ಜೋಡುಪಾಲ: ಗುಡ್ಡ ಜರಿದು ವ್ಯಕ್ತಿ ಸಾವು, ಹಲವರು ನಾಪತ್ತೆ
Team Udayavani, Aug 18, 2018, 12:20 PM IST
ಸಂಪಾಜೆ : ಸಂಪಾಜೆ – ಮಡಿಕೇರಿ ಮಧ್ಯದ ಜೋಡುಪಾಲದಲ್ಲಿ ಗುಡ್ಡ ಜರಿದು ಮೂರು ಮನೆಗಳು ನಾಶವಾಗಿವೆ. ಹಲವರು ಮಣ್ಣಿನಡಿ ಸಿಲುಕಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಮಹಿಳೆ ಹಾಗೂ 4 ಮಕ್ಕಳು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗುರುವಾರವೇ ಗುಡ್ಡ ಜರಿಯಲು ಆರಂಭವಾಗಿದ್ದು, ಕೆಲವರನ್ನು ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಪೂರ್ವಾಹ್ನ ಗುಡ್ಡ ಜರಿದು, ಮೂರು ಮನೆ ಗಳೂ ಕುಸಿ ದಿವೆ. ಮಣ್ಣಿ ನಡಿ ಬಸಪ್ಪ ಅವರ ಮೃತ ದೇಹ ಪತ್ತೆಯಾಗಿದೆ. ಅವರ ಪತ್ನಿ, ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ.
2ನೇ ಮೆಣ್ಣಂಗೇರಿ ಮತ್ತು ಜೋಡುಪಾಲ ಪರಿಸರದ 600 ಜನರನ್ನು ಸ್ಥಳಾಂತರಿಸಲಾಗಿದೆ. ಜೋಡುಪಾಲ ಶಾಲೆಯಲ್ಲಿ 100 ಜನ ಆಶ್ರಯ ಪಡೆದಿದ್ದಾರೆ. ಹಗ್ಗದ ಸಹಾಯದಿಂದ 60 ಜನರನ್ನು ಕರೆತರಲಾಗಿದೆ. ಇನ್ನೂ 100ಕ್ಕೂ ಅಧಿಕ ಜನರ ರಕ್ಷಣೆಗೆ ಮಳೆ ಹಾಗೂ ಪ್ರವಾಹದ ನೀರು ಅಡ್ಡಿಯಾಗಿದೆ. ಈ ಪ್ರದೇಶ ಮಡಿಕೇರಿ ತಾಲೂಕಿಗೆ ಒಳಪಟ್ಟಿದ್ದರೂ ಅಲ್ಲಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ. ರಸ್ತೆ ಯಲ್ಲಿ ರಭಸದಿಂದ ನೀರು ಹರಿದು ಬರುತ್ತಿದ್ದು, 3 ಕಿ.ಮೀ. ದೂರಕ್ಕೆ ಸಂಚಾರ ಸಾಧ್ಯವಾಗುತ್ತಿಲ್ಲ. ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಎಸ್.ಐ. ಮಂಜುನಾಥ್ ಹಾಗೂ ಇತರರು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.