ಜಗ್ಗೇಶ್‌ ಹೊಸ ಚಿತ್ರ “ತೋತಾಪುರಿ’


Team Udayavani, Aug 19, 2018, 7:00 PM IST

thotapuri-1.jpg

“ನೀರ್‌ದೋಸೆ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಜಯ ಪ್ರಸಾದ್‌ “ಲೇಡೀಸ್‌ ಟೈಲರ್‌’ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದ್ದರು. ಅದ್ಯಾವ ಗಳಿಗೆಯಲ್ಲಿ ಅವರು ಆ ಸಿನಿಮಾವನ್ನು ಘೋಷಿಸಿಕೊಂಡರೋ ಗೊತ್ತಿಲ್ಲ, ಆ ಸಿನಿಮಾ ಸಾಕಷ್ಟು ಗೊಂದಲಗಳಿಗಳಿಂದಲೇ ಸುದ್ದಿಯಾಯಿತೇ ಹೊರತು ಟೇಕಾಫ್ ಆಗಲೇ ಇಲ್ಲ. ಅನೇಕ ಹೀರೋಗಳ ಹೆಸರು ಕೇಳಿಬಂದು ಕೊನೆಗೆ ರವಿಶಂಕರ್‌ ಗೌಡ ಅಂತಿಮವಾಗಿದ್ದರು. ಹಾಗಾದರೆ, “ಲೇಡೀಸ್‌ ಟೈಲರ್‌’ ಮುಗಿಯಿತಾ ಎಂದು ನೀವು ಕೇಳಬಹುದು.

ಸದ್ಯ ವಿಜಯಪ್ರಸಾದ್‌ “ಲೇಡೀಸ್‌ ಟೈಲರ್‌’ ಅನ್ನು ಬದಿಗಿಟ್ಟು, ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದು “ತೋತಾಪುರಿ’. ಈ ಮೂಲಕ ಹಿಟ್‌ ಜೋಡಿ ಕೂಡಾ ಒಂದಾಗಿದೆ. ಹೌದು, “ನೀರ್‌ದೋಸೆ’ಯಂತಹ ಯಶಸ್ವಿ ಚಿತ್ರದ ನಂತರ ವಿಜಯ ಪ್ರಸಾದ್‌ ಹಾಗೂ ನಟ ಜಗ್ಗೇಶ್‌ “ತೋತಾಪುರಿ’ ಮೂಲಕ ಒಂದಾಗುತ್ತಿದ್ದಾರೆ. ಈ ಮೂಲಕ ಜಗ್ಗೇಶ್‌ ಅವರಿಗೆ ಮತ್ತೂಂದು ವಿಭಿನ್ನ ಚಿತ್ರ ಸಿಕ್ಕಂತಾಗಿದೆ. “ತೋತಾಪುರಿ’ ಚಿತ್ರಕ್ಕೆ “ತೊಟ್‌ ಕೀಳ್‌ಬೇಕಷ್ಟೇ’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ.

ಚಿತ್ರಕ್ಕೆ ಶ್ರೀರಂಗಪಟ್ಟಣದಲ್ಲಿ ಮುಹೂರ್ತ ನಡೆಯಲಿದೆ. ಕೆ.ಎ.ಸುರೇಶ್‌ ಈ ಚಿತ್ರದ ನಿರ್ಮಾಪಕರು. “ಶಿವಲಿಂಗ’, “ರಾಜು ಕನ್ನಡ ಮೀಡಿಯಂ’ ನಂತಹ ಯಶಸ್ವಿ ಚಿತ್ರಗಳ ನಂತರ ಸುರೇಶ್‌ ಈಗ “ತೋತಾಪುರಿ’ಗೆ ಕೈ ಹಾಕಿದ್ದಾರೆ. ಎಲ್ಲಾ ಓಕೆ, “ತೋತಾಪುರಿ’ಯಲ್ಲಿ ವಿಜಯ ಪ್ರಸಾದ್‌ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಈ ಬಾರಿಯೂ ವಿಜಯಪ್ರಸಾದ್‌ ಒಂದು ವಿಭಿನ್ನವಾದ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಕಾಮಿಡಿ, ಡ್ರಾಮಾ, ವಿಡಂಬನಾತ್ಮಕವಾಗಿ ಸಾಗುವ ಈ ಕಥೆಯಲ್ಲಿ ಜಗ್ಗೇಶ್‌ ಕೃಷಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಗ್ಗೇಶ್‌ ಅವರ ಗೆಟಪ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡುವ ನಿರ್ದೇಶಕ ವಿಜಯಪ್ರಸಾದ್‌, “ಟೈಟಲ್‌ ಕಥೆಗೆ ಅನುಗುಣವಾಗಿದೆ. ಶೀರ್ಷಿಕೆಯಲ್ಲಿ ಆಕರ್ಷಣೆ ಇರಬೇಕೆಂಬುದು ಒಂದು ಕಾರಣವಾದರೆ, ಕಥೆಗೆ “ತೋತಾಪುರಿ’ ತುಂಬಾ ಸೂಕ್ತವಾಗಿದೆ. ಸಿನಿಮಾ ನೋಡಿದ ಮೇಲೆ ನಿಮಗೆ ಮನದಟ್ಟಾಗುತ್ತದೆ’ ಎನ್ನುವುದು ವಿಜಯಪ್ರಸಾದ್‌ ಮಾತು.

