ಚೀನ ಅರ್ವಾಚೀನ


Team Udayavani, Aug 19, 2018, 6:00 AM IST

z-3.jpg

ಸಾಮಾನ್ಯವಾಗಿ ಚೀನಾ ಎಂದರೆ ಮೊದಲು ನಮ್ಮ ಮನಸ್ಸಿಗೆ ಬರುವುದು ಆ ದೇಶದ ಅಗ್ಗದ ಉತ್ಪಾದನೆಗಳು. ಹಾಗೂ ಅದರ ರಾಜಕೀಯ ಚಾಲಾಕು. ನಮ್ಮ ಅರುಣಾಚಲ ಪ್ರದೇಶದಲ್ಲಿ ಈ ಚೀನಾ ಆಗಾಗ ಗುಟುರು ಹಾಕುತ್ತ ಕ್ಯಾತೆ ತೆಗೆಯುವ ಸುದ್ದಿಯನ್ನು ನಮ್ಮ ಮಾಧ್ಯಮಗಳಲ್ಲಿ ಕೇಳುತ್ತಿರುತ್ತೇವೆ. ಇಂತಹ ದೇಶದಲ್ಲಿ ನಮಗೆ ನೋಡಲು ಏನಿರಬಹುದಪ್ಪಾ ಎನಿಸಿತ್ತು. ಆದರೆ ನಮ್ಮ “ವೈಶಾಲಿ’ ಟ್ರಾವೆಲ್ಸ್‌ನೊಂದಿಗೆ ಚೀನಾದರ್ಶನ ಮಾಡಿದಾಗಲಷ್ಟೇ ಇದರ ಗುಣವಿಶೇಷ ನಮಗೆ ಅರಿವಾದದ್ದು. ದೇಶದ ಕಾನೂನು ಉಲ್ಲಂಘನೆ ಇಲ್ಲವೇ ಇಲ್ಲ. ಇಲ್ಲಿನ ಜನ ಯಾರ ಸುದ್ದಿಗೂ ಹೋಗದೆ ತಮ್ಮಷ್ಟಕ್ಕೆ ತಾವು ಖುಷಿಯಾಗಿರುತ್ತಾರೆ. ನಮ್ಮಲ್ಲಿ ಈಗ ಸದ್ದು ಮಾಡುತ್ತಿರುವ ಸ್ಮಾರ್ಟ್‌ಸಿಟಿ ಎಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಬೇಕೆಂದರೆ ಈ ಚೀನಾದ ಶಾಂಘಾ ಹಾಗೂ ಬೀಜಿಂಗ್‌ ನಗರಗಳನ್ನು ನೋಡಬೇಕು. ನಗರಗಳ ಉದ್ದಕ್ಕೂ ಸ್ವತ್ಛ ಸುಂದರ ಪರಿಸರ, ಇಪ್ಪತ್ತೂಂದು ಜನರ ನಮ್ಮ “ವೈಶಾಲಿ’ ತಂಡ ಹವಾನಿಯಂತ್ರಿತ ಬಸ್ಸಿನಲ್ಲಿ ಬೀಜಿಂಗಿನ ಹನ್ನೆರಡು ಲೇನುಗಳ ವಿಶಾಲ ರಸ್ತೆಯಲ್ಲಿ ಸಾಗುತ್ತಿದ್ದಾಗ ಇಕ್ಕೆಲಗಳಲ್ಲಿ ಮುಗಿಲೆತ್ತರದ ಕಟ್ಟಡದ ಜೊತೆ ಜೊತೆಗೇ ಗಿಡಮರಗಳ ಸಾಲು. ಇದು ಕಾಂಕ್ರೀಟು ಕಾಡಲ್ಲ. ಕಾಂಕ್ರೀಟು ಕಟ್ಟಡಗಳಂತೆ ನಿಸರ್ಗ ಸೌಂದರ್ಯವನ್ನೂ ಅಷ್ಟೇ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ರಸ್ತೆಗಳ ಅಂತರದ ಡಿವೈಡರ್‌ನಲ್ಲಿ ಬಣ್ಣ ಬಣ್ಣದ ಸುಂದರ ಗುಲಾಬಿ ಗಿಡಗಳು. ಇವುಗಳ ಬುಡದಲ್ಲಿ ಮಣ್ಣೇ ಕಾಣದಂತೆ ರತ್ನಗಂಬಳಿ ಹಾಸಿದಂತಿರುವ ವಿವಿಧ ಪುಷ್ಪರಾಜಿ. ವರ್ಣ ವೈವಿಧ್ಯ ಹಾಗೂ ಗಾತ್ರದಲ್ಲಿ ಈ ಹೂಗಳೆಲ್ಲ ಒಂದಕ್ಕೊಂದು ಪೈಪೋಟಿ ಮಾಡುವಂತಿದ್ದವು. ಯಾರೂ ಇಲ್ಲಿ ಈ ಹೂಗಳನ್ನು ಮುಟ್ಟುವುದಿಲ್ಲ.

