ಸಪ್ಪಣ್ಣಾರ್ಯರ ಜೀವನ ಅರಿವು ಅತ್ಯಗತ್ಯ
Team Udayavani, Aug 19, 2018, 10:36 AM IST
ಸೇಡಂ: ಅಕ್ಷರದ ಅರಿವಿಲ್ಲದಿರುವಾಗ ಭಕ್ತಿ ದಾಸೋಹ ನೀಡಿದ ಕೊತ್ತಲ ಬಸವೇಶ್ವರ ದೇವಾಲಯದ ಲಿಂ| ಸಪ್ಪಣ್ಣಾರ್ಯ ಶಿವಯೋಗಿಗಳ ಜೀವನ ಅರಿವು ಅತ್ಯಗತ್ಯ ಎಂದು ಹಿರಿಯ ಸಾಹಿತಿ ಗವೀಶ ಹಿರೇಮಠ ಹೇಳಿದರು.
ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಪರಮ ಪೂಜ್ಯ ಲಿಂ| ಮಡಿವಾಳಯ್ಯ ಸಾಮೀಜಿ ಪುಣ್ಯಸ್ಮರಣೆ ಪ್ರಯುಕ್ತ ಶ್ರೀ ಕೊತ್ತಲ ಬಸವೇಶ್ವರ ಪಂಚಮಂಡಳಿ, ಮಡಿವಾಳೇಶ್ವರ ಭಜನಾ ಮಂಡಳಿ, ಸಪ್ಪಣಾರ್ಯ ದಾಸೋಹ ಸಮಿತಿ, ಲಾಯನ್ಸ್ ಕ್ಲಬ್, ರೆಡ್ ಕ್ರಾಸ್ ಸೊಸೈಟಿ, ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಬಸವ ಬಳಗ, ಅಕ್ಕನ ಬಳಗ, ಯುವ ಬಳಗ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಅನ್ನದಾಸೋಹ, ಜ್ಞಾನದಾಸೋಹದೊಂದಿಗೆ ಭಕ್ತಿ ದಾಸೋಹ ನೀಡುವ ಮೂಲಕ ಭಕ್ತರಲ್ಲಿ ಧಾರ್ಮಿಕತೆ ಶಕ್ತಿ ತುಂಬುವ ಕೆಲಸ ಸಪ್ಪಣಾರ್ಯ ಶಿವಯೋಗಿಗಳು ಮಾಡಿದ್ದರು. ಅವರ ನೆನಪಲ್ಲಿ ನಾಟಕ ಗ್ರಂಥ ರಚಿಸಿರುವುದು ಪೂರಕವಾಗಿದೆ ಎಂದರು.
ಅಪರೂಪದ ಸಾಹಿತಿ ಎಂದೆನಿಸಿಕೊಂಡಿರುವ ಹಿರಿಯ ಸಾಹಿತಿ ಎಲ್.ಬಿ.ಕೆ. ಆಲ್ದಾಳ ಅವರ ಅಕ್ಷರಗುಚ್ಚದಲ್ಲಿ ಹೊರಬಂದಿರುವ ಸಪ್ಪಣಾರ್ಯ ಶಿವಯೋಗಿಗಳ ನಾಟಕ ಗ್ರಂಥ ನಿಜಕ್ಕೂ ಬರುವ ಪೀಳಿಗೆಗೆ ದಾರಿದೀಪವಾಗಲಿದೆ ಎಂದು ಹೇಳಿದರು.
ಸಿಪಿಐ ಪಂಚಾಕ್ಷರಿ ಸಾಲಿಮಠ ಮಾತನಾಡಿ, ಶತಮಾನದ ಹಿಂದೆ ಶರಣರು ನಡೆದುಹೋದ ದಾರಿಯನ್ನು ಗ್ರಂಥ ರೂಪದಲ್ಲಿ ತರುವ ಕೆಲಸ ನಿಜಕ್ಕೂ ಪ್ರಶಂಸನೀಯವಾದದ್ದು. ಮಹಾನ್ ಶರಣರ ಜೀವನ ಸಾಧನೆ ಇಂದಿನ ಜನತೆಗೆ ದಾರಿದೀಪವಾಗಬೇಕು ಎಂದರು.
ಸಂಸ್ಥಾನದ ಸದಾಶಿವ ಸ್ವಾಮೀಜಿ, ಸಾಹಿತಿ ಎಲ್.ಬಿ.ಕೆ. ಅಲ್ದಾಳ, ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ| ಸದಾನಂದ ಬೂದಿ ಮಾತನಾಡಿದರು. ಲಾಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಮಾಲಪಾಣಿ, ವಿಶ್ವಹಿಂದು ಪರಿಷತ್ ತಾಲೂಕಾ ಉಪಾಧ್ಯಕ್ಷ ಅನೀಲರೆಡ್ಡಿ ಸಂಗೆಪಲ್ಲಿ, ಭಜರಂಗದಳ ಜಿಲ್ಲಾ ಸಂಯೋಜಕ ಪ್ರೇಮ ಚವ್ಹಾಣ, ಡಾ| ಆಶ್ರಪ್, ಡಾ| ಅಲ್ತಾಫ್ ಇದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿದರು, ಪ್ರದೀಪ ಪಾಟೀಲ ಹೊಸಳ್ಳಿ ನಿರೂಪಿಸಿದರು, ವಿಶ್ವಹಿಂದು ಪರಿಷತ್ ವಿಭಾಗೀಯ ಸಂ.ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.