ಮಿನಿ ಒಲಿಂಪಿಕ್ಸ್: ಜಕಾರ್ತಾ ಸರ್ವಾಂಗ ಸುಂದರ
Team Udayavani, Aug 18, 2018, 6:00 AM IST
ಮಿನಿ ಒಲಿಂಪಿಕ್ಸ್ ಎಂದೇ ಖ್ಯಾತಿ ಪಡೆದಿರುವ 18ನೇ ಏಶ್ಯನ್ ಗೇಮ್ಸ್‌ಗೆ ಶನಿವಾರ ಜಕಾರ್ತಾ ಹಾಗೂ ಪಾಲೆಂಬಾಂಗ್‌ನ ಬಾಗಿಲು ತೆರೆಯಲಿದೆ. ಮೇ ತಿಂಗಳಲ್ಲಿ ಭಯೋತ್ಪಾದಕ ಕೃತ್ಯದಿಂದ ಹಾಗೂ ಕಳೆದ ವಾರ ಭೂಕಂಪದಿಂದ ನಲುಗಿದ್ದ ದ್ವೀಪರಾಷ್ಟ್ರ ಇಂಡೋನೇಶ್ಯದಲ್ಲಿ ಈಗ ಹಬ್ಬದ
ವಾತಾವರಣ. ಅರ್ಧ ಶತಮಾನದ ಬಳಿಕ ಜಕಾರ್ತಾ ಏಶ್ಯನ್ ಗೇಮ್ಸ್ ಆತಿಥ್ಯ ವಹಿ ಸು ತ್ತಿದೆ. 1962ರಲ್ಲಿ ಇಲ್ಲಿ ಏಶ್ಯನ್ ಗೇಮ್ಸ್ ಆಯೋಜನೆಯಾಗಿತ್ತು.
ಕೆಂಪು ಟೀ ಶರ್ಟ್ ಧರಿಸಿದ್ದ ವಿದ್ಯಾರ್ಥಿ ಸ್ವಯಂಸೇವಕರು ಕ್ರೀಡಾಪಟುಗಳನ್ನು, ಅಧಿಕಾರಿಗಳನ್ನು ಹಾಗೂ ಕ್ರೀಡಾಭಿಮಾನಿಗಳನ್ನು ಇಲ್ಲಿನ “ಸೊಯಿ ಕರ್ನೋ ಹಟ್ಟಾ’ ವಿಮಾನ ನಿಲ್ದಾಣದಲ್ಲಿ ನಗುಮೊಗದಿಂದ ಸ್ವಾಗತಿಸುತ್ತಿದ್ದಾರೆ. ಅವರಿಗೆ ಎಲ್ಲ ಬಗೆಯ ನೆರವು ನೀಡಿ, ಭದ್ರತಾ ತಪಾಸಣೆಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದ್ದಾರೆ. ಭಾಷಾ ಸಮಸ್ಯೆ ಎದುರಾದಲ್ಲಿ ಮುಗುಳ್ನಗು ಹಾಗೂ ಬಾಗಿ ನಮಸ್ಕಾರ ಮಾಡುವ ವಿನಯವೇ ಸಾಕಾಗುತ್ತಿದೆ.
ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಪಾಕಿಸ್ಥಾನದ ಪ್ರಧಾನಿ ಮಹಮ್ಮ ದಾಲಿ ಜಿನ್ನಾ ಅವರ ಆಳೆತ್ತರದ ಕಟೌಟ್ ಗಳನ್ನು ನಿಲ್ಲಿಸಿ ಏಶ್ಯನ್ ಗೇಮ್ಸ್‌ನ ರೂವಾರಿಗಳನ್ನು ನೆನಪಿಸಿಕೊಳ್ಳಲಾಗಿದೆ. “ಏಶ್ಯದ ಶಕ್ತಿ’ ಎಂಬ ಧ್ಯೇಯ ವಾಕ್ಯದಲ್ಲಿ ಇಂಡೋನೇಶ್ಯ ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತಿದೆ ಎಂದು ಸ್ವಯಂಸೇವಕರೊಬ್ಬರು ವಿವರಿಸಿದ್ದು ಅರ್ಥ ಪೂರ್ಣವಾಗಿತ್ತು. ಉಪ ಖಂಡದ ದೇಶಗಳ ನಡುವೆ ಸ್ನೇಹ ಹಾಗೂ ಸಂಬಂಧವನ್ನು ವೃದ್ಧಿಸಿಕೊಳ್ಳಲು ಈ ಕ್ರೀಡಾಕೂಟ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ.
2ನೇ ದೊಡ್ಡ ಕ್ರೀಡಾಕೂಟ
ಒಲಿಂಪಿಕ್ಸ್ ಹೊರತು ಪಡಿಸಿದರೆ 2ನೇ ಅತೀ ದೊಡ್ಡ ಕ್ರೀಡಾಕೂಟವಾಗಿರುವ ಏಶ್ಯನ್ ಗೇಮ್ಸ್‌ನ 18ನೇ ಆವೃತ್ತಿಗೆ ಜಕಾರ್ತಾ ಸರ್ವಾಂಗ ಸುಂದರವಾಗಿ ಸಿದ್ಧಗೊಂಡಿದೆ. ಕ್ರೀಡಾ ಗ್ರಾಮ 9,000ಕ್ಕೂ ಹೆಚ್ಚು ಕ್ರೀಡಾಪಗಳಿಗೆ ಮುಂದಿನ 15 ದಿನಗಳ ಕಾಲ ಆಡುಂಬೊಲವಾಗಲಿದೆ. ಸ್ಥಳೀಯ ಪತ್ರಿಕೆಗಳು ಸಿದ್ಧತೆ ಪೂರ್ಣಗೊಂಡಿರುವ ಬಗ್ಗೆ ಇನ್ನೂ ಅನುಮಾನ ವ್ಯಕ್ತಪಡಿಸುತ್ತಿವೆ. ಆರ್ಥಿಕ ಸಂಕಷ್ಟದ ಕಾರಣಕ್ಕೆ ಹನೋಯಿ ಕ್ರಿಡಾಕೂಟ ಆಯೋಜನೆಯಿಂದ ಹಿಂದೆ ಸರಿದ ಮೇಲೆ ಜಕಾರ್ತಾ ಆತಿಥ್ಯ ವಹಿಸಲು ಒಪ್ಪಿಕೊಂಡಿತು. ಒಂದು ತಿಂಗಳಿಗಿಂತಲೂ ಕಡಿಮೆ ಕಾಲಾವಕಾಶದಲ್ಲಿ ಇಲ್ಲಿನ ಕ್ರೀಡಾ ಗ್ರಾಮ ಸಜ್ಜಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.