ದಿಂಬು: ಆಕರ್ಷಕ, ಹಿತಕರವಾಗಿರಲಿ

Team Udayavani, Aug 18, 2018, 2:37 PM IST

18-agust-13.jpg

ಮನೆಯ ಒಳಗಿನ ಆಕರ್ಷಣೆ ಹೆಚ್ಚಿಸುವಲ್ಲಿ ದಿಂಬುಗಳು ಕೂಡ ಪ್ರಮುಖ ಸ್ಥಾನ ವಹಿಸುತ್ತವೆ. ವಿವಿಧ ವಿನ್ಯಾಸ, ಗಾತ್ರ, ಆಕಾರದ ಸುಂದರವಾದ ದಿಂಬುಗಳನ್ನು ಕುರ್ಚಿ, ಸೋಫಾ, ಮಂಚಗಳಲ್ಲಿ ಆಕರ್ಷಣೀಯವಾಗಿ ಜೋಡಿ ಸಿಡುವ ಮೂಲಕ ಮನೆಯ ಒಳಾಂಗಣದ ಸೌಂದರ್ಯ ವೃದ್ಧಿಸಬಹುದು.

ದಿಂಬುಗಳಿಗೆ ಹೂವು , ಪ್ರಕೃತಿಯ ಚಿತ್ರಗಳಿರುವ ಕವರ್‌ ಗಳನ್ನು ಹಾಕುವುದು ಅವುಗಳಿಗೆ ಇನ್ನಷ್ಟು ಮೆರಗು ನೀಡುತ್ತವೆ. ಕಸೂತಿ ಕಲೆಗಳ ಮೂಲಕ ನೂಲುಗಳಿಂದ ವಿವಿಧ ಬಣ್ಣ, ಆಕಾರದ ಹೂವು, ಬಳ್ಳಿ, ಚಿಟ್ಟೆ ಇತ್ಯಾದಿಗಳನ್ನು ದಿಂಬುಗಳಿಗೆ ಅಳವಡಿಸುವುದರಿಂದ ಅವುಗಳ ಅಂದ ಶ್ರೀಮಂತಗೊಳ್ಳುತ್ತದೆ. ಮನೆಯ ಗೋಡೆಗಳ ಬಣ್ಣಗಳಿಗೆ ಮ್ಯಾಚ್‌ ಆಗುವ ಕಲರ್‌ನ ದಿಂಬುಗಳನ್ನು ಬಳಸುವುದು ನೋಡಲು ಡಿಫ್ರೆಂಟ್‌ ಆಗಿರುತ್ತವೆ.

ಹತ್ತಿ, ಉಣ್ಣೆ ಅಥವಾ ವೆಲ್ವೆಟ್‌ ಬಟ್ಟೆಗಳಿಂದ ತಯಾರಿಸಿದ ದಿಂಬುಗಳು ಆಕರ್ಷಕವಾಗಿರುವ ಜತೆಗೆ ಬಳಕೆಗೂ ಹಿತಕರವಾಗಿದ್ದು, ಮೃದು, ಕೋಮಲವಾದ ಅನುಭವ ನೀಡುತ್ತವೆ. ಬೆಡ್‌ ರೂಮ್‌ನ ಕಾಟ್‌ ಗಳಿಗೆ ಆಯತಾಕಾರದ ದಿಂಬುಗಳು ಸರಿ ಹೊಂದುವುದಾದರೆ, ಸೋಫಾಗಳಿಗೆ ಬಳಸಲು ರೌಂಡ್‌, ಮದ್ದಳೆಯಾಕಾರದ, ಹಾರ್ಟ್‌ ಚಿಹ್ನೆಯ ವಿನ್ಯಾಸದ ದಿಂಬುಗಳು ಸೂಕ್ತ. ಆದರೆ ಕುರ್ಚಿಗಳಿಗೆ ಅವುಗಳ ಗಾತ್ರಕ್ಕೆ ಸರಿ ಹೊಂದುವ ವಿನ್ಯಾಸದಲ್ಲಿ ದಿಂಬು ತಯಾರಿಸಿ ಬಳಸಬೇಕಾಗುತ್ತದೆ. ಕೇವಲ ಅಲಂಕಾರಕ್ಕಾಗಿ ಇಡುವ ದಿಂಬುಗಳಿಗೆ ಇಂತಹದ್ದೇ ಆಕಾರ ಬಳಸಬೇಕೆಂಬ ಕಟ್ಟು ಪಾಡುಗಳಿಲ್ಲ. ನಮಗಿಷ್ಟ ಬಂದ ಆಕಾರ, ಗಾತ್ರಗಳಲ್ಲಿ ತಯಾರಿಸಬಹುದು.

ಮಲಗಲು ಅಥವಾ ಕುಳಿತುಕೊಳ್ಳಲು ಬಳಸುವ ದಿಂಬುಗಳು ಮಾತ್ರ ಮೃದು, ಹಿತಕರ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ವ್ಯತಿರಿಕ್ತ ಪರಿಣಾಮ ಬೀರದಂತಿರಬೇಕು. ಕುತ್ತಿಗೆ, ತಲೆ ಹಾಗೂ ಬೆನ್ನಿನ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಅಥವಾ ಕಿರಿಕಿರಿಗೆ ನಾವು ಮಲಗುವ ಅಸಮರ್ಪಕ ಭಂಗಿಯೂ ಪ್ರಮುಖ ಕಾರಣಗಳಾಗಿರುತ್ತವೆ. ಸರಿಯಾದ, ಆರಾಮದಾಯಕವಾದ ದಿಂಬುಗಳ ಬಳಕೆಯಿಂದ ಸುಲಭವಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ವಿಶೇಷ ದಿಂಬುಗಳು
ತಲೆ ನೋವು, ನರಗಳ ಸೆಳೆತ, ಬಿಗಿತ, ಬೆನ್ನು, ಕುತ್ತಿಗೆಯ ಗಾಯಗಳು ಅಥವಾ ಇತರ ಆಘಾತಗಳ ನೋವನ್ನು ಶಮನ ಮಾಡಲು ಐಸ್‌ಪ್ಯಾಕೇಟ್‌ಗಳನ್ನಿಟ್ಟು ವಿಶೇಷವಾಗಿ ದಿಂಬುಗಳನ್ನು ತಯಾರಿಸಲಾಗುತ್ತದೆ. ನಿದ್ದೆ ನಮ್ಮ ದೇಹದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಸರಿಯಾಗಿ ನಿದ್ದೆ ಮಾಡಲು ಆರಾಮದಾಯಕ ದಿಂಬುಗಳನ್ನು ಬಳಸುವುದು ಸೂಕ್ತ. ಹತ್ತಿ, ಬಟ್ಟೆಯ ಚೂರು, ಕುಶನ್‌, ಸ್ಪಂಜ್‌, ಗಾಳಿ, ನೀರು ಇತ್ಯಾದಿಗಳನ್ನು ಕವರ್‌ ನೊಳಗಡೆ ತುಂಬಿಸಿ ದಿಂಬುಗಳನ್ನು ತಯಾರಿಸಲಾಗುತ್ತದೆ.

 ಜಿಕೆ

ಟಾಪ್ ನ್ಯೂಸ್

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ

Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ

Kiran-rejiu

Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್‌ ರಿಜಿಜು

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

SERBIA

Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

2

Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್‌ ಮೂಲಕ ನಕ್ಸಲ್‌ ಸೋಮನ್‌ ವಿಚಾರಣೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ

Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ

Kiran-rejiu

Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್‌ ರಿಜಿಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.