ಸೈಕಲ್‌ ಸವಾರರ ದೇಶ
ಇಲ್ಲಿ ಕಾರನ್ನು ಬಿಟ್ಟರೆ ಹೆಚ್ಚಿನವರು ಸೈಕಲ್‌ ಉಪಯೋಗಿಸುತ್ತಾರೆ. ಇವರಿಗೆ ಸರಕಾರದಿಂದಲೇ ಸೈಕಲ್‌ ಬಾಡಿಗೆಗೆ ಸಿಗುತ್ತದೆ. ಮಾರ್ಗದ ಬದಿಯಲ್ಲಿ ಅಲ್ಲಲ್ಲಿ ಸೈಕಲ್‌ ಸ್ಟಾಂಡ್‌ ಕಾಣುತ್ತದೆ. ಸೈಕಲ್‌ ಹೋಗಲೆಂದೇ ಒಂದು ರಸ್ತೆ ಮೀಸಲಾಗಿರಿಸಿದೆ. ಇದರಿಂದಾಗಿ ಪರಿಸರ ಮಾಲಿನ್ಯವೂ ಇಲ್ಲ. ಇಂಧನ ಉಳಿತಾಯ. ನಮ್ಮಲ್ಲಿ  ಅತಿ ಹೆಚ್ಚು ಆರ್ಭಟ ಮಾಡುವ ಬೈಕ್‌, ಸ್ಕೂಟರ್‌ಗಳು ಇಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಲಾರಿ-ಟ್ರಕ್‌ಗಳೂ ಇಲ್ಲಿ ಕಾಣುವುದಿಲ್ಲ. ಇನ್ನು ರಸ್ತೆಯ ಸ್ವತ್ಛತೆಯ ಬಗ್ಗೆ ಹೇಳಬೇಕೆಂದರೆ ಎಷ್ಟು ದೂರ ಸಾಗಿದರೂ ಒಂದೇ ಒಂದು ಕಾಗದದ ತುಂಡೂ ಕಾಣಸಿಗುವುದಿಲ್ಲ. ಸಾಲದೆಂಬಂತೆ ಟ್ರಕ್‌ನಂತಹ ಯಂತ್ರದಲ್ಲಿ ರಸ್ತೆಯನ್ನು ತೊಳೆಯುತ್ತಾರೆ. ಇಂತಹ ಅತಿ ಸ್ವತ್ಛತೆ, ಶಿಸ್ತಾಗಿ ಪ್ರಕೃತಿ ಸೌಂದರ್ಯವನ್ನು ಕಾಪಾಡಿಕೊಳ್ಳುವ ಈ ಚೀನಾದೇಶ ಈ ವಿಷಯದಲ್ಲಿ ನನಗಿಷ್ಟವಾಯಿತು.

