ಡ್ರೋಣ್ಗಾಗಿಯೇ ಪ್ರತ್ಯೇಕ ನೀತಿ?
Team Udayavani, Aug 21, 2018, 6:00 AM IST
ನವದೆಹಲಿ: ವಾಣಿಜ್ಯಿಕ ಸೇವೆಗಳಿಗೆ ಡ್ರೋಣ್ ಬಳಕೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆಗಳು ಇರುವಂತೆಯೇ ಕೇಂದ್ರ ಸರ್ಕಾರ ದೇಶದಲ್ಲಿ ಮುಂದಿನ ತಿಂಗಳು ಹೊಸ ನೀತಿ ಬಿಡುಗಡೆ ಮಾಡಲಿದೆ. ಅದರಲ್ಲಿ ಡ್ರೋಣ್ಗಳನ್ನು ಟ್ಯಾಕ್ಸಿಗಳಂತೆ ಬಳಕೆ, ಇ-ಕಾಮರ್ಸ್ ವೆಬ್ಸೈಟ್ಗಳ ಮೂಲಕ ಆರ್ಡರ್ ಮಾಡುವ ವಸ್ತುಗಳನ್ನು ಗ್ರಾಹಕರಿಗೆ ಅವುಗಳ ಪೂರೈಕೆ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಡ್ರೋಣ್ ಬಳಕೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.
ಈ ಬಗ್ಗೆ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದ್ದು, ಪ್ರಸ್ತಾವಿತ ನೀತಿಯಲ್ಲಿ ಡ್ರೋಣ್ಗಾಗಿಯೇ ಪ್ರತ್ಯೇಕ ಏರ್ ಟ್ರಾಫಿಕ್ ಕಂಟ್ರೋಲರ್, ಪ್ರತ್ಯೇಕ ಪಥ ರಚನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಕಳೆದ ನವೆಂಬರ್ನಲ್ಲಿ ಬಿಡುಗಡೆ ಮಾಡಲಾಗಿದ್ದ ಕರಡು ನಿಯಮದಲ್ಲಿ ವಿಮಾನ ನಿಲ್ದಾಣಗಳು ಮತ್ತು ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಅವುಗಳ ಹಾರಾಟಕ್ಕೆ ನಿಷೇಧ ಹೇರುವ ವಿಚಾರವಿತ್ತು. ಅಂತಿಮ ನೀತಿಯಲ್ಲಿ ಕೆಲ ನಿಯಮಗಳ ಮೂಲಕ ಅವುಗಳ ವಾಣಿಜ್ಯಿಕ ಬಳಕೆಗೆ ಅನುಮತಿ ನೀಡುವ ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು
Puja Khedkar: ಐಎಎಸ್ ಸೇವೆಯಿಂದ ಪೂಜಾ ಖೇಡ್ಕರ್ ವಜಾ; ಕೇಂದ್ರ ಆದೇಶ
ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ
Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ
Crime: ಸೈನೈಡ್ ಮಿಶ್ರಿತ ಜ್ಯೂಸ್ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್ ಅರೆಸ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.