ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿಎಕ್ಸ್‌ಲೆಂಟ್ ಸಾಧನೆ
Team Udayavani, Aug 19, 2018, 11:30 AM IST
ವಿಜಯಪುರ: ಅಖೀಲ ಭಾರತೀಯ ಕ್ರೀಡಾ ಒಕ್ಕೂಟದಿಂದ ವಿಜಯವಾಡದಲ್ಲಿ ಜರುಗಿದ 4ನೇ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ನಗರದ ಎಕ್ಸ್‌ಲೆಂಟ್ ಇಂಗ್ಲಿಷ್ ಮಾಧ್ಯಮದ 12 ಕರ್ನಾಟಕ ವಿದ್ಯಾರ್ಥಿಗಳನ್ನು ಒಳಗೊಂಡಿದ್ದ ತಂಡ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದೆ.
ಟೆಕ್ವಾಂಡೋ ವಿಭಾಗದಲ್ಲಿ 25ಕೆ.ಜಿ ಒಳಗಡೆ, ನಿಜಗುಣಿ ಪಾಟೀಲ ಬೆಳ್ಳಿ ಪದಕ, 32ಕೆ,ಜಿ ಒಳಗಡೆ ಸುಶೀಲಕುಮಾರ್ ರಾಮಗೋಂಡ ಬಂಗಾರ ಪದಕ, ಶ್ರೆಯಸ್ ಬೇವನೂರ ಬೆಳ್ಳಿ ಪದಕ, ಶಾಮವೀರ ದೇಶಮುಖ ಕಂಚಿನ ಪದಕ, 36ಕೆ.ಜಿ ಒಳಗಡೆ ಮಹೇಶ ಗುತ್ತೇದಾರ ಬಂಗಾರ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಸುದರ್ಶನ ಜುಮನಾಳ ಬೆಳ್ಳಿ ಪದಕ, ನಚಿಕೇತಯಡಹಳ್ಳಿ ಕಂಚಿನ ಪದಕ ಪಡೆದಿದ್ದಾರೆ. 52 ಕೆ.ಜಿ ವಿಭಾಗದಲ್ಲಿ ವೃಷಭ ಬಿ. ಕದಂ ಕಂಚಿನ ಪದಕ, ಅಥ್ಲೆಟಿಕ್ ವಿಭಾಗದ 200ಮೀ. ಓಟದಲ್ಲಿ ಮೊಹ್ಮದ್ ಡಿ. ಗೌಸ್ ಶೇಖ್ ಕಂಚಿನ ಪದಕ, ರಾಜು ಡಿ. ಕುಸ್ತಿ, 57 ಕೆಜಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಕ್ರಿಕೆಟ್ ವಿಭಾಗದಲ್ಲಿ 16 ವರ್ಷದೊಳಗಿನ ಅಭಿಲಾಷ ಕೊಪ್ಪದ ತೃತೀಯ ಸ್ಥಾನ ಪಡೆದಿದ್ದಾರೆ. ಮಹೇಶ ಗುತ್ತೇದಾರ, ಶಶಿಧರ ಕಲ್ಲೂರ, ಆದಿತ್ಯ ಬೆಟಿಗೇರ, ಸೋಮನಾಥ ಪಾಟೀಲ, ವೃಷಭ ಕದಂ, ಅಭಿಷೇಕ ಮಾಗಣಗೇರಿ ಇತರರು ವಿವಿಧ ಕ್ರೀಡೆಯಲ್ಲಿ ಭಾಗಿಯಾಗಿ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ವಿಜೇತರಾಗಿರುವ ವಿದ್ಯಾರ್ಥಿಗಳ ತಂಡಕ್ಕೆ ಎಕ್ಸ್‌ಲೆಂಟ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕವಲಗಿ, ಸಂಸ್ಥಾಪಕ ಕಾರ್ಯದರ್ಶಿ ಶಿವಾನಂದ ಕೇಲೂರ ಹಾಗೂ ನಿರ್ದೇಶಕರಾದ ಮಂಜುನಾಥ ಕವಲಗಿ, ದಯಾನಂದ ಕೇಲೂರ, ರಾಜಶೇಖರ ಕವಲಗಿ, ಎನ್.ಜಿ. ಯರನಾಳ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರದ 7 ಜನಕ್ಕೆ ರಾಷ್ಟ್ರೀಯ ನ್ಪೋರ್ಟ್ಸ್ ಅವಾರ್ಡ್ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಬಸವರಾಜ ಬಾಗೇವಾಡಿಯವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sushasana Day: ಕಾಂಗ್ರೆಸ್ ಆಡಳಿತದಲ್ಲಿ ಜಂಗಲ್ ರಾಜ್ ಸೃಷ್ಟಿ: ಬಿ.ಎಲ್.ಸಂತೋಷ್
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.