ಮೊದಲು ಶಾಂಘಾçಗೆ ಬಂದಿಳಿದ ನಾವು ಅಲ್ಲಿನ ವಸ್ತು ಸಂಗ್ರಹಾಲಯಕ್ಕೆ ಭೇಟಿ ಇತ್ತೆವು. ಪ್ರಾಚೀನ ಚೀನದ ನಾಗರಿಕತೆಯನ್ನು ಬಿಂಬಿಸುವ ಈ ವಸ್ತು ಸಂಗ್ರಹಾಲಯದಲ್ಲಿ ಆ ಕಾಲದ ವಸ್ತುಗಳು, ಆಗಿನ ರಾಜರು, ಸೈನಿಕರು, ಸಾಮಾನ್ಯ ಹಳ್ಳಿಯ ಜನರು, ಅವರು ತೊಡುತ್ತಿದ್ದ ದಿರಿಸುಗಳಲ್ಲಿಯೇ ಇರುವ ಪ್ರತಿಕೃತಿಗಳು, ಮನೆ, ಗುಡಿಸಲುಗಳ ಮಾದರಿಯನ್ನೆಲ್ಲ ನೋಡುತ್ತ ಹೋದಂತೆ ನಾವೇ ಶತಮಾನಗಳಷ್ಟು ಹಳೆಯ ಕಾಲದ ನಗರದ ಹಳ್ಳಿಯ ಪೇಟೆ, ಓಣಿಗಳಲ್ಲಿ ಓಡಾಡುತ್ತಿದ್ದೇವೇನೋ ಎಂದು ಭ್ರಮಿಸುವಂತಾಯಿತು. ಪಿಂಗಾಣಿ ಪಾತ್ರೆಗಳು, ವಸ್ತುಗಳು ಜೊತೆಗೆ ಸುಂದರವಾದ ಕುಸುರಿ ಕೆತ್ತನೆ ಕೆಲಸ ಮಾಡಿದ ಅನೇಕ ಕಂಚಿನ ವಸ್ತುಗಳನ್ನು ನಾವಿಲ್ಲಿ ನೋಡಿದೆವು.

ಚೀನಾದವರಿಗೆ ಜೇಡ್‌ (ಮರಕತ) ಮೇಲೆ ಬಹಳ ವ್ಯಾಮೋಹವಿದೆ. ತುಂಬ ಬೆಲೆಬಾಳುವ ಈ ರತ್ನಕಲ್ಲಿನ ಪೀಠೊಪಕರಣಗಳು, ವಿಗ್ರಹಗಳು, ಆಭರಣಗಳು ಮೊದಲೆಲ್ಲ ಇಲ್ಲಿನ ಅರಮನೆಯಲ್ಲಿ ಮಾತ್ರ ಬಳಕೆಯಾಗುತ್ತಿತ್ತು. ಆದರೆ ಈಗ ಯಾರು ಬೇಕಾದರೂ ಈ ಮರಕತದ ಆಭರಣ, ವಸ್ತುಗಳನ್ನು ಖರೀದಿಸಬಹುದು. ನಮ್ಮ ಬಂಗಾರದ್ದೇ ಬೆಲೆ ಇದಕ್ಕೆ. ಚೀನಾದವರ ಪ್ರಕಾರ ಈ “ಜೇಡ್‌’ ಎಂಬ ಕಲ್ಲು ಸಂಪತ್ತು ಹಾಗೂ ಶಕ್ತಿಯ ದ್ಯೋತಕವಂತೆ.

ಚೀನಾದ ರೇಶ್ಮೆ ಜಗತ್ಪ್ರಸಿದ್ಧ. ನಮ್ಮಲ್ಲಿಯೂ ಚೈನಾಸಿಲ್ಕ್ ಸೀರೆಗಳು ಒಂದು ಕಾಲದಲ್ಲಿ ಹೆಂಗಳೆಯರ ಮನಗೆದ್ದಿದ್ದುಂಟು. ಇಲ್ಲಿನ ಒಂದು ಚೀನಾ ರೇಷ್ಮೆ ಫ್ಯಾಕ್ಟರಿಗೆ ಹೋದಾಗ ಅಲ್ಲಿ ರೇಶ್ಮೆ ಹುಳ ಎಲೆ ತಿಂದು ಬೆಳೆದು ಮೊಟ್ಟೆ ಇಡುವ ತನಕದ ಸರಣಿ ಬೆಳವಣಿಗೆಯ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ನಂತರ ರೇಶ್ಮೆ ಬಟ್ಟೆಗಳ ಮಳಿಗೆಗೆ ಪ್ರವೇಶ. ಅಲ್ಲಿ ಸುಂದರ ಆಕರ್ಷìಕ ರೇಶ್ಮೆಯ ದುಕೂಲಗಳು, ಹಾಸಿಗೆ ಹಾಸುಗಳು, ದಿಂಬಿನ ಕವರುಗಳು, ಕುರ್ತಾ, ಟಾಪ್‌, ಸ್ಕಾರ್ಪ್‌ಗಳೆಲ್ಲ ಇವೆ. ಆದರೆ ಸೀರೆ ಮಾತ್ರ ಇಲ್ಲ.

