ಲಕ್ಷ್ಮಣ ತೀರ್ಥ ನದಿ ನೀರಿನ ಮಟ್ಟ ಏರಿಕೆ

Team Udayavani, Aug 20, 2018, 12:40 PM IST

m2-lakshmana.jpg

ಹುಣಸೂರು: ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಏರುತ್ತಲೇ ಇದ್ದು, ಹನಗೋಡು ಅಣೆಕಟ್ಟೆಮೇಲೆ 8,380 ಸಾವಿರ ಕ್ಯೂಸೆಕ್‌(4.5ಅಡಿ)ನೀರು ದುಮ್ಮಿಕ್ಕಿ ಹರಿಯುತ್ತಿದ್ದು, ಮತ್ತಷ್ಟು ಬೆಳೆ ನೀರಿನಲ್ಲಿ ಮುಳುಗಿದೆ.

ಕೊಡಗಿನ ಇಪುì ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಬೀಳುತ್ತಿರುವ ಜಡಿಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಶುಕ್ರವಾರದಿಂದ ಮಳೆ ಸ್ವಲ್ಪಮಟ್ಟಿಗೆ ಕಡಿಮೆಯಾದರೂ ನೀರಿನ ಪ್ರವಾಹ ಹೆಚ್ಚುತ್ತಲೇ ಇದೆ. ನೀರಿನ ಮಟ್ಟ ಅರ್ಧ ಅಡಿ ಹೆಚ್ಚಿದ್ದರಿಂದ ಹನಗೋಡು ಭಾಗದ ಹತ್ತಾರು ಹಳ್ಳಿಗಳ ಹೊಳೆ ಅಂಚಿನ ಜಮೀನಿನ ಬೆಳೆಗಳು ಜಲಾವೃತವಾಗಿದೆ. 

ಅಣೆಕಟ್ಟೆಯ ಹಿಂಬದಿಯಲ್ಲಿ ಹಿನ್ನೀರು ನಾಟಿ ಮಾಡಿದ ಭತ್ತದ ಗದ್ದೆಗಳನ್ನೂ ಮುಳುಗಿಸಿದೆ. ಅಲ್ಲದೆ ಪಕ್ಕದ ಎಚ್‌.ಎಲ್‌. ರಾಜಣ್ಣ, ರಮೇಶ್‌, ವೀಣಾ, ಮುರುಳಿ, ಎಚ್‌.ಸಿ.ರಾಮಣ್ಣರಿಗೆ ಸೇರಿದ ಅಡಿಕೆ, ತೆಂಗಿನ ತೋಟಕ್ಕೆ ನೀರು ನುಗ್ಗಿದೆ. ಹನಗೋಡು-ಹುಣಸೂರು ಮುಖ್ಯರಸ್ತೆಯ ಕಾಮಗೌಡನಹಳ್ಳಿ ಗೇಟ್‌ ಬಳಿಯ ಆಜುಬಾಜಿನ ಮುಸುಕಿನ ಜೋಳ,

ಶುಂಠಿ, ತಂಬಾಕು ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಮತ್ತೆ ಅರ್ಧ ಅಡಿ ಹೆಚ್ಚು ನೀರು ಬಂದಲ್ಲಿ ನಿಲುವಾಗಿಲು ಅವಲಕ್ಕಿ ಕಡ ಹಾಗೂ ಕಾಮಗೌಡನಹಳ್ಳಿಯ ಪಡುವನಹಳ್ಳದ‌ ಮೂಲಕ ರಸ್ತೆಗೆ ನೀರು ತುಂಬಿದಲ್ಲಿ ಹನಗೋಡು-ಹುಣಸೂರು ರಸ್ತೆ ಬಂದ್‌ ಆಗಿದೆ.

ಅಪಾಯದಲ್ಲಿ ತಡೆಗೋಡೆ: ಹನಗೋಡು ಅಣೆಕಟ್ಟೆಯ ಮುಖ್ಯನಾಲೆಯ ಬಿಡುಗಂಡಿ ಬಳಿ ನಾಲೆಯ ಏರಿಗೆ ನಿರ್ಮಿಸಿರುವ ಸುಮಾರು 200 ಮೀ.ನಷ್ಟು ತಡೆಗೋಡೆ ವಾಲಿಕೊಂಡಿದ್ದು, ಬಿಳುವ ಸಂಭವವಿದೆ. 

