ವಿನೇಶ್‌ ವಿಕ್ರಮ ಸ್ವರ್ಣ ಸಂಭ್ರಮ​​​​​​​


Team Udayavani, Aug 21, 2018, 6:00 AM IST

pti8202018000202b.jpg

ಜಕಾರ್ತಾ: ಹರ್ಯಾಣದ 23ರ ಹರೆಯದ ಕುಸ್ತಿಪಟು ವಿನೇಶ್‌ ಪೋಗಟ್‌ ನೂತನ ಇತಿಹಾಸ ಬರೆದಿದ್ದಾರೆ. ಏಶ್ಯಾಡ್‌ ವನಿತಾ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಸಾಧಕಿಯಾಗಿ ಮೂಡಿಬಂದಿದ್ದಾರೆ. ಸೋಮವಾರ ನಡೆದ 50 ಕೆಜಿ ಫ್ರೀಸ್ಟೈಲ್‌ ಸ್ಪರ್ಧೆಯ ಫೈನಲ್‌ನಲ್ಲಿ ಅವರು ಜಪಾನಿನ ಯುಕಿ ಐರಿ ವಿರುದ್ಧ 6-2 ಅಂತರದ ಜಯಭೇರಿ ಮೊಳಗಿಸಿದರು.

ಇದರೊಂದಿಗೆ ಜಕಾರ್ತಾ ಏಶ್ಯಾಡ್‌ನ‌ಲ್ಲಿ ಭಾರತದ ಈವರೆಗಿನ ಎರಡೂ ಸ್ವರ್ಣ ಪದಕಗಳು ಕುಸ್ತಿ ಸ್ಪರ್ಧೆಯಲ್ಲೇ ಲಭಿಸಿದಂತಾಯಿತು. ರವಿವಾರ ಭಜರಂಗ್‌ ಪೂನಿಯ ಬಂಗಾರದೊಂದಿಗೆ ಮಿನುಗಿದ್ದರು.

ವಿನೇಶ್‌ ಪ್ರಚಂಡ ಆರಂಭ
ವಿನೇಶ್‌ ಪೋಗಟ್‌ ಅವರ ಶ್ರೇಷ್ಠ ಸಾಧನೆ ದಾಖಲಾದದ್ದು ಸೆಮಿಫೈನಲ್‌ನಲ್ಲಿ. ಉಜ್ಬೆಕಿಸ್ಥಾನದ ದೌಲೆತ್‌ಬಿಕೆ ಯಕ್ಷಿಮುರತೋವಾ ವಿರುದ್ಧದ ಈ ಪಂದ್ಯವನ್ನು ವಿನೇಶ್‌ ಕೇವಲ 75 ಸೆಕೆಂಡ್‌ಗಳಲ್ಲಿ ಗೆದ್ದರು. 

ಚೀನದ ಯಾನನ್‌ ಸುನ್‌ ಅವರನ್ನು 8-2 ಅಂತರದಿಂದ ಮಣಿಸುವ ಮೂಲಕ ವಿನೇಶ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. 2 ವರ್ಷಗಳ ಹಿಂದಿನ ರಿಯೋ ಒಲಿಂಪಿಕ್ಸ್‌ನಲ್ಲಿ ಸುನ್‌ ವಿರುದ್ಧವೇ ವಿನೇಶ್‌ ಆಘಾತಕಾರಿ ಸೋಲನುಭವಿಸಿದ್ದರು. ಪಂದ್ಯದ ವೇಳೆ ಕಾಲಿನ ಗಂಭೀರ ನೋವಿಗೆ ಸಿಲುಕಿ ಸುದೀರ್ಘ‌ ವಿಶ್ರಾಂತಿ ಪಡೆಯುವಂತಾಗಿತ್ತು. ಈ ಎಲ್ಲ ನೋವನ್ನು ಸೋಮವಾರದ ಗೆಲುವಿನ ಮೂಲಕ ಮರೆತರು. ಕ್ವಾರ್ಟರ್‌ ಫೈನಲ್‌ನಲ್ಲಿ ವಿನೇಶ್‌ ದಕ್ಷಿಣ ಕೊರಿಯಾದ ಹ್ಯುಂಗ್‌ಜೂ ಕಿಮ್‌ ಅವರನ್ನು 11-0 ಅಂತರದಿಂದ ಬಗ್ಗುಬಡಿದರು.