ಇಲ್ಲಿನ ಹ್ವಾಂಗ್‌ಪೂ ನದಿಯಲ್ಲಿ ನಮಗೊಂದು ನೌಕಾವಿಹಾರ ಮಾಡಿಸಿದರು. ಈ ವಿಹಾರದುದ್ದಕ್ಕೂ ನದಿಯಂಚಿನಲ್ಲಿರುವ ಅತ್ಯಂತ ಎತ್ತರದ ಕಟ್ಟಡಗಳ ವೈವಿಧ್ಯಮಯ ವಿನ್ಯಾಸವನ್ನು ಅದಕ್ಕೆ ಅಳವಡಿಸಿದ ಲೇಸರ್‌ ಬೆಳಕಿನ ತಂತ್ರಜ್ಞಾನವನ್ನು ನೋಡುವುದೇ ಒಂದು ಅದ್ಭುತ ಅನುಭವ. ಜಲವಿಹಾರಕ್ಕೇ ಬಳಸುವ ದೋಣಿಗಳ ವಿನ್ಯಾಸವೂ ವಿಭಿನ್ನವಾಗಿದೆ. ಒಟ್ಟಾರೆ ಈ ಜಲಯಾನ ಚೇತೋಹಾರಿಯಾಗಿತ್ತು. ಶಾಂಘಾçನಿಂದ ಬೀಜಿಂಗಿಗೆ ನಮ್ಮ ಬುಲೆಟ್‌ ರೈಲಿನ ಪಯಣವೂ ಅಪ್ಯಾಯಮಾನವಾಗಿತ್ತು.

ಹಕ್ಕಿಯ ಗೂಡಿನಾಕಾರದ ಕ್ರೀಡಾಂಗಣ
ಬೀಜಿಂಗಿನಲ್ಲಿ ಮೊದಲು ನೋಡಿದ್ದು “ಬರ್ಡ್ಸ್‌ ನೆಸ್ಟ್‌’ ಎಂಬ ಒಲಿಂಪಿಕ್‌ ಕ್ರೀಡಾಂಗಣ. ಹಕ್ಕಿಯ ಗೂಡಿನಾಕಾರದಲ್ಲಿ ಆಕರ್ಷಕವಾಗಿರುವ ಈ ಕ್ರೀಡಾಂಗಣ ಇತ್ತೀಚೆಗೆ 2009ರಲ್ಲಿ ನಿರ್ಮಾಣವಾಗಿದ್ದು. ಅಲ್ಲಿಂದ ಬೀಜಿಂಗಿನ ಕೇಂದ್ರ ಭಾಗದಲ್ಲಿರುವ “ಟಿಯಾನ್‌ಮೆನ್‌ ಚೌಕ’ ಎಂಬ ಪ್ರದೇಶಕ್ಕೆ ಹೋದೆವು. ಇದೊಂದು ದುರಂತ ಕತೆಯ ಸಾಕ್ಷಿಯಾಗಿ ಇಲ್ಲಿದೆ. 1989ರಲ್ಲಿ ಆಡಳಿತದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳೆಲ್ಲ  ಸಾಲಾಗಿ ಈ ಚೌಕದಲ್ಲಿ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲೆ ಬುಲ್‌ಡೋಜರ್‌ ಹರಿಸಿ ಸಾವಿರಾರು ವಿದ್ಯಾರ್ಥಿಗಳ ಮಾರಣ ಹೋಮಗೈದ ಕಪ್ಪು ಇತಿಹಾಸ ಈ ಸ್ಥಳಕ್ಕಿದೆ. ಇಲ್ಲಿ ಈಗ ಮಿಂಗ್‌ ಹಾಗೂ ಕ್ವಿಂಗ್‌ ರಾಜಮನೆತನದ ಕೆಲವು ಪ್ರಮುಖ ವ್ಯಕ್ತಿಗಳ ಗೋರಿಯಿದೆ.