ತುಂಬಿದ 42 ಕೆರೆಗಳು: ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆಗೆ 600 ಕ್ಯೂಸೆಕ್‌ ನೀರು ಹರಿಸಲಾಗುತ್ತಿದ್ದು, ಅಣೆಕಟ್ಟೆ ವ್ಯಾಪ್ತಿಯ ಎಲ್ಲ 42 ಕೆರೆಗಳಿಗೆ ನೀರು ತುಂಬಿಸಿದ್ದು, ಸುಮಾರು 24 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಲಿದೆ, ಹನುಮಂತಪುರ ಹಾಗೂ ಉದ್ದೂರು ನಾಲಾ ವ್ಯಾಪ್ತಿಯಲ್ಲಿ ಭತ್ತದ ನಾಟಿ ಚುರುಕುಗೊಂಡಿದೆ.

ಶನಿವಾರ ಮುಂಜಾನೆ ಜಡಿ ಮಳೆ ಆರಂಭವಾಗಿ ಮದ್ಯಾಹ್ನದವೇಳೆ ಸ್ವಲ್ಪಮಟ್ಟಿನ ಬಿಡುವು ನೀಡಿದೆ. ನಾಲೆಯ ಮೇಲೆ ನಿಗಾ ಇಡಲಾಗಿದ್ದು, ಮಳೆ ಹೆಚ್ಚಿರುವುದರಿಂದ ನಾಲೆಯಲ್ಲಿ ನೀರಿನ ಹರಿವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಾಗಿದೆ.

ಯುವಕರಿಗೆ ಎಇಇ ಎಚ್ಚರಿಕೆ: ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆಯ ಮೇಲೆ ನೀರಿನ ಹರಿವನ್ನು ಕಣ್ತುಂಬಿಕೊಳ್ಳಲು ನಿತ್ಯ ಸುತ್ತಮುತ್ತಲ ಹಳ್ಳಿಗಳ ನೂರಾರು ಮಂದಿ ಅಣೆಕಟ್ಟೆ ಏರಿಮೇಲೆ ನಿಂತು ವೀಕ್ಷಿಸುತ್ತಿದ್ದಾರೆ, ಯುವ ಪಡೆ ಅಣೆಕಟ್ಟೆ ಮೇಲೆ ದುಮ್ಮಿಕ್ಕುತ್ತಿರುವ ನೀರಿನೊಂದಿಗೆ ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿ ಅಪಾಯವಿದ್ದು, ಈ ಕಡೆ ಯಾರೂ ಓಡಾಡಬಾರದೆಂದು ಹನಗೋಡು ಹಾರಂಗಿ ಕಚೇರಿಯ ಎಇಇ ಕುಶುಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur-1

Hunsur: ತಂಬಾಕು ಬೆಳೆಗಾರರ ರಕ್ಷಣೆಗೆ ಬದ್ದ: ಸಂಸದ ಯದುವೀರ್ ಒಡೆಯರ್

ಮುಡಾ ಅಧ್ಯಕ್ಷ ಕೆ.ಮರಿಗೌಡ ತಲೆದಂಡ?

MUDA Chairman: ಕೆ.ಮರಿಗೌಡ ತಲೆದಂಡ? ಇಂದು ಅಥವಾ ನಾಳೆ ರಾಜೀನಾಮೆ ನೀಡುವ ಸಾಧ್ಯತೆ

Mysuru: ದೀಪಾಲಂಕಾರ ವಿಸ್ತರಣೆ: ವಾಹನ ಸಂಚಾರ ನಿರ್ಬಂಧವೂ ಮುಂದುವರಿಕೆ

Mysuru: ದೀಪಾಲಂಕಾರ ವಿಸ್ತರಣೆ: ವಾಹನ ಸಂಚಾರ ನಿರ್ಬಂಧವೂ ಮುಂದುವರಿಕೆ

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

Mysuru: ಮರಳಿ ಕಾಡಿನತ್ತ ಪ್ರಯಾಣ ಬೆಳೆಸಿದ ಗಜಪಡೆ

Mysuru: ಮರಳಿ ಕಾಡಿನತ್ತ ಪ್ರಯಾಣ ಬೆಳೆಸಿದ ಗಜಪಡೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.