ಪರಿಹಾರ ಸಾಮಗ್ರಿ ರವಾನೆ
Team Udayavani, Aug 19, 2018, 11:59 AM IST
ಬೆಂಗಳೂರು: ಮಳೆಯಿಂದ ತೊಂದರೆ ಗೊಳಗಾದ ಕೊಡಗು ಜಿಲ್ಲೆಯ ಜನರಿಗೆ ಅಗತ್ಯವಾದ ಆಹಾರ ಪದಾರ್ಥ, ಔಷಧ, ಬಿಸ್ಕೆಟ್, ಬ್ಲಾಂಕೆಟ್, ಅಕ್ಕಿ, ಸೀರೆ, ನೈಟಿ, ಸ್ಯಾನಿಟರಿ ಪ್ಯಾಡ್ ಸೇರಿದಂತೆ ರಾಜ್ಯ ಬಿಜೆಪಿಯಿಂದ ಸಂಗ್ರಹಿಸಿದ ಒಂದು ಲಾರಿ ಲೋಡ್ ಪರಿಹಾರ ಸಾಮಗ್ರಿಗಳನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಖುದ್ದುಗಾಗಿ ಕೊಡಗಿಗೆ ಕೊಂಡೊಯ್ದರು.
ಕೊಡಗು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು ಮನೆಗಳನ್ನು ಕಳೆದುಕೊಂಡವರಿಗೆ ಬಟ್ಟೆ, ಬ್ಲಾಂಕೆಟ್ ಮತ್ತಿತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋ ಗುತ್ತಿದ್ದೇನೆ. ಮಳೆಯಿಂದ ಹಾನಿಗೊಳಗಾದ ಉಳಿದ ಜಿಲ್ಲೆಗಳಿಗೂ ಪರಿಹಾರ ಸಾಮಗ್ರಿ ಕಳುಹಿಸಲು ಬಿಜೆಪಿ ಸಿದ್ಧವಿದೆ. ಸಾರ್ವಜನಿಕರು ಉದಾರ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನಿಧಿ: ಕೆಪಿಸಿಸಿ ವತಿಯಿಂದಲೂ ಸಂತ್ರಸ್ತ್ರರಿಗೆ ಪರಿಹಾರ ನಿಧಿ ಸ್ಥಾಪಿಸಲಾಗಿದ್ದು, ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸಹ ರಚಿಸಲಾಗಿದೆ. ಕೊಡಗು ಜಿಲ್ಲೆಗೆ ಆಹಾರ ಪದಾರ್ಥ, ಔಷಧ, ಉಡುಪಿ ಸೇರಿದಂತೆ ಪರಿಹಾರ ಸಾಮಗ್ರಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ತಿಳಿಸಿದ್ದಾರೆ.
ನಟ ಶಿವರಾಜ್‌ಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಕೊಡಗು ಮಳೆ ಸಂತ್ರಸ್ತರಿಗೆ ಉದಾರವಾಗಿ ನೆರವು ನೀಡುವಂತೆ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.