ಇಲ್ಲಿಂದ ಫಾರ್‌ಬಿಡನ್‌ ಸಿಟಿಗೆ ಹೋಗಬಹುದು. ಚೀನಾದ ಪ್ರಾಚೀನ ರಾಜಮನೆತನದವರ ಖಾಸಗಿ ಆಸ್ತಿಯಾದ ಈ ಫಾರ್‌ಬಿಡನ್‌ ಸಿಟಿ ಸುಮಾರು 72 ಹೆಕ್ಟೇರ್‌ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಇಲ್ಲಿ ಕಲ್ಲಿನಿಂದಲೇ ನಿರ್ಮಾಣವಾದ ಸುಮಾರು ನೂರಕ್ಕೂ ಹೆಚ್ಚು ಅರಮನೆಗಳಿವೆ. ಇದಲ್ಲದೆ ಇನ್ನೂ ಸಾವಿರಾರು ಕಟ್ಟಡಗಳಿವೆ.  ರಾಜಮನೆತನದವರಲ್ಲದೆ ಸಾಮಾನ್ಯರಿಗೆ ಇಲ್ಲಿ ಒಳಪ್ರವೇಶವೇ ಇರಲಿಲ್ಲ. ಹಾಗಾಗಿಯೇ ಇದನ್ನು ಫಾರ್‌ಬಿಡನ್‌ ಸಿಟಿ ಎನ್ನಲಾಯಿತು. ಜಾಗತಿಕ ಪಾರಂಪರಿಕ ತಾಣ ಎಂದು ಗುರುತಿಸಲ್ಪಟ್ಟ ಈ ಸಿಟಿ ಈಗ ಎಲ್ಲರಿಗೂ ಪ್ರವೇಶ ಮುಕ್ತವಾಗಿದೆ. 

