ವ ನೆರೆ ಹಾಗೂ ಭೂಕುಸಿತಗಳ ಹಿನ್ನೆಲೆಯಲ್ಲಿ ಗುರುವಾರ 25ಕ್ಕೂ ಅಧಿಕ ಟ್ರೈನ್‌ಗಳನ್ನು ರದ್ದುಗೊಳಿಸಲಾಯಿತು ಇಲ್ಲವೇ ಸಮಯವನ್ನು ಮರುನಿಗದಿಗೊಳಿಸಲಾಯಿತು. ರದ್ದುಗೊಳಿಸಲಾದ ದೂರ ಪ್ರಯಾಣದ ಟ್ರೈನ್‌ಗಳಲ್ಲಿ ಟ್ರೈನ್ ಸಂಖ್ಯೆ 12202 ಕೊಚ್ಚುವೇಲಿ ಲೋಕಮಾನ್ಯ ತಿಲಕ್ ಟರ್ಮಿನಸ್(ಗರೀಬ್ ರಥ್ ಎಕ್ಸ್‌ಪ್ರೆಸ್)ಮತ್ತು ಟ್ರೈನ್ ಸಂಖ್ಯೆ 12617 ಎರ್ನಾಕುಳಂ ಹಜ್ರತ್ ನಿಜಾಮುದ್ದೀನ್ (ಮಂಗಳಾ ಲಕ್ಷದ್ವೀಪ ಎಸ್‌ಎಫ್ ಎಕ್ಸ್‌ಪ್ರೆಸ್) ಸೇರಿವೆ. ರೈಲ್ವೇ ಅಧಿಕಾರಿಗಳು ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಹದಿಂದ ರೈಲು ಹಳಿ, ಸೇತುವೆ ಮತ್ತು ಕಟ್ಟಡಗಳ ಮೇಲಾಗುತ್ತಿರುವ ಪರಿಣಾಮಗಳನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಟ್ರೈನ್‌ಗಳನ್ನು ತಾಸಿಗೆ 10 ಕಿ.ಮೀ.ಗಳಿಂದ 45 ಕಿ.ಮೀ.ಗಳ ತನಕ ಸೀಮಿತ ವೇಗದಲ್ಲಿ ಓಡಿಸಲಾಗುತ್ತಿದೆ ಎಂದು ಪ್ರಕಟನೆಯೊಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.