ಇನ್ನು ಚಿತ್ರದ ಕುರಿತು ಟ್ವೀಟ್‌ ಮಾಡಿರುವ ಜಗ್ಗೇಶ್‌, “ಕನ್ನಡಿಗರಿಗೆ ನಗೆಯ ರಸದೌತಣ ನೀಡಿದ “ನೀರ್‌ದೋಸೆ’ಯ ನಮ್ಮಿಬ್ಬರ ಜೋಡಿ ಮತ್ತೆ ಒಂದಾಗಿದೆ. ಬಹಳ ಅದ್ಭುತ ಕಥೆ. “ನೀರ್‌ ದೋಸೆ’ಗಿಂತ ಎರಡು ಹೆಜ್ಜೆ ಮುಂದೆ ಎಂದು ಧೈರ್ಯವಾಗಿ ಹೇಳಬಲ್ಲೆ’ ಎಂದು ಜಗ್ಗೇಶ್‌ ಹೇಳಿಕೊಂಡಿದ್ದಾರೆ. “ತೋತಾಪುರಿ’ಯಲ್ಲೂ ಸುಮನ್‌ ರಂಗನಾಥ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಉಳಿದಂತೆ ವೀಣಾ ಸುಂದರ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್‌ ಸೀಳೀನ್‌ ಸಂಗೀತ, ವಿಷ್ಣುವರ್ಧನ್‌ ಛಾಯಾಗ್ರಹಣವಿದೆ. ಮೊದಲ ಹಂತವಾಗಿ 15 ದಿನಗಳ ಕಾಲ ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಎಲ್ಲಾ ಓಕೆ, “ಲೇಡೀಸ್‌ ಟೈಲರ್‌’ ಮತ್ತೆ ಆರಂಭವಾಗುತ್ತಾ ಎಂದರೆ, “ಈ ಚಿತ್ರವನ್ನು ಮುಗಿಸಿಕೊಂಡು ಅದನ್ನು ಕೈಗೆತ್ತಿಕೊಳ್ಳುತ್ತೇನೆ’ ಎನ್ನುವುದು ವಿಜಯ ಪ್ರಸಾದ್‌ ಮಾತು. 

ಟಾಪ್ ನ್ಯೂಸ್

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ranaksha

Ranaksha: ಫ್ಯಾಮಿಲಿ ಡ್ರಾಮಾದಲ್ಲಿ ಸೀರುಂಡೆ ರಘು

Sarvasva Kannada video song

Sarvasva: ಹಾಡಲ್ಲಿ ʼಸರ್ವಸ್ವʼ ಕನಸು; ನವತಂಡದ ಪ್ರಯತ್ನ

Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ

Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ

Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ

Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ

Reeshma Nanaiah: ರೀಷ್ಮಾ ಕಣ್ಣಲ್ಲಿ ಎರಡು ಕನಸು: ಯುಐ,ಕೆಡಿ ಅಡ್ಡದಲ್ಲಿ ಗ್ಲ್ಯಾಮರಸ್ ಬೆಡಗಿ

Reeshma Nanaiah: ರೀಷ್ಮಾ ಕಣ್ಣಲ್ಲಿ ಎರಡು ಕನಸು: ಯುಐ,ಕೆಡಿ ಅಡ್ಡದಲ್ಲಿ ಗ್ಲ್ಯಾಮರಸ್ ಬೆಡಗಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.