ಚೀನಾದಲ್ಲಿ ವೈಪರೀತ್ಯ ಹವಾಮಾನವಾದ ಕಾರಣ ಬೇಸಗೆಯ ಉಷ್ಣತೆಯನ್ನು ಸಹಿಸುವುದು ಕಷ್ಟ. ಈ ಬೇಸಿಗೆಯನ್ನು ತಂಪಾಗಿರಿಸುವ ಬಗ್ಗೆ ಯೋಚಿಸಿ ಇಲ್ಲಿನ ರಾಜರುಗಳು ಯೋಜನೆಯೊಂದನ್ನು ರೂಪಿಸಿದರು. ಊರ ಹೊರಗಿರುವ ಅರವತ್ತು ಮೀಟರ್‌ ಎತ್ತರದ ಬೆಟ್ಟಗಳ ಸಾಲಿನಲ್ಲಿಯ ಸುಮಾರು 297 ಹೆಕ್ಟೇರ್‌ ಪ್ರದೇಶದಲ್ಲಿ ಬೇಸಿಗೆ ಅರಮನೆಯನ್ನು ಕಟ್ಟಿದರು. ಬೋಳು ಬೆಟ್ಟದ ತುಂಬ ಹಸಿರು ಮರಗಳನ್ನು ಬೆಳೆಸಲಾಯಿತು. ಸುಮಾರು 540 ಎಕ್ರೆಯಷ್ಟು ವಿಸ್ತಾರವಾದ “ಕುನ್‌ಮಿಂಗ್‌’ ಸರೋವರವನ್ನು ನಿರ್ಮಿಸಿದರು. ಬೇಸಿಗೆಯಲ್ಲಿ ವಾತಾವರಣ ತಂಪು ಮಾಡುವ ಎಲ್ಲ ಕೌಶಲಗಳನ್ನು ಇಲ್ಲಿ ಬಳಸಲಾಯಿತು. ಅರಮನೆ, ಮಂದಿರ, ಸರೋವರ, ಸೇತುವೆ- ಹೀಗೆ ಒಂದು ಊರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ರಚಿಸಲಾಯಿತು. ಹೀಗೆ ಪ್ರಕೃತಿಯೊಂದಿಗೆ ಮಾನವನ ಕೈಚಳಕದ ಬೆಸುಗೆಯಂತೆಯೆ ಕಾಣುವ ಈ ಪ್ರದೇಶ “ಬೇಸಿಗೆ ಅರಮನೆ’ ಎಂದು ಪ್ರಸಿದ್ಧವಾಯಿತು. ಈ ಅರಮನೆಯ ಒಂದು ಭಾಗದಲ್ಲಿ ಒಳಹೊಕ್ಕರೆ ನಮಗೆ ಆ ಕಾಲದ ಚೀನಾ ರಾಜ-ರಾಣಿಯರಂತೆ ದಿರಿಸು ತೊಟ್ಟು ಸಿಂಹಾಸನದಲ್ಲಿ ಕುಳಿತು ಫೋಟೊ ತೆಗೆಸಿಕೊಳ್ಳಬಹುದು. ಪುಕ್ಕಟೆಯಲ್ಲ , ಹಣ ತೆತ್ತು. ಯಾವತ್ತೂ ಹಳೆಯದಾಗದ ಮಹಾಗೋಡೆ ಚೀನಾಕ್ಕೆ ಹೋದ ನಂತರ ಜಗತ್ತಿನ ಅದ್ಭುತಗಳಲ್ಲೊಂದಾದ ಚೀನಾದ ಮಹಾಗೋಡೆಯ ದರ್ಶನ ಮಾಡದಿರಲು ಸಾಧ್ಯವೆ? ಹೊರಗಿನಿಂದ ಆಕ್ರಮಣವಾಗದಂತೆ ತಡೆಯಲು ಇಡೀ ದೇಶದ ಸುತ್ತ ಬಲಿಷ್ಠವಾದ ಗೋಡೆಯನ್ನೇ ನಿರ್ಮಿಸಿದ್ದು ಚೀನಾದ ಮಹಾ ಸಾಧನೆಯೇ ಸರಿ. ಚೀನಾದ ಜನರು ಇರುವೆಯಂತೆ ಸದಾ ಪರಿಶ್ರಮಗಳಾದ ಕಾರಣ ಇದು ಸಾಧ್ಯವಾಗಿರಬಹುದು. 21,196 ಕಿ.ಮೀ. ವಿಸ್ತಾರವಾದ ಚೀನಾದ ಮಹಾಗೋಡೆಯ ಸಮಗ್ರ ನೋಟ ಉಪಗ್ರಹದಿಂದ ಮಾತ್ರ ಲಭ್ಯ.

ಮರದ ತುಂಡು, ಕಲ್ಲು , ಇಟ್ಟಿಗೆ ಮುಂತಾದ ವಸ್ತುಗಳಿಂದ ತಯಾರಾದ ಈ ಗೋಡೆ ಬಹಳ ಗಟ್ಟಿಮುಟ್ಟಾಗಿದೆ. ಕ್ವಿನ್‌ಶಿಹ್ವಾಂಗ್‌ ಎಂಬ ಚೀನಾದ ಚಕ್ರವರ್ತಿ ಸುಮಾರು ಕಿ.ಪೂ. 220-206ರ ಅವಧಿಯಲ್ಲಿ ಕಟ್ಟಲು ಪ್ರಾರಂಭಿಸಿದ ಈ ಗೋಡೆಯನ್ನು ಮುಂದಿನ ರಾಜರುಗಳು ಮುಂದುವರಿಸಿಕೊಂಡು ಹೋದರು. ಏಳನೇ ಶತಮಾನದಲ್ಲಿ ಇದನ್ನು ಇನ್ನೂ ಹೆಚ್ಚು ವಿಸ್ತಾರವಾಗಿ, ಗಟ್ಟಿಮುಟ್ಟಾಗಿ ಕಟ್ಟಲಾಯಿತು.

