“ಸ್ವಚ್ಚ ಕರ್ನಾಟಕ ನಿರ್ಮಾಣಕ್ಕೆ ಕಟಿಬದ್ಧ’
Team Udayavani, Aug 21, 2018, 6:00 AM IST
ಕೊಲ್ಲೂರು: ವಂಡ್ಸೆಯಲ್ಲಿ ಆರಂಭಗೊಂಡಿರುವ ಘನ, ದ್ರವ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆ ರಾಜ್ಯಕ್ಕೆ ಮಾದರಿ. ಗ್ರಾಮೀಣ ಪ್ರದೇಶಗಳಲ್ಲಿ ಈ ಒಂದು ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗುತ್ತಿದ್ದು ದೊಡ್ಡ ಗ್ರಾಮಗಳಿಗೆ ಇದು ಸವಾಲಾಗಿರಬಹುದು. ಅದಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಮಸ್ಥರ ಸಹಕಾರದೊಡನೆ ಶ್ರಮಿಸಿದಲ್ಲಿ ಯಶಸ್ಸು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ವಂಡ್ಸೆ ಗ್ರಾ.ಪಂ.ನಲ್ಲಿ ಆರಂಭಗೊಂಡಿರುವ ಎಸ್.ಎಲ್.ಆರ್.ಎಂ. ಘಟಕವನ್ನು ವೀಕ್ಷಿಸಲು ಆ. 20ರಂದು ಇಲ್ಲಿಗೆ ಆಗಮಿಸಿದ ಸಚಿವರು ಸುದ್ದಿಗಾರರೊಡನೆ ಮಾತನಾಡುತ್ತಾ ಈ ಭಾಗದಲ್ಲಿ ಬಹಳಷ್ಟು ಯಶಸ್ಸು ಕಂಡುಕೊಂಡಿರುವ ಈ ಯೋಜನೆಯ ಅನುಷ್ಠಾನ ಕ್ರಮ ಇತರ ಗ್ರಾ.ಪಂ.ಗಳಿಗೆ ಮಾದರಿಯಾಗಿದೆ ಎಂದರು.
ಸರಕಾರವು ರಾಜ್ಯದ ಎಲ್ಲ ಗ್ರಾಮಗಳಲ್ಲಿ ಎಸ್.ಎಲ್.ಆರ್.ಎಂ. ಘಟಕವನ್ನು ಆರಂಭಿಸುವ ಬಗ್ಗೆ ಕ್ರಮ ಕೈಗೊಳ್ಳುವುದು. ಕೇವಲ ಸರಕಾರದ ಅನುದಾನವನ್ನೇ ಅವಲಂಬಿಸದೇ ಈ ಒಂದು ಘಟಕದ ನಿರ್ವಹಣೆ ಯಿಂದ ಬರುವ ಆರ್ಥಿಕ ವ್ಯವಸ್ಥೆಯನ್ನು ಬಳಸಿದಲ್ಲಿ ಹೆಚ್ಚಿನ ಗುರಿ ಸಾಧನೆಗೆ ಸಾಧ್ಯ ಎಂದು ಸಚಿವರು ಹೇಳಿದರು.
ಕಸ ವಿಲೇವಾರಿಗೆ ಶಾಶ್ವತ ಪರಿಹಾರ: ಚಿಂತನೆ
ಕಸವನ್ನು ತೆಗೆದು ಸಂಪನ್ಮೂಲವಾಗಿಸುವುದರೊಡನೆ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಮೊದಮೊದಲು ಪೇಟೆಯ ಸಮಸ್ಯೆಯಾಗಿದ್ದ ಕಸ ವಿಲೇವಾರಿ ಈಗ ಗ್ರಾಮೀಣ ಪ್ರದೇಶಕ್ಕೂ ಚಾಚಿರುವುದರಿಂದ ಸಾರ್ವತ್ರಿಕವಾಗಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧ್ಯಯನ ನಡೆಸುತ್ತಿದ್ದು ವಂಡ್ಸೆ ಗ್ರಾ.ಪಂ.ನ ಈ ವ್ಯವಸ್ಥೆಯನ್ನು ವೀಕ್ಷಿಸುವುದರೊಡನೆ ಹೆಚ್ಚಿನ ಮಾಹಿತಿ ದೊರಕಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾದಿಕಾರಿ ಶಿವಾನಂದ ಕಾಪಸಿ, ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ನಿರ್ದೇಶಕರಾದ ಕೆಂಪೇಗೌಡ, ಭುವನಹಳ್ಳಿ ನಾಗರಾಜ, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡೆ°àಕರ್, ತಾ.ಪಂ. ಸದಸ್ಯ ಉದಯ ಜಿ. ಪೂಜಾರಿ, ಪಿಡಿಒ ಶಂಕರ ಆಚಾರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೊನ್ಸೆ, ಗ್ರಾ.ಪಂ. ಸದಸ್ಯರು, ರಾಜು ಪೂಜಾರಿ, ವಂಡಬಳ್ಳಿ ಜಯರಾಮ ಶೆಟ್ಟಿ, ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ
ಭಾರೀ ಗಾಳಿ ಮಳೆಯಿಂದ ತೆಂಕೊಡ್ಗಿಯಲ್ಲಿ ಗುಡ್ಡ ಕುಸಿದು ಜಖಂಗೊಂಡ ಮನೆಗೆ ಭೇಟಿ ನೀಡಿದ ಸಚಿವರು ಮಾಹಿತಿ ಸಂಗ್ರಹಿಸಿದರು.
ಮಾಹಿತಿ, ಸ್ಪಷ್ಟ ಚಿತ್ರಣ ಇಲ್ಲ
ರಾಜ್ಯದಲ್ಲಿ 45 ಲಕ್ಷ ಶೌಚಾಲಯ ನಿರ್ಮಿಸಲಾಗಿದ್ದು ಇನ್ನೂ 4 ಲಕ್ಷ ಶೌಚಾಲಯ ನಿರ್ಮಾಣ ಕಾರ್ಯ ಬಾಕಿ ಇದೆ. ಬಯಲು ಮುಕ್ತ ಶೌಚಾಲಯ ಜಿಲ್ಲೆಯಾಗಿರುವ ಉಡುಪಿಯನ್ನೇ ಆಧಾರವಾಗಿಟ್ಟು ಬಯಲು ಮುಕ್ತ ಶೌಚಾಲಯಗಳ ರಾಜ್ಯವಾಗಿಸುವಲ್ಲಿ ಪ್ರಯತ್ನಿಸಲಾಗುವುದು.
– ಕೃಷ್ಣ ಭೈರೇಗೌಡ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.