ಇದು ಜಾಗತಿಕ ಸ್ಪರ್ಧೆಗಳಲ್ಲಿ ವಿನೇಶ್‌ ಜಯಿಸಿದ 3ನೇ ಸ್ವರ್ಣ ಪದಕ. ಕಳೆದೆರಡೂ ಕಾಮನ್ವೆಲ್ತ್‌ ಗೇಮ್ಸ್‌ಗಳಲ್ಲಿ ಅವರು ಬಂಗಾರದೊಂದಿಗೆ ಸಿಂಗಾರಗೊಂಡಿದ್ದರು (48 ಕೆಜಿ ಹಾಗೂ 50 ಕೆಜಿ ವಿಭಾಗ).

ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 4 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದ ಹಿರಿಮೆಯೂ ವಿನೇಶ್‌ ಅವರದ್ದಾಗಿದೆ.

ಸಾಕ್ಷಿ, ಪಿಂಕಿ, ಪೂಜಾ ವಿಫ‌ಲ
ವನಿತಾ ಕುಸ್ತಿಯಲ್ಲಿ ಭಾರತದ ಉಳಿದ ಸ್ಪರ್ಧಿಗಳು ನಿರಾಸೆ ಮೂಡಿಸಿದರು. 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪಿಂಕಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಪೂಜಾ ಧಂಡಾ (57 ಕೆಜಿ) ಸೆಮಿಯಲ್ಲಿ ಸೋತು ಕಂಚಿನ ಸ್ಪರ್ಧೆಯಲ್ಲೂ ಎಡವಿದರು. ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಸಾಕ್ಷಿ ಮಲಿಕ್‌ (62 ಕೆಜಿ) ಕಂಚಿನ ಸ್ಪರ್ಧೆಯಲ್ಲಿ ಉ. ಕೊರಿಯಾದ ರಿಮ್‌ ಜಾಂಗ್‌ ಸಿಮ್‌ ವಿರುದ್ಧ 12-2 ಆಘಾತಕಾರಿ ಸೋಲುಂಡರು.

ಸುಮಿತ್‌ ಮಲಿಕ್‌ ಪರಾಭವ
ಪುರುಷರ ವಿಭಾಗದ ಕೊನೆಯ ಫ್ರೀಸ್ಟೈಲ್‌ ಸ್ಪರ್ಧಿಯಾಗಿದ್ದ ಸುಮಿತ್‌ ಮಲಿಕ್‌ ಮೊದಲ ಸುತ್ತಿನಲ್ಲೇ ಇರಾನಿನ ಪರ್ವಿಜ್‌ ಹದಿಬಸ್ಮಾಂಜ್‌ ವಿರುದ್ಧ ಸೋತು ಹೊರಬಿದ್ದರು.

“ದಂಗಲ್‌’ ಚಿತ್ರದ ಮುಖ್ಯ ಭೂಮಿಕೆ ಯಲ್ಲಿದ್ದ “ಪೋಗಟ್‌ ಕುಟುಂಬ’ದ ಸದಸ್ಯೆಯಾದ ವಿನೇಶ್‌ ಪೋಗಟ್‌, ಸತತ 2 ಏಶ್ಯನ್‌ ಗೇಮ್ಸ್‌ಗಳಲ್ಲಿ 2 ಪದಕ ಗೆದ್ದ ಭಾರತದ ಮೊದಲ ವನಿತಾ ಕುಸ್ತಿಪಟು ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. 2014ರ ಏಶ್ಯಾಡ್‌ನ‌ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್‌  ಕಂಚು ಜಯಿಸಿದ್ದರು.

ಟಾಪ್ ನ್ಯೂಸ್

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Harman-Kuar

Womens Cricket: ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್‌

Pro-kabbaddi

Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಹವಾ

South-Affrica

Womens T20 World Cup: 6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ ಮಣಿಸಿ ಫೈನಲ್‌ಗೇರಿದ ದ.ಆಫ್ರಿಕಾ

1-wqewqew

Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.