ಇಂತಹ ಐತಿಹಾಸಿಕ ಮಹಾಗೋಡೆಯ ಒಂದು ಭಾಗದ ದರ್ಶನ ಬೀಜಿಂಗಿನಲ್ಲಿ ನಮಗಾಯಿತು. ಗೋಡೆ ಹತ್ತಿ ಕೆಳಗಿನ ಪ್ರಕೃತಿ ರಮಣೀಯ ದೃಶ್ಯವನ್ನು ನೋಡಲು ಇಲ್ಲಿ ಮೆಟ್ಟಿಲುಗಳಿವೆ. ನಮ್ಮ ವೈಶಾಲಿ ತಂಡದ ಪ್ರವೀಣ ಪಕ್ಕಳ ಅವರು ಮೆಟ್ಟಿಲೇರಲು ನಮ್ಮನ್ನೆಲ್ಲ ಹುರಿದುಂಬಿಸುತ್ತಿದ್ದರು. ನಾವೆಲ್ಲ ಉಮೇದಿನಿಂದಲೇ ಗೋಡೆ ಮೆಟ್ಟಿಲು ಏರತೊಡಗಿದೆವು.

ಸುಮಾರು 350 ಮೆಟ್ಟಿಲು ಏರಿದಾಗ ಅಲ್ಲೊಂದು ಹಳೆಯ ಚೀನಾ ಮನೆಯ ಮಾದರಿಯ ಒಂದು ಕಟ್ಟಡ ಇತ್ತು. ಅದನ್ನು ನೋಡಿದ ನಂತರ ಮತ್ತು ಮೇಲೇರುವುದಾದರೆ ಮಾನಸ ಸರೋವರವೊ ಅಥವಾ ಅಮರನಾಥ ಲಿಂಗ ದರ್ಶನವೊ ಆಗುವುದಾದರೆ ಮೇಲೇರಬಹುದಿತ್ತೇನೊ. ಆದರೆ, ಮೇಲೆ ಅಂಥಾದ್ದೇನೂ ಇಲ್ಲ. ಕೆಳಗೆ ನೋಡಿದರೆ ಸಿಗುವ ಪ್ರಕೃತಿ ರಮಣೀಯ ದೃಶ್ಯ ಬಿಟ್ಟರೆ ಬೇರೇನೂ ಇಲ್ಲ. ಅಷ್ಟಕ್ಕೆ ನಾವು ಹತ್ತಿದ್ದು ಸಾಕು ಎಂದು ಇಳಿಯಲಾರಂಭಿಸಿದೆವು. ಮೆಟ್ಟಿಲುಗಳು ನೇರ ಇರುವುದರಿಂದ ಒಮ್ಮೆಲೇ ಮೇಲಿಂದ ಕೆಳಗೆ ನೋಡುವಾಗ ಕೆಲವರಿಗೆ ತಲೆತಿರುಗಿದ ಅನುಭವವೂ ಆಯಿತು. ಈ ಮಹಾಗೋಡೆಯ ನಿರ್ಮಾಣದ ಕಾಲದಲ್ಲಿ ಇಲ್ಲಿ ಸದ್ದಿಲ್ಲದೆ ಅದೆಷ್ಟು ಕಾರ್ಮಿಕರ ಬಲಿದಾನವಾಗಿದೆಯೊ ಯಾರೂ ಲೆಕ್ಕವಿಟ್ಟಿರಲಿಕ್ಕಿಲ್ಲ. ಎಲ್ಲಾ ಮಹಾಸಾಧನೆಯ ಹಿಂದೆ ದೊಡ್ಡದೊಂದು ತ್ಯಾಗ, ಬಲಿದಾನದ ಕಥೆ ಅಡಗಿರುತ್ತದೆ ಎಂಬುದು ಸುಳ್ಳಲ್ಲ ಎಂದೆನಿಸುತ್ತದೆ.

ವಿಜಯಲಕ್ಷ್ಮೀ ಶ್ಯಾನ್‌ಭೋಗ್‌

ಟಾಪ್ ನ್ಯೂಸ್

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

3-madikeri

Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.