ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್: ಕಿ.ಮೀ.ಗಟ್ಟಲೆ ವಾಹನಗಳ ಸಾಲು
Team Udayavani, Aug 19, 2018, 9:53 AM IST
ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಉಂಟಾದ ಟ್ರಾಫಿಕ್ ಜಾಮ್ ಸಮಸ್ಯೆ ಶನಿವಾರ ಬೆಳಗ್ಗಿನವರೆಗೂ ಮುಂದುವರಿದು ಪ್ರಯಾಣಿಕರು ಪರದಾಡಿದರು. ಶುಕ್ರವಾರ ಕಂಟೈನರ್ ಲಾರಿ ಘಾಟಿ ರಸ್ತೆಯ 10ನೇ ತಿರುವಿನಲ್ಲಿ ಕೆಟ್ಟುನಿಂತು ಉಂಟಾದ ಟ್ರಾಫಿಕ್ ಜಾಮ್ ಶನಿವಾರ 11 ಗಂಟೆಯವರೆಗೂ ಮುಂದು ವರಿದು, 5 ಕಿ.ಮೀ. ವರೆಗೆ ವಾಹನಗಳು ಸಾಲುಗಟ್ಟಿದ್ದವು.
ತಿರುವಿನಲ್ಲಿ ಲಾರಿ ಕೆಟ್ಟು ನಿಂತಿದ್ದರೂ ಒಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶವಿತ್ತು. ಆದರೆ ಘಾಟಿ ರಸ್ತೆಯ ಎರಡೂ ಬದಿಗಳಲ್ಲೂ ವಾಹನ ಸಾಲುಗಟ್ಟಿ ದ್ದವು. ಬಳಿಕ ಪೊಲೀಸರು, ಸ್ಥಳೀಯರು ಸೇರಿ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿ ಕೊಂಡರು. ಲಾರಿ ತಿರುವಿನ ಅಪಾಯಕಾರಿ ಜಾಗದಲ್ಲಿ ನಿಂತ ಪರಿಣಾಮ ತೆರವುಗೊಳಿಸಲು ಪರದಾಡಬೇಕಾಯಿತು. ತೆರವು ಕಾರ್ಯ ತಡ ರಾತ್ರಿಯ ವರೆಗೆ ಮುಂದುವರಿದಿತ್ತು.
ಘನ ವಾಹನಗಳ ಗೊಂದಲ
ಜಿಲ್ಲಾಧಿಕಾರಿ ಘನ ವಾಹನ ಸಂಚಾರವನ್ನು ಶುಕ್ರವಾರ ತಡರಾತ್ರಿಯೇ ನಿಷೇಧಿಸಿದ್ದರೂ ಸಾಕಷ್ಟು ಘನ ವಾಹನಗಳು ಬಂದು ನಿಂತಿದ್ದವು. ಜತೆಗೆ ಹಲವು ಘನ ವಾಹನಗಳು ಮಾಹಿತಿ ಇಲ್ಲದೆ ಆಗಮಿಸಿದ್ದರಿಂದ ಪೊಲೀಸರು ಅನಿವಾರ್ಯವಾಗಿ ಅವನ್ನು ಬಿಡಬೇಕಾಯಿತು. ಶನಿವಾರ ಬೆಳಗ್ಗಿನ ಬಳಿಕ ಘನ ವಾಹನಗಳನ್ನು ಘಾಟಿ ರಸ್ತೆಯಲ್ಲಿ ಬಿಟ್ಟಿಲ್ಲ ಎಂದು ಬೆಳ್ತಂಗಡಿ ಸಂಚಾರ ಪೊಲೀಸ್ ಎಸ್‌ಐ ಓಡಿಯಪ್ಪ ಗೌಡ ತಿಳಿಸಿದ್ದಾರೆ. ತಿರುವುಗಳು ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರ ನಿಷೇಧಿಸುವಂತೆ ಆಗ್ರಹಿಸುತ್ತಲೇ ಬಂದಿದ್ದೇವೆ ಎಂದು ಹಸನಬ್ಬ ಚಾರ್ಮಾಡಿ ತಿಳಿಸಿದ್ದಾರೆ.
ಮಧ್ಯಾಹ್ನ ತಲುಪಿದ ಬಸ್‌ಗಳು
ಟ್ರಾಫಿಕ್ ಜಾಮ್‌ನಿಂದ ದೂರದೂರಿಗೆ ಪ್ರಯಾಣಿ ಸುತ್ತಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಮಂಗಳೂರಿಗೆ ಬೆಳಗ್ಗೆ ತಲುಪಬೇಕಿದ್ದ ಬಸ್‌ಗಳು, ತಲುಪುವ ವೇಳೆಗೆ ಮಧ್ಯಾಹ್ನವಾಗಿತ್ತು. ಮಂಗಳೂರಿನಿಂದ ತೆರಳಿದ ಬಸ್‌ಗಳೂ ಗುರಿ ಸೇರುವಾಗ ವಿಳಂಬವಾಗಿತ್ತು.
ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್
ಪುತ್ತೂರು; ಸಂಪಾಜೆ ಘಾಟಿ ರಸ್ತೆ ಕುಸಿದಿರುವ ಹಿನ್ನೆಲೆಯಲ್ಲಿ ಪುತ್ತೂರು- ಮಂಗಳೂರು, ಸುಳ್ಯ- ಮಂಗಳೂರು ನಡುವೆ ಕೆಎಸ್‌ಆರ್‌ಟಿಸಿ ಘಟಕ ವತಿಯಿಂದ ಹೆಚ್ಚುವರಿ ಬಸ್‌ಗಳನ್ನು ಹಾಕಲಾಗಿದೆ. ಮಂಗಳೂರಿನಿಂದ ಪುತ್ತೂರಿಗೆ ಕೊನೆಯ ಬಸ್ 8.45ರ ಬದಲು 9.30ಕ್ಕೆ ಹೊರಡಲಿದೆ. ಹೆಚ್ಚುವರಿ ಬಸ್‌ಗಳು ಪುತ್ತೂರು- ಮಂಗಳೂರು ನಡುವೆ 6 ಟ್ರಿಪ್ ಹಾಗೂ ಸುಳ್ಯ- ಮಂಗಳೂರು ನಡುವೆ ನಾಲ್ಕು ಬಾರಿ ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.