ಗುರಿ, ಧೈರ್ಯದಿಂದ ಸಾಧನೆ ಸುಲಭ


Team Udayavani, Aug 20, 2018, 12:40 PM IST

m6-guri.jpg

ಹುಣಸೂರು: ಗುರಿ, ಧೈರ್ಯ, ಬದ್ಧತೆ ಇದ್ದಲ್ಲಿ ಎಂತವರೂ ಶಿಖರ ಏರಬಹುದೆಂದು ಎವರೆಸ್ಟ್‌ ಏರುವ ಮೂಲಕ ಕನ್ನಡ ನಾಡಿಗೆ ಹೆಮ್ಮೆ ತಂದಿರುವ ನಾಗರಹೊಳೆ ಅರಣ್ಯ ರಕ್ಷಕ ವಿಕ್ರಂ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸರಕಾರಿ ಪದವಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರ ವಿಭಾಗವು ಆಯೋಜಿಸಿದ್ದ ಭೂ ವಿಜ್ಞಾನ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಎವರೆಸ್ಟ್‌ ಅವರೋಹಣ ಕುರಿತ ಪಿಪಿಟಿ ಮೂಲಕ ಅನುಭವಗಳನ್ನು ಹಂಚಿಕೊಂಡ ಅವರು ತಮ್ಮ 9ವರ್ಷಗಳ ಎವರೆಸ್ಟ್‌ ಏರುವ ಕನಸು ನನಸಾಗಿಸಿಕೊಂಡಿದ್ದೇನೆ.

ನನ್ನ ಕನಸಿನಲ್ಲೂ ಎವರೆಸ್ಟ್‌ ಕಾಡುತ್ತಿತ್ತು, ನೇಪಾಳ ಮೂಲಕ ಎವರೆಸ್ಟ್‌ ಶಿಖರವನ್ನು ವಿವಿಧ ರಾಜ್ಯಗಳ 24 ಮಂದಿಯೊಂದಿಗೆ ಕ್ಲಿಷ್ಟಕರ ವಾತಾವರಣದಲ್ಲಿ ಅಡೆತಡೆಗಳ ನಡುವೆಯೂ ಹಂತಹಂತವಾಗಿ 32 ದಿನಗಳ ಅವಧಿಯಲ್ಲಿ ಶಿಖರವನ್ನು ಏರಿದೆ. ಬೇಸ್‌ ಕ್ಯಾಂಪ್‌ ನಂತರ ನನ್ನ ಜೊತೆಗಿದ್ದ 18ಮಂದಿ ವಿವಿಧ ಕಾರಣಗಳಿಂದ ವಾಪಾಸಾದರು.

ಹಿಮಗಾಳಿ ಹಾಗೂ ಮೈನೆಸ್‌ ವಾತಾವರಣದಲ್ಲಿ ಶೇರ್ಪಾಗಳ ನೆರವಿನಿಂದ ಮೇಲೇರಿದ ನಾವು ನಿತ್ಯ ಐಸನ್ನು ಕರಗಿಸಿ 5-6 ಲೀ.ನಷ್ಟ ನೀರು ಕುಡಿಯುತ್ತಿದ್ದೆವು, ಊಟಕ್ಕೆ ಮ್ಯಾಗಿಸೂಪ್‌ ಬಳಸುತ್ತಿದ್ದೆವು. ತುತ್ತತುದಿ ಮುಟ್ಟುವ ವೇಳೆ ರಾತ್ರಿಯೂ ಎವರೆಸ್ಟ್‌ ಹತ್ತಿದೆವು. ಹಲವು ಮƒತ ದೇಹಗಳನ್ನು ಕಂಡೆವು.

ಎವರೆಸ್ಟ್‌ನ ತುತ್ತ ತುದಿಯಲ್ಲಿ ಕೇವಲ 15 ನಿಮಿಷಗಳ ಕಾಲ ಮಾತ್ರ ಅಲ್ಲಿದ್ದು, ಆ ವೇಳೆ ಕರ್ನಾಟಕದ ಬಾವುಟ, ಸಾಧನೆಗೆ ಪ್ರೇರಣೆ ನೀಡಿದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶಿವಕುಮಾರ ಸ್ವಾಮಿಜಿ, ಅಬ್ದುಲ್‌ ಕಲಾಂ ನಾಗರಹೊಳೆ ಸಿ.ಎಫ್‌.ದಿ.ಮಣಿಕಂದನ್‌ ಸೇರಿದಂತೆ ಅನೇಕ ಸಾಧಕರ ಭಾವಚಿತ್ರ, ಪರಿಸರ ಸಂರಕ್ಷಣೆ ಕುರಿತ ಬ್ಯಾನರ್‌ ಅನಾವರಣಗೊಳಿಸಿದ್ದು ಆ ರೋಚಕ ಕ್ಷಣ ಅವಿಸ್ಮರಣೀಯವೆಂದರು. 

ಈ ಎಲ್ಲಾ ಸಾಧನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತುಂಬು ಸಹಕಾರ ನೀಡಿದ್ದಾರೆಂದು ಸ್ಮರಿಸಿದರು. ವಿದ್ಯಾರ್ಥಿಗಳು ವಿಕ್ರಂರೊಂದಿಗೆ ಸಂವಾದ ನಡೆಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಬಿ.ಎಂ.ನಾಗರಾಜ್‌, ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಜ್ಞಾನಪ್ರಕಾಶ್‌, ಭೌತಶಾಸ್ತ್ರ ವಿಭಾಗದ ಮಂಜುನಾಥ್‌ ಮಾತನಾಡಿದರು. ಪ್ರಾಧ್ಯಾಪಕರಾದ ನಂಜುಂಡಸ್ವಾಮಿ, ನಾಗಣ್ಣ, ಶ್ರೀನಿವಾಸ್‌, ಅಂಬುಜಾಕ್ಷಿ ಸೇರಿದಂತೆ ವಿದ್ಯಾರ್ಥಿ ಸಮೂಹ ಭಾಗವಹಿಸಿದ್ದರು. 

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Mysuru: ಬಾಲ್ಯ ವಿವಾಹ: 12 ಮಂದಿ ವಿರುದ್ಧ ಪ್ರಕರಣ ದಾಖಲು

Mysuru: ಬಾಲ್ಯ ವಿವಾಹ: 12 ಮಂದಿ ವಿರುದ್ಧ ಪ್ರಕರಣ ದಾಖಲು

T. S. Srivatsa;ಮುನಿರತ್ನ ಬಂಧನ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ: ಆರೋಪ

T. S. Srivatsa;ಮುನಿರತ್ನ ಬಂಧನ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ: ಆರೋಪ

CTCM ಸಿದ್ದರಾಮಯ್ಯರಿಂದ ದ್ವೇಷ ರಾಜಕಾರಣ: ಸಿ.ಟಿ.ರವಿ

CM ಸಿದ್ದರಾಮಯ್ಯರಿಂದ ದ್ವೇಷ ರಾಜಕಾರಣ: ಸಿ.ಟಿ.ರವಿ

Hunsur: ನೀರು ತರಲು ಹೋಗಿದ್ದ ಪತ್ನಿಯ ಕತ್ತು ಕಡಿದ ಪತಿ

Hunsur: ನೀರು ತರಲು ಹೋಗಿದ್ದ ಪತ್ನಿಯ ಕತ್ತು ಕಡಿದ